ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಗಣೇಶ ಚತುರ್ಥಿಯಂದೇ ದುರಂತ; ಹಬ್ಬಕ್ಕೆ ಕರೆಯಲು ತವರು ಮನೆಯವರಿಲ್ಲವೆಂದು ಗೃಹಿಣಿ ಆತ್ಮಹತ್ಯೆ

Chamarajanagar News: ಗೌರಿ ಗಣೇಶ ಹಬ್ಬಕ್ಕೆ ಕರೆಯಲು ತವರು ಮನೆಯವರಿಲ್ಲವೆಂದು ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಆರುವನಪುರ ಬಡಾವಣೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಶ್ಮಿ (32) ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ

ಚಾಮರಾಜನಗರ: ಯಾವುದೇ ಹಬ್ಬವಿರಲಿ ಮದುವೆಯಾದ ಮಗಳನ್ನು ತಂದೆ-ತಾಯಿ ತವರು ಮನೆಗೆ ಆಹ್ವಾನಿಸುವುದು ವಾಡಿಕೆ. ಆದರೆ ಗೌರಿ ಗಣೇಶ ಹಬ್ಬಕ್ಕೆ ಕರೆಯಲು ತವರು ಮನೆಯವರಿಲ್ಲವೆಂದು ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ (Self Harming) ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಆರುವನಪುರ ಬಡಾವಣೆಯಲ್ಲಿ ನಡೆದಿದೆ (Chamarajanagar News). ಗಣಪತಿ ಚತುರ್ಥಿಯಂದೇ (ಆಗಸ್ಟ್‌ 27) ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಮಹಿಳೆಯನ್ನು ರಶ್ಮಿ (32) ಎಂದು ಗುರುತಿಸಲಾಗಿದೆ.

ಆರುವನಪುರ ಬಡಾವಣೆಯ ಸಿದ್ದರಾಜು ಎಂಬುವವರ ರಶ್ಮಿ ಮದುವೆಯಾಗಿದ್ದರು. ರಶ್ಮಿಯ ತಂದೆ, ತಾಯಿ ಹಾಗೂ ಅಣ್ಣ ಈ ಹಿಂದೆಯೇ ಮೃತಪಟ್ಟಿದ್ದರಿಂದ, ಈ ಬಾರಿಯ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ತವರು ಮನೆಗೆ ಕರೆಯಲು ಯಾರೂ ಇರಲಿಲ್ಲ. ಇದರಿಂದ ರಶ್ಮಿ ತೀವ್ರವಾಗಿ ಮನನೊಂದಿದ್ದರು. ಅಭದ್ರತೆಯಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು ಎನ್ನಲಾಗಿದೆ.

ಹಬ್ಬದ ದಿನದಂದು ರಶ್ಮಿ ತಮ್ಮ ಮನೆಯಲ್ಲಿ ಗಣಪತಿ ಪೂಜೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಜೀವನವನ್ನೇ ಮುಗಿಸಿಕೊಂಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Dharmasthala Case: ಚಿನ್ನಯ್ಯನನ್ನು ಎ1 ಆರೋಪಿಯಾಗಿಸಿ ಹೊಸ ದೂರುಗಳು ದಾಖಲು, ಸಂಚುಕೋರರಿಗೂ ಸಂಕಷ್ಟ

ಗರ್ಭಿಣಿ ಟೆಕ್ಕಿಯ ಅಸಹಜ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಒಂದೂವರೆ ತಿಂಗಳ ಗರ್ಭಿಣಿ ಟೆಕ್ಕಿ ಅಸಹಜ ಸಾವಿಗೆ ತುತ್ತಾಗಿದ್ದಾರೆ. ಹುಬ್ಬಳ್ಳಿ ಮೂಲದ ಶಿಲ್ಪಾ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ಪ್ರವೀಣ್ ಎಂಬವರ ಜತೆಗೆ ಶಿಲ್ಪಾ ಮದುವೆಯಾಗಿದ್ದರು. ಪತಿ- ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಇದು ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ ಎಂದು ಶಿಲ್ಪಾ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಶಿಲ್ಪಾ ಕೊಲೆಯ ಬಗ್ಗೆ ಆಕೆಯ ಪತಿ ಪ್ರವೀಣ್, ಅತ್ತೆ ಶಾಂತ ಹಾಗೂ ನಾದಿನಿ ಪ್ರಿಯ ವಿರುದ್ಧ ಶಿಲ್ಪಾ ಪೋಷಕರು ದೂರಿದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಶಿಲ್ಪಾ ಹಾಗೂ ಪತಿ ಮನೆಯವರ ನಡುವೆ ಜಗಳ ನಡೆದು, ಶಿಲ್ಪಾ ತವರು ಮನೆಗೆ ಬಂದಿದ್ದರು. ಪತಿ ಮನೆಯವರು ರಾಜಿ ಪಂಚಾಯ್ತಿ ಮಾಡಿ ಮತ್ತೆ ಗಂಡನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಗಸ್ಟ್‌ 27ರಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ದಂಪತಿಗೆ ಈಗಾಗಲೇ ಒಂದು ಮಗುವಿದೆ. ಘಟನೆ ಕುರಿತು ಎಸ್.ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.