ಬೆಂಗಳೂರು: ನಗರದ ಎಂಪೈರ್ ಹೋಟೆಲ್‌ನಲ್ಲಿ ಕಬಾಬ್ ಅಸುರಕ್ಷಿತ ಎಂದು ವರದಿ ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಆಹಾರ ಸುರಕ್ಷತಾಧಿಕಾರಿಯಿಂದ ರೆಸ್ಟೋರೆಂಟ್‌ಗೆ (Empire Restaurant) ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಷ್ಠಿತ ಹೋಟೆಲ್‌ನಲ್ಲಿನ ಕಬಾಬ್ ಅಸುರಕ್ಷಿತ ಎಂದು ಪ್ರಯೋಗಾಲಯದ ವರದಿಯ್ಲಲ್ಲಿ ದೃಢಪಟ್ಟಿದ್ದು, ಬೆಂಗಳೂರಿನ ಶಿವಾಜಿನಗರ, ಗಾಂಧಿನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಹೆಬ್ಬಾಳ ರೆಸ್ಟೋರೆಂಟ್‌ನಲ್ಲಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.
ಕಬಾಬ್ ಮಾದರಿ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಎಂಪೈರ್ ರೆಸ್ಟೋರೆಂಟ್‌ಗೆ ಆಹಾರ ಸುರಕ್ಷತಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಬಂಧನೆ 2011 ರ 2.4.1 (iii) ರಂತೆ ಆಹಾರ ಮಾರಾಟಗಾರರಾದ ನೀವು CFTRI, Mysore ಪ್ರಯೋಗಾಲಯದಲ್ಲಿ ಎರಡನೇ ಭಾಗದ ಆಹಾರ ಮಾದರಿಯನ್ನು ಪರೀಕ್ಷಿಸಲು ಇಚ್ಛಿಸಿದಲ್ಲಿ, ಪರೀಕ್ಷಾ ವೆಚ್ಚವನ್ನು ತಾವೇ ಭರಿಸಿ ಪರೀಕ್ಷೆ ಮಾಡಿಸಬೇಕು. ಈ ಪತ್ರ ತಲುಪಿದ 30 ದಿನಗಳ ಒಳಗಾಗಿ ಕಚೇರಿಗೆ ಮನವಿ ಸಲ್ಲಿಸಲು ತಿಳಿಸಿದೆ. 30 ದಿನಗಳ ಒಳಗಾಗಿ ತಮ್ಮಿಂದ ಯಾವುದೇ ಉತ್ತರ ಬರದಿದ್ದಲ್ಲಿ, FSSAI ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಹೋಟೆಲ್‌ಗೆ ಎಚ್ಚರಿಕೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ | Terrorist Attack: ನ್ಯಾಯಲಯದ ಮೇಲೆ ಭಯೋತ್ಪಾದಕ ದಾಳಿ; ಕನಿಷ್ಠ 8 ಮಂದಿ ಸಾವು
ಕಾಟನ್ ಕ್ಯಾಂಡಿ ಅಥವಾ ಬಾಂಬೆ ಮಿಠಾಯಿಯನ್ನು ನಿಷೇಧಿಸಿದ ನಂತರ ರಾಜ್ಯ ಸರಕಾರ ಇತ್ತೀಚೆಗೆ ಕಬಾಬ್‌ಗೆ ಬೆರೆಸುವ ಕೃತಕ ಬಣ್ಣವನ್ನು (ಸನ್‌ಸೆಟ್ ಯೆಲ್ಲೋ) ನಿಷೇಧಿಸಿ ಆದೇಶ ಹೊರಡಿಸಿತ್ತು. ಬಹುತೇಕ ಮಾಂಸಾಹಾರಿ ಪ್ರಿಯರಿಗೆ ಇಷ್ಟವಾಗುವ ಕಬಾಬ್‌ಗೆ ಕೃತಕ ಬಣ್ಣಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಬೀದಿ ಬದಿಯ ತಳ್ಳುವ ಗಾಡಿಗಳಿಂದ ಹಿಡಿದು ಪಂಚಾತಾರಾ ಹೋಟೆಲ್ ವರೆಗೆ ಯಾವುದೇ ರೀತಿಯ ಹೋಟೆಲ್ ಗಳಲ್ಲಿ ಕೃತಕ ಬಣ್ಣವನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣವವನ್ನು ಬಳಸಿ ಕಬಾಬ್ ತಯಾರಿಸಿದರೆ ಕಾನೂನು ಪ್ರಕಾರ 7 ವರ್ಷ ಅಥವಾ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ.ಗಳ ದಂಡವನ್ನು ವಿಧಿಸಲು ಅವಕಾಶ ಇದೆ.