ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Sugama Sangeetha Day: ಆ.31ರಂದು ಕಾಳಿಂಗರಾವ್ ಸ್ಮರಣಾರ್ಥ ʼವಿಶ್ವ ಸುಗಮ ಸಂಗೀತ ದಿನʼ ಆಯೋಜನೆ

P. Kalinga Rao: ಆಗಸ್ಟ್ 31 ಸುಗಮ ಸಂಗೀತ ಪಿತಾಮಹ ಕಾಳಿಂಗರಾವ್ ಅವರ ಹುಟ್ಟುಹಬ್ಬ. ಅವರಿಂದ ರೂಪ ಪಡೆದ ಈ ಪ್ರಕಾರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಲ್ಲಿದೆ. ಅವರ ಸ್ಮರಣಾರ್ಥ ಸುಗಮ ಸಂಗೀತ ಬಳಗದಿಂದ ʼವಿಶ್ವ ಸುಗಮ ಸಂಗೀತ ದಿನʼ ಆಯೋಜಿಸಲಾಗಿದೆ.

ಬೆಂಗಳೂರು: ಸುಗಮ ಸಂಗೀತ ಪಿತಾಮಹ ಪಿ. ಕಾಳಿಂಗರಾವ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ಸುಗಮ ಸಂಗೀತ ಬಳಗದಿಂದ 'ವಿಶ್ವ ಸುಗಮ ಸಂಗೀತ ದಿನ' (World Sugama Sangeetha Day) ಆಯೋಜಿಸಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಜಗತ್ತಿನ ವಿವಿಧೆಡೆಯ ಸಾವಿರಾರು ಗಾಯಕರು ಹಾಡಲಿದ್ದು, ಸುಗಮ ಸಂಗೀತದ ವಿಡಿಯೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಕಾಳಿಂಗರಾಯರನ್ನು ಸ್ಮರಿಸಲಿದ್ದಾರೆ.

ಆಗಸ್ಟ್ 31 ಸುಗಮ ಸಂಗೀತ ಪಿತಾಮಹ ಕಾಳಿಂಗರಾವ್ ಅವರ ಹುಟ್ಟುಹಬ್ಬ. ಅವರಿಂದ ರೂಪ ಪಡೆದ ಈ ಪ್ರಕಾರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಲ್ಲಿದೆ. ಕನ್ನಡ ಭಾಷೆಯ ಈ ಸಂಗೀತ ಪ್ರಕಾರವನ್ನು ಎಲ್ಲರೂ ಅಪ್ಪಿ ಪ್ರೋತ್ಸಾಹಿಸಿದ್ದಾರೆ. ಇಷ್ಟೊಂದು ಪ್ರಸಿದ್ಧಿಗೆ ಬಂದಿರುವ ಸುಗಮ ಸಂಗೀತಕ್ಕೆ ಒಂದು ವಿಶೇಷ ದಿನವನ್ನು ಮಾಡುವುದಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು, ಸಂಗೀತ ಶಾಲೆಗಳು ಎಲ್ಲರೂ ಸೇರಿ ಆಗಸ್ಟ್ 31ರಂದು 'ವಿಶ್ವ ಸುಗಮ ಸಂಗೀತ ದಿನ'ವನ್ನು ಆಚರಿಸಿ ಕಾಳಿಂಗರಾಯರನ್ನು ಸ್ಮರಿಸಲಿದ್ದಾರೆ. ಅಂದು ಸಾವಿರಾರು ಗಾಯಕರು ವಿಶ್ವದಾದ್ಯಂತ ಹಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಹಾಡಿ ಪೋಸ್ಟ್ ಮಾಡಲಿದ್ದಾರೆ. ಈ ಅರ್ಥಪೂರ್ಣ ಅಭಿಯಾನದಲ್ಲಿ ಆಸಕ್ತ ಕಲಾವಿದರು ಭಾಗಿಯಾಗಿ ಪ್ರೋತ್ಸಾಹಿಸಬೇಕು ಎಂದು ಸುಗಮ ಸಂಗೀತ ಬಳಗದ ಸಂಘಟನಾ ಸೇವಕರಾದ ಉಪಾಸನಾ ಮೋಹನ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂಸ್ಥೆಗಳು:

