ಸಂದರ್ಶನ: ಶೀಲಾ ಸಿ. ಶೆಟ್ಟಿ
ಫ್ಯಾಷನ್ ಪ್ರೇಮಿಗಳಿಗೆ ಮಲ್ಟಿ ಟ್ಯಾಲೆಂಟೆಡ್ ಹಾಗೂ ಫ್ಯಾಷನ್ ಐಕಾನ್ ಸುಶಾಂತ್ ದಿವ್ಗಿಕರ್ (Sushant Divgikr) ತೀರಾ ಪರಿಚಿತ ಹೆಸರು. ತನ್ನದೇ ಆದ ಸಿರಿ ಕಂಠದ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮ್ಯೂಸಿಕಲ್ ಪ್ರೋಗ್ರಾಂಗಳ ಮೂಲಕ ಹೆಸರು ಮಾಡಿದವರು. ಟ್ರಾನ್ಸ್‌ಜೆಂಡರ್ ಬಳಗದಲ್ಲಿ ಫ್ಯಾಷನ್ ಐಕಾನ್ ಎಂದೇ ಗುರುತಿಸಿಕೊಂಡವರು. ಅಂದಹಾಗೆ, ಉದ್ಯಾನನಗರಿಯಲ್ಲಿ ನಡೆದ ಇಂಡಿಯಾ ಫ್ಯಾಷನ್ ಐಕಾನ್ ಶೋನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಸುಶಾಂತ್ ಸುಶಾಂತ್ ದಿವ್ಗಿಕರ್ (Celebrity Interview) ಕಾರ್ಯಕ್ರಮದ ಕೊನೆಯಲ್ಲಿ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದರು. ತಮ್ಮ ಲೈಫ್‌ಸ್ಟೈಲ್ ಕುರಿತಂತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.

ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್ ಏನು?
ಸುಶಾಂತ್ ದಿವ್ಗಿಕರ್: ಸದಾ ಡಿಫರೆಂಟ್ ಆಗಿ ಕಾಣಿಸುವ ಫ್ಯಾಷನ್ ನನ್ನದು. ಯಾರನ್ನೂ ನಾನು ಫಾಲೋ ಮಾಡುವುದಿಲ್ಲ! ಹಾಗಾಗಿ ಬ್ಯೂಟಿಫುಲ್ ಆಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತೇನೆ.
ವಿಶ್ವವಾಣಿ ನ್ಯೂಸ್: ಉದ್ಯಾನನಗರಿಯ ಬಗ್ಗೆ ನಿಮಗಿರುವ ಅಭಿಪ್ರಾಯವೇನು?
ಸುಶಾಂತ್ ದಿವ್ಗಿಕರ್: ನಮ್ಮಮ್ಮ ಮೂಲತಃ ಕರ್ನಾಟಕದವರು. ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಹಾಗಾಗಿ ನನಗೂ ಇಲ್ಲಿಯ ಕನೆಕ್ಷನ್ ಚೆನ್ನಾಗಿಯೇ ಇದೆ. ಹಾಗಾಗಿ ಬೆಂಗಳೂರು ನನಗಿಷ್ಟವಾದ ಸಿಟಿ!

ವಿಶ್ವವಾಣಿ ನ್ಯೂಸ್: ಕನ್ನಡದಲ್ಲಿ ಒಂದಿಷ್ಟು ಮಾತನಾಡಬಲ್ಲಿರಾ?
ಸುಶಾಂತ್ ದಿವ್ಗಿಕರ್: ಖಂಡಿತಾ! ನಮಸ್ಕಾರ, ಚೆನ್ನಾಗಿದ್ದೀರಾ? ಒಂದ್‌ನಿಮಿಷ? ಏನಾಯ್ತು! ಹೀಗೆ ಒಂದಿಷ್ಟು ಸರಳವಾದ ಪದಗಳು ಮಾತನಾಡಲು ಬರುತ್ತದೆ. ಅಮ್ಮನಿಂದ ಕಲಿತಿದ್ದೇನೆ. ವೆರಿ ಸ್ವೀಟ್ ಲಾಂಗ್ವೇಜ್!
ವಿಶ್ವವಾಣಿ ನ್ಯೂಸ್: ನಿಮ್ಮಲ್ಲಿ ಬದಲಾಗದ ಸಂಗತಿ?
ಸುಶಾಂತ್ ದಿವ್ಗಿಕರ್: ನಾನು ನೀಡುವ ಮ್ಯೂಸಿಕಲ್ ಪ್ರೋಗ್ರಾಂಗಳಲ್ಲಿ ಗಂಡು-ಹೆಣ್ಣು ಎರಡು ವಾಯ್ಸ್‌ಗಳಲ್ಲಿ ಹಾಡುತ್ತೇನೆ. ಇದು ನನ್ನ ಬದಲಾಗದ ಟ್ಯಾಲೆಂಟ್ ಎನ್ನಬಹುದು.
ವಿಶ್ವವಾಣಿ ನ್ಯೂಸ್: ಇಂಡಿಯಾ ಫ್ಯಾಷನ್ ಐಕಾನ್ ಬಗ್ಗೆ ಏನನ್ನು ಹೇಳಲು ಬಯಸುವಿರಿ?
ಸುಶಾಂತ್ ದಿವ್ಗಿಕರ್: ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಇದು ಶ್ಲಾಘನೀಯ ವಿಚಾರ.

ವಿಶ್ವವಾಣಿ ನ್ಯೂಸ್: ಬೆಂಗಳೂರು ಫ್ಯಾಷನ್ ಲೋಕದ ಬಗ್ಗೆ ನಿಮಗೇನು ಗೊತ್ತು?
ಸುಶಾಂತ್ ದಿವ್ಗಿಕರ್: ಮುಂಬಯಿ, ದಿಲ್ಲಿಯ ನಂತರ ಬೆಂಗಳೂರು ಫ್ಯಾಷನ್ ಲೋಕ ಸಾಕಷ್ಟು ಮುನ್ನೆಡೆಯುತ್ತಿದೆ.
ವಿಶ್ವವಾಣಿ ನ್ಯೂಸ್: ಸಿಂಗರ್ ಜತೆ ಫ್ಯಾಷನ್ ಐಕಾನ್ ಆಗಿರುವ ನೀವು ಫ್ಯಾಷನ್ ಪ್ರಿಯರಿಗೆ ನೀಡುವ 3 ಸಲಹೆಗಳೇನು?
ಸುಶಾಂತ್ ದಿವ್ಗಿಕರ್:
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡಿ.
- ಸದಾ ನಿಮ್ಮನ್ನು ನೀವು ಪ್ರೀತಿಸಿ, ಸಿಂಗರಿಸಿಕೊಳ್ಳಿ.
- ನಿಮ್ಮ ವ್ಯಕ್ತಿತ್ವ ನಿಮ್ಮ ಐಡೆಂಟಿಟಿಯಾಗಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಗಳ ಹಂಗಾಮ!