ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Roads: ʼಹದಗೆಟ್ಟ ರಸ್ತೆಗಳು, ಧೂಳುʼ ಹಿನ್ನೆಲೆಯಲ್ಲಿ ಬೆಂಗಳೂರು ತೊರೆಯಲು ಮುಂದಾದ ಸ್ಟಾರ್ಟಪ್‌

Bengaluru Stratup: ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಈ ಕುರಿತು ʼಎಕ್ಸ್‌ʼನಲ್ಲಿ ಪೋಸ್ಟ್‌ ಹರಿಬಿಟ್ಟಿದ್ದಾರೆ. ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ. '

ಬೆಂಗಳೂರು: ಹದಗೆಟ್ಟಿರುವ ರಸ್ತೆಗಳು(bad roads), ಧೂಳು (dust) ಮತ್ತು ಸುದೀರ್ಘ ಪ್ರಯಾಣದ (commute time) ಸಮಯದ ಹಿನ್ನೆಲೆಯಲ್ಲಿ ತನ್ನ ಕಚೇರಿಯನ್ನು ನಗರದಿಂದ (bengaluru roads) ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಕಂಪನಿ (Startup company) ಬ್ಲ್ಯಾಕ್‌ಬಕ್ ತಿಳಿಸಿದೆ. ಈ ಕಂಪನಿಯ ಕಚೇರಿ ನಗರದ ಹೊರ ವರ್ತುಲ ರಸ್ತೆ (ORR) ಪ್ರದೇಶದಲ್ಲಿದೆ. ಕಳೆದ ಒಂಬತ್ತು ವರ್ಷಗಳಿಂದ ಔಟರ್ ರಿಂಗ್ ರೋಡ್‌ನಲ್ಲಿ ಬೆಳ್ಳಂದೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿ, ಹದಗೆಟ್ಟಿರುವ ರಸ್ತೆ ಮೂಲಸೌಕರ್ಯ ಉದ್ಯೋಗಿಗಳಿಗೆ ಕೆಲಸ ಮಾಡುವುದನ್ನು ಹೆಚ್ಚು ಕಷ್ಟಕರವಾಗಿಸಿದೆ ಎಂದು ಹೇಳಿದೆ.

ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಈ ಕುರಿತು ʼಎಕ್ಸ್‌ʼನಲ್ಲಿ ಪೋಸ್ಟ್‌ ಹರಿಬಿಟ್ಟಿದ್ದಾರೆ. ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ. 'ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ' ಎಂದು ಹೇಳಿದ್ದಾರೆ.

ಉದ್ಯೋಗಿಗಳಿಗೆ ಸರಾಸರಿ ಏಕಮುಖ ಪ್ರಯಾಣ 1.5 ಗಂಟೆಗಳಿಗೂ ಹೆಚ್ಚಾಗಿದ್ದು, ಉತ್ಪಾದಕತೆ ಮತ್ತು ಕೆಲಸ-ಜೀವನದ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಪ್ರದೇಶದ ನಾಗರಿಕರು ಮತ್ತು ಕಂಪನಿಗಳು ಪದೇ ಪದೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿವೆ. ಅವುಗಳನ್ನು ಸರಿಪಡಿಸುವ ಉದ್ದೇಶ ಕಾಣಿಸುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿಯೂ ಇದರಲ್ಲಿ ಯಾವುದೇ ಬದಲಾವಣೆ ಕಾಣುವ ಸಾಧ್ಯತೆ ಇಲ್ಲ. ಇದರಿಂದಾಗಿ ಬ್ಲ್ಯಾಕ್‌ಬಕ್ ಕಾರ್ಯಾಚರಣೆ ಸ್ಥಳವನ್ನು ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಯಬಾಜಿ ಹೇಳಿದ್ದಾರೆ.



ಈ ನಡುವೆ ನಿನ್ನೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಗರದ ಎಲ್ಲ ಹೊಂಡಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ನವೆಂಬರ್‌ ಗಡುವು ನೀಡಲಾಗಿದೆ, ಸ್ವಚ್ಛ ಬೆಂಗಳೂರು ಮತ್ತು ಸುಗಮ ಸಂಚಾರ ನಮ್ಮ ಗುರಿಯಾಗಿರುವುದರಿಂದ, ಜಿಬಿಎ ಸಾಧ್ಯವಾದಷ್ಟು ಬೇಗ ಗುಂಡಿಗಳ ಸಮಸ್ಯೆ ಪರಿಹರಿಸುತ್ತದೆ ಎಂದು 'ಎಕ್ಸ್' ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು, ಸೆಪ್ಟೆಂಬರ್ 14 ರಂದು ನಗರವು ರಸ್ತೆ ಅಭಿವೃದ್ಧಿಯಲ್ಲಿ ಪ್ರಮುಖ ಪ್ರಗತಿಗೆ ಸಿದ್ಧವಾಗಿದೆ. ದುರಸ್ತಿ ಮತ್ತು ನಿರ್ಮಾಣಕ್ಕಾಗಿ ರೂ 1,100 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದರು.

ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ನಗರ ಆಯುಕ್ತರು ನಿಯಮಿತವಾಗಿ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದರು. ಬೆಂಗಳೂರು ನಗರದ ಎಲ್ಲ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಪರಿಹರಿಸಲು ಆಗುವುದಿಲ್ಲ. ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ನಮ್ಮ ನಾಗರಿಕರು ಸಹ ಸಹಕರಿಸಬೇಕು. ಅವರು ತಮ್ಮ ಆಸ್ತಿಗಳನ್ನು ಘೋಷಿಸಬೇಕು. ನಿಯಮಿತವಾಗಿ ತೆರಿಗೆ ಪಾವತಿಸಬೇಕು ಮತ್ತು ಅವರಿಗೆ ಉತ್ತಮ ಆಡಳಿತ ಸಿಗುತ್ತದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: DK Shivakumar: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು

ಹರೀಶ್‌ ಕೇರ

View all posts by this author