ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kabaddi Tournament: ಮಂಚನಬಲೆಯಲ್ಲಿ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾವಳಿ

ಕಬಡ್ಡಿ ಭಾರತದಲ್ಲಿ ಹುಟ್ಟಿ, ವಿಶ್ವಮಟ್ಟದಲ್ಲಿ ಪಸರಿಸಿದೆ. ಭಾರತವು ನಾಲ್ಕು ಬಾರಿ ಕಬಡ್ಡಿಯಲ್ಲಿ ವಿಶ್ವಚಾಂಪಿಯನ್ ಆಗಿದೆ. ಕರ್ನಾಟಕದಿಂದ ಡಿ.ಸಿ.ರಮೇಶ್, ಸುರೇಶ್, ಮುನಿವೆಂಕಟ, ಮಮತಾ ಪೂಜಾರಿ, ಹೇಮಾವತಿ, ಶೋಭಾ ರಾಣಿ ಭಾರತ ತಂಡದ ಪರವಾಗಿ ಆಟವಾಡಿ ಉತ್ತಮ ಪ್ರದರ್ಶನ ನೀಡಿದ್ದಾರೆ

ಮಂಚನಬಲೆಯಲ್ಲಿ ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾವಳಿ

ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಂತರ್‌ಜಿಲ್ಲಾ ಕಬಡ್ಡಿ ಪಂದ್ಯಾವಳಿ ನಡೆಯಿತು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ೪೦ ತಂಡ ಭಾಗವಹಿಸಿದ್ದವು.

Ashok Nayak Ashok Nayak Aug 18, 2025 11:16 PM

ಚಿಕ್ಕಬಳ್ಳಾಪುರ : ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಂತರ್‌ಜಿಲ್ಲಾ ಕಬಡ್ಡಿ ಪಂದ್ಯಾವಳಿ ನಡೆಯಿತು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ೪೦ ತಂಡ ಭಾಗವಹಿಸಿದ್ದವು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಹಾಗೂ ರಾಜ್ಯ ಅಧ್ಲೆಟಿಕ್ ಸಂಸ್ಥೆ ಜಂಟಿ ಕಾರ್ಯದರ್ಶಿ ಮಂಚನಬಲೆ ಕ್ರೀಡಾಕೂಟ ಶ್ರೀನಿವಾಸ್ ಉದ್ಘಾಟಿಸಿದರು.

ಇದನ್ನೂ ಓದಿ: Sports: ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ

ಎನ್.ಶಿವರಾಮರೆಡ್ಡಿ ಮಾತನಾಡಿ, ಕಬಡ್ಡಿ ಭಾರತದಲ್ಲಿ ಹುಟ್ಟಿ, ವಿಶ್ವಮಟ್ಟದಲ್ಲಿ ಪಸರಿಸಿದೆ. ಭಾರತವು ನಾಲ್ಕು ಬಾರಿ ಕಬಡ್ಡಿಯಲ್ಲಿ ವಿಶ್ವಚಾಂಪಿಯನ್ ಆಗಿದೆ. ಕರ್ನಾಟಕದಿಂದ ಡಿ.ಸಿ.ರಮೇಶ್, ಸುರೇಶ್, ಮುನಿವೆಂಕಟ, ಮಮತಾ ಪೂಜಾರಿ, ಹೇಮಾವತಿ, ಶೋಭಾ ರಾಣಿ ಭಾರತ ತಂಡದ ಪರವಾಗಿ ಆಟವಾಡಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.

ಇಂದಿನ ಯುವಪೀಳಿಗೆ ಹೆಚ್ಚಿನ ರೀತಿಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಹೆಸರುಗಳಿಸಬೇಕು ಎಂದು ಕಿವಿಮಾತು ಹೇಳಿದರು. ಮಂಚನಬಲೆ ಶ್ರೀನಿವಾಸ್, ಕಬಡ್ಡಿ ಆಟಗಾರ ಭಾರ್ಗವ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಪ್ರಾಂಶುಪಾಲ ಬಿ.ಜಿ.ಗಂಗಾಧರ್, ಬೋರಯ್ಯ, ಚನ್ನಕೃಷ್ಣಪ್ಪ ಇದ್ದರು.