  • ಉಪಾಸನಾ ಟ್ರಸ್ಟ್ (ಉಪಾಸನಾ ಮೋಹನ್)
  • ಸೃಜನ ಸಾಂಸ್ಕೃತಿಕ ಸಮೂಹ (ನರಹರಿ ದೀಕ್ಷಿತ್)
  • ಆಲಾಪನಾ ಕಲಾ ಸಂಸ್ಥೆ (ಮಂಗಳಾರವಿ - ಮೀರಾ ಬಿ.ಎಸ್)
  • ಪ್ರಣತಿ ಪ್ರತಿಷ್ಠಾನ (ರಿ) (ಎಸ್. ಆರ್. ರಾಘವೇಂದ್ರರಾವ್)
  • ಗಾನಸಂಭ್ರಮ ಟ್ರಸ್ಟ್ (ರಿ) (ಪಂಚಮ್ ಹಳಿಬಂಡಿ)
  • ಶರಣ್ಸ್ ಮ್ಯೂಸಿಕ್ ಅಕಾಡೆಮಿ (ಶರಣ್ ಚೌಧರಿ)
  • ಜೋಯಿಸ್ ಕಲಾಕೇಂದ್ರ (ದೀಪಶ್ರೀ ಜೋಯಿಸ್)
  • ಆರೋಹಣ ಸಂಸ್ಥೆ (ರಾಜೇಶ್ ಆರ್. ಶ್ಯಾನುಭೋಗ್)
  • ನಿನಾದ ಸಂಸ್ಕೃತಿ ಕಲಾಕೇಂದ್ರ (ಹರೀಶ್ ನರಸಿಂಹ)
  • ನಾದಸಿರಿ ಸುಗಮಸಂಗೀತ ಬಳಗ, ಶೃಂಗೇರಿ (ಗಣೇಶ್ ಪ್ರಸಾದ್)
  • ಪೂರ್ವಿ ಸುಗಮಸಂಗೀತ ಅಕಾಡೆಮಿ ಟ್ರಸ್ಟ್, ಚಿಕ್ಕಮಗಳೂರು (ಎಂ.ಎಸ್. ಸುಧೀರ್)
  • ವಿಕಸನಾ ಟ್ರಸ್ಟ್ (ಅಪರ್ಣಾ ನರೇಂದ್ರ )
  • ಲಯಲಾಸ್ಯ ಕಲ್ಚರಲ್ ಅಕಾಡೆಮಿ (ರಿ) (ಶ್ಲಾಘ್ಯ ವಸಿಷ್ಠ)
  • ಭಾವಾಲಯ ಟ್ರಸ್ಟ್, ತುಮಕೂರು (ರೂಪಾ ನಾಗೇಂದ್ರ)
  • ರವಿರಾಜ್ ಎಸ್. ಹಾಸು ಶ್ರೀಗುರು ಸಂಗೀತ ಪಾಠಶಾಲೆ
  • ಸುರಾಗ ಟ್ರಸ್ಟ್, ಚನ್ನರಾಯಪಟ್ಟಣ (ಮಂಜು ಮಟ್ಟನವಿಲೆ)
  • ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಕಲಾಮಂದಿರ, ಕೊಪ್ಪ (ಶ್ರೀನಿಧಿ ಕೊಪ್ಪ)
  • ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್, ಮೈಸೂರು (ನಿತಿನ್ ರಾಜಾರಾಂ ಶಾಸ್ತ್ರಿ)
  • ರಂಗಸಂಸ್ಥಾನ ಸಂಸ್ಥೆ (ಬಂಡ್ಲಳ್ಳಿ ವಿಜಯಕುಮಾರ್)
  • ಭಾವೋಪಾಸನಾ ಬಳಗ, ಸಿಂಗಪುರ (ವೆಂಕಟೇಶ್ ಗದ್ದೆಮನೆ)
  • ಸವಿಗಾನಲಹರಿ ಸುಗಮಸಂಗೀತ ಶಾಲೆ (ಟಿ. ರಾಜಾರಾಮ್)
  • ಶರಧಿ ಸುಗಮಸಂಗೀತ ಶಾಲೆ(ರಿ) (ಜೋಗಿ ಸುನೀತಾ)
  • ಸುರಾಘವಿ ಫೌಂಡೇಷನ್ (ಸುಪ್ರಿಯಾ ಆಚಾರ್ಯ)
  • ಸಂಗಮ ಸಂಗೀತ ಬಳಗ, ವಿಜಯಪುರ (ಶ್ರೀಕಾಂತ್ ಕೋಟಿ)
  • ಸಪ್ತಸ್ವರ ಸಂಗೀತ ವಿದ್ಯಾಲಯ (ರಿ) (ಗೀತಾ ಸತ್ಯಮೂರ್ತಿ)
  • ಗಾನಸಿರಿ ಟ್ರಸ್ಟ್ (ರಿ) (ಪ್ರಭಾ ಜೆ.ಇನಾಂದಾರ್)
  • ಪೂರ್ವಿ ಸಂಗೀತ ಅಕಾಡೆಮಿ (ಪ್ರದೀಪ್ ಹಿರೇಮಗಳೂರು)
  • ಸಂಮೃದ್ಧಿ ಸಂಗೀತ ಶಾಲೆ (ಮಂಜುಳಾ)

ಈ ಸುದ್ದಿಯನ್ನೂ ಓದಿ | Roopa Gururaj Column: ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