ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು: ಜೋಶಿ

Pralhad Joshi: ಧರ್ಮಸ್ಥಳದಲ್ಲಿ ಮುಸುಕುಧಾರಿ ಬೆರಳು ತೋರಿದಲ್ಲೆಲ್ಲಾ ಅಗೆದು ಏನೂ ಸಿಗದಾದ ಬಳಿಕ ಸರ್ಕಾರದವರು ಈಗ ʼಷಡ್ಯಂತ್ರʼ ರಾಗ ಎಳೆಯುತ್ತಿದ್ದಾರೆ. ಜನರ ನಂಬಿಕೆಯ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

ಅವ್ಯವಸ್ಥೆ ಸೃಷ್ಟಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Aug 18, 2025 9:51 PM

ನವದೆಹಲಿ: ʼಧರ್ಮಸ್ಥಳ ಪ್ರಹಸನʼ ದಲ್ಲಿನ ಷಡ್ಯಂತರಿಗಳ ಹೆಸರು ಬಹಿರಂಗಪಡಿಸಬೇಕು ಮತ್ತು ಸರ್ಕಾರದ ನಡೆ ಬಗ್ಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆಗ್ರಹಿಸಿದ್ದಾರೆ. ʼಕೆಲ ನಿರ್ದೇಶನಗಳ ಮೇಲೆ ಕಾರ್ಯ ನಿರ್ವಹಿಸಿದೆʼ ಎಂದು ಸ್ವತಃ ಮುಸುಕುಧಾರಿಯೇ ಈಗ ಹೇಳಿಕೆ ನೀಡಿದ್ದಾನೆ. ಆರಂಭದಲ್ಲೇ ಈ ಅನಾಮಿಕನ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೇ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಅನಾಮಿಕ ಮುಸುಕುಧಾರಿ ನೂರಾರು ಹೆಣ, ಕೊಲೆ-ಅತ್ಯಾಚಾರಕ್ಕೆ ಒಳಗಾದವರ ಶವ ಹೂತಿದ್ದೇನೆ ಎಂದಾಗಲೇ ಸರಿಯಾಗಿ ಆತನ ವಿಚಾರಣೆ ನಡೆಸಬೇಕಿತ್ತು ಮತ್ತು ಆತನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅದ್ಯಾವುದನ್ನೂ ಮಾಡದೇ ಆತನ ತಾಳಕ್ಕೆ ಕುಣಿದಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರವೇ ಹೊಣೆ

ಧರ್ಮಸ್ಥಳದಲ್ಲಿ ಮುಸುಕುಧಾರಿ ಬೆರಳು ತೋರಿದಲ್ಲೆಲ್ಲಾ ಅಗೆದು ಏನೂ ಸಿಗದಾದ ಬಳಿಕ ಸರ್ಕಾರದವರು ಈಗ ʼಷಡ್ಯಂತರʼ ರಾಗ ಎಳೆಯುತ್ತಿದ್ದಾರೆ. ಜನರ ನಂಬಿಕೆಯ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ ಹೊರಬೇಕೆಂದು ಆಗ್ರಹಿಸಿದರು.

ಧರ್ಮಸ್ಥಳ ಪ್ರಹಸನದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೂ ಬೇಜವಾಬ್ದಾರಿತನ ಪ್ರದರ್ಶಿಸಿತು. ಆರೋಪಿ ದೂರು ನೀಡಿದಾಕ್ಷಣ ಪೂರ್ವಾಪರ ಆಲೋಚಿಸದೆ ಕೇವಲ ಪ್ರಚಾರಕ್ಕಾಗಿ ತರಾತುರಿಯಲ್ಲಿ ಎಸ್‌ಐಟಿ ರಚಿಸಿತು. ಅಗೆತ ಕಾರ್ಯಾಚರಣೆ ಶುರುವಿಟ್ಟುಕೊಂಡಿತು. ಇದೆಲ್ಲದರ ಪರಿಣಾಮ ಇಂದು ಧರ್ಮಸ್ಥಳದಲ್ಲಿ ಮಾತ್ರವಲ್ಲ; ಸಮಾಜದಲ್ಲೇ ಒಂದು ರೀತಿ ಅವ್ಯವಸ್ಥೆ ಸೃಷ್ಟಿಯಾಗಿದೆ ಎಂದು ಸಚಿವ ಜೋಶಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ, ಮುಖವಾಡ ಧರಿಸಿರುವ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸುವ ಸರಳ ಕ್ರಮಕ್ಕೆ ಮುಂದಾಗಬೇಕಿತ್ತು. ಆ ಮಾಸ್ಕ್ ಮ್ಯಾನ್ ಹೇಳಿದ್ದು ಸತ್ಯವಿದ್ದಿದ್ದರೆ ಸಂಪೂರ್ಣ ಪೊಲೀಸ್‌ ತನಿಖೆ ನಡೆಸಿ ನಂತರ ಅವಶ್ಯಕತೆ ಇದ್ದಿದ್ದರೆ SIT ರಚಿಸಿ ತನಿಖೆಗೆ ವಹಿಸಬಹುದಿತ್ತು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಆದರೆ, ಸರ್ಕಾರ ಅವಶ್ಯಕತೆ ಬದಲು ಅವಕಾಶಕ್ಕಾಗಿ ಕಾದು ತರಾತುರಿಯಲ್ಲಿ ಎಸ್‌ಐಟಿ ರಚಿಸಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಎಡಪಂಥೀಯ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಇದರಿಂದ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂದು ಅವರು ದೂರಿದ್ದಾರೆ.‌ ರಾಜ್ಯ ಸರ್ಕಾರ ಈಗಲಾದರೂ ಸರಿಯಾದ ತನಿಖೆ ನಡೆಸಿ ಷಡ್ಯಂತರದಲ್ಲಿ ಭಾಗಿಯಾದವರ ಎಲ್ಲರ ಹೆಸರನ್ನು ಬಹಿರಂಗಪಡಿಸಬೇಕು ಹಾಗೂ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.