ಬೆಂಗಳೂರು: 66/11 ಕೆ.ವಿ. ಯೆಲ್ಲಾರ್ ಬಂಡೆ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ. ಯೆಲ್ಲಾರ್ ಬಂಡೆ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಆ.19ರಂದು ಮಂಗಳವಾರ ಬೆಳಗ್ಗೆ 10.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎ.ಕೆ. ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ 1ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣ ಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ. ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿ ನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ, ಎಂ.ಎಸ್. ರಾಮಯ್ಯ ಉತ್ತರ ಸಿಟಿ, ತನಿಸಂದ್ರ ಮುಖ್ಯ ರಸ್ತೆ, ಆಶಿರ್ವಾದ್ ನಗರ, ಅಮರಜ್ಯೋತಿ ಲೇಔಟ್, ರಾಚೇನಹಳ್ಳಿ ಮುಖ್ಯ ರಸ್ತೆ, ರಾಯಲ್ ಎನ್‌ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಎಚ್.ಬಿ.ಸಿ.ಎಸ್ ಲೇಔಟ್ ವೀರಣ್ಣ ಪಾಳ್ಯ, ಜೋಜಪ್ಪ ಲೇಔಟ್, 17ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Festive Season Shopping 2025: ಶುರುವಾಯ್ತು ಗೌರಿ-ಗಣೇಶ ಹಬ್ಬದ ವೀಕೆಂಡ್ ಭರ್ಜರಿ ಶಾಪಿಂಗ್