ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Street Dog attack: ಬೆಂಗಳೂರಿನಲ್ಲಿ ಬೀದಿನಾಯಿಗಳ ಬರ್ಬರ ದಾಳಿಗೆ ವೃದ್ಧ ಬಲಿ

Bengaluru News: ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಓಡಲಾಗದೆ ಬಿದ್ದ ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ ಬೀದಿನಾಯಿಗಳ ಬರ್ಬರ ದಾಳಿಗೆ ವೃದ್ಧ ಬಲಿ

ಮೃತ ಸೀತಪ್ಪ

ಹರೀಶ್‌ ಕೇರ ಹರೀಶ್‌ ಕೇರ Jul 29, 2025 11:46 AM

ಬೆಂಗಳೂರು: ಬೆಂಗಳೂರಿನಲ್ಲಿ (Bengaluru News) ಬೀದಿ ನಾಯಿಗಳ ದಾಳಿಗಳು (Street Dog attack) ಹೆಚ್ಚು ಹೆಚ್ಚು ಮಾರಕವಾಗುತ್ತಿದ್ದು, ಇವುಗಳ ದಾಳಿಗೆ ಹಿರಿಯ ನಾಗರಿಕರೊಬ್ಬರು (Senior citizen) ಬಲಿಯಾಗಿದ್ದಾರೆ. 71 ವರ್ಷದ ಸೀತಪ್ಪ ಎನ್ನುವ ವೃದ್ಧರ ಮೇಲೆ ಬೀದಿನಾಯಿಗಳು ಬರ್ಬರವಾಗಿ ದಾಳಿಯೆಸಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು (death) ಸಾವನ್ನಪ್ಪಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಓಡಲಾಗದೆ ಬಿದ್ದ ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಕೊನೆಯುಸಿರೆಳೆದಿದ್ದಾರೆ.

ವಿಜಯಪುರದಲ್ಲಿ ಕಲುಷಿತ ನೀರು ಸೇವಿಸಿ 30 ಜನ ಅಸ್ವಸ್ಥ

ವಿಜಯಪುರ: ವಿಜಯಪುರದಲ್ಲಿ ವಿಪತ್ಕಾರಿ ಘಟನೆಯೊಂದು ನಡೆದಿದ್ದು, ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನಡುಗುಂದಿ ತಾಲೂಕಿನ ಬ್ಯಾಲಿಹಾಳ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಕುಡಿದು ಮೂವತ್ತಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ನಿಡಗುಂದಿ ತಾಲೂಕಿನ ಬ್ಯಾಲಿಹಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಸದ್ಯ 30 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಟೆಕ್ಕಿ ಮನೆಯಲ್ಲಿ 1 ಕೆಜಿ ಚಿನ್ನ, 4 ಲಕ್ಷ ಹಣ ಕಳ್ಳತನ; ದೂರು ದಾಖಲು

ಬೆಂಗಳೂರು: ಟೆಕ್ಕಿಯೊಬ್ಬರ ಮನೆಯಲ್ಲಿ 1 ಕೆಜಿ ಚಿನ್ನ, 4 ಲಕ್ಷ ರೂ. ನಗದು ಕಳ್ಳತನ (Theft Case) ಮಾಡಿರುವುದು ನಗರದ ಜ್ಞಾನಭಾರತಿಯ ಮಲ್ಲತ್ತಹಳ್ಳಿಯಲ್ಲಿ ನಡೆದಿದೆ. ಟೆಕ್ಕಿ ನಟೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಕಳೆದ ಶುಕ್ರವಾರ ನಟೇಶ್ ಅವರು ಮೈಸೂರಿಗೆ ತೆರಳಿದ್ದರು. ಬಳಿಕ ಶನಿವಾರ ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ 1 ಕೆ.ಜಿ ಚಿನ್ನ ಹಾಗೂ 4 ಲಕ್ಷ ರೂ. ನಗದು ಸೇರಿ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದು ಕಂಡುಬಂದಿದೆ.

ಈ ಸಂಬಂಧ ನಟೇಶ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: Physical Abuse: ಕುಟುಂಬ ವ್ಯಾಜ್ಯ ಪರಿಹರಿಸಲು ಬಂದ ಪೊಲೀಸ್‌ ಪೇದೆಯಿಂದ ಅತ್ಯಾಚಾರ, ಹಣ ಸುಲಿಗೆ: ದೂರು