-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣೇಶ ಹಬ್ಬಕ್ಕೆ ಮೆನ್ಸ್ ಎಥ್ನಿಕ್ ಫ್ಯಾಷನ್‌ನಲ್ಲಿ (Festive Season Fashion 2025) ನಾನಾ ಬಗೆಯ ಪಂಚೆ-ಶಲ್ಯಗಳು ಮಾರುಕಟ್ಟೆಗೆ ಆಗಮಿಸಿದ್ದು, ಟ್ರೆಂಡಿಯಾಗಿವೆ. ಸಂತಸದ ವಿಚಾರವೆಂದರೆ, ಇತರೇ ಉಡುಗೆಗಳಂತೆ ಆರಾಮದಾಯಕವಾಗಿ ಧರಿಸಬಹುದಾದ ವಿನ್ಯಾಸದಲ್ಲಿ ಇವು ಬಿಡುಗಡೆಗೊಂಡಿವೆ. ಮೊದಲೆಲ್ಲಾ ಪಂಚೆ-ಶಲ್ಯ ಎಂದಾಕ್ಷಣ ಯುವಕರು ಧರಿಸಲು ಹಿಂದೇಟು ಹಾಕುತ್ತಿದ್ದರು. ಆದರೆ, ಇದೀಗ ಸುಲಭವಾಗಿ ಧರಿಸಬಹುದಾದಂತಹ ಡಿಸೈನ್‌ನಲ್ಲಿ ಇವು ಬಂದಿವೆ. ಅದರಲ್ಲೂ, ಇಂದಿನ ಜನರೇಷನ್‌ನ ಹೈಕಳು ಇಷ್ಟಪಡುವಂತಹ ನಾನಾ ಬಗೆಯ ವಿನ್ಯಾಸದ ಪಂಚೆಗಳು ಬಿಡುಗಡೆಗೊಂಡಿವೆ.

ಪಾಕೆಟ್ ಪಂಚೆಗೆ ಡಿಮ್ಯಾಂಡ್
ಇತ್ತೀಚೆಗೆ ಪಾಕೆಟ್ ಇರುವಂತಹ ಪಂಚೆಗಳು ಸಿಗುತ್ತಿವೆ. ಮೊಬೈಲ್‌ನಿಂದಿಡಿದು ವಾಲೆಟ್ ಸಹಿತ ಇರಿಸಿಕೊಳ್ಳಬಹುದಾದ ಇವುಗಳ ವಿನ್ಯಾಸ ಯುವಕರಿಗೆ ಹೆಚ್ಚು ಇಷ್ಟವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವೆಲ್ಕ್ರಾನ್ ಪಂಚೆ
ಇನ್ನು, ವೆಲ್ಕ್ರಾನ್ ಇರುವಂತಹ ಪಂಚೆಗಳು ಕೂಡ ಹೆಚ್ಚು ಪ್ರಚಲಿತದಲ್ಲಿವೆ. ಮೊದಲಿನಂತೆ ಪಂಚೆ ಕಟ್ಟಿಕೊಳ್ಳುವ ಟೆನ್ಷನ್ ಇಲ್ಲ. ಅವರವರ ಸೊಂಟದ ಸೈಝಿಗೆ ತಕ್ಕಂತೆ ಸ್ಟಿಕ್ ಮಾಡಿದರಾಯಿತು ಎನ್ನುತ್ತಾರೆ ಮಾಡೆಲ್ ವಿನಯ್ ಸಿಂಧ್ಯಾ.

ಹಬ್ಬಕ್ಕೆ ಬಾರ್ಡರ್ – ಪಂಚೆ
ಶ್ವೇತ ವರ್ಣ ಇಲ್ಲವೇ ಕ್ರೀಮ್ ಶೇಡ್‌ನ ಗೋಲ್ಡನ್ ಬಾರ್ಡರ್ ಇರುವಂತವು ಈ ಫೆಸ್ಟೀವ್ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ದೊಡ್ಡ ಹಾಗೂ ಚಿಕ್ಕ ಬಾರ್ಡರ್‌ನವು ಟ್ರೆಂಡಿಯಾಗಿವೆ.
ಪಂಚೆಗೆ ಶಲ್ಯ ಮ್ಯಾಚಿಂಗ್ ಮಾಡಿ
ಶಲ್ಯವನ್ನು ಆಯಾ ವ್ಯಕ್ತಿಯ ಹೈಟ್ ಹಾಗೂ ಪರ್ಸನಾಲಿಟಿಗೆ ತಕ್ಕಂತೆ ಮ್ಯಾಚ್ ಮಾಡಬೇಕು. ಇದಕ್ಕೆ ಪೂರಕ ಎಂಬಂತೆ, ಚಿಕ್ಕ ಶಲ್ಯದಿಂದಿಡಿದು ಶಾಲಿನಂತಿರುವ ದೊಡ್ಡ ಶಲ್ಯಗಳು ಕೂಡ ಲಭ್ಯ. ಇನ್ನು, ಇವೆರಡಕ್ಕೂ ಮ್ಯಾಚ್ ಆಗುವಂತೆ, ಶ್ವೇತ ವರ್ಣದ ಇಲ್ಲವೇ ಕ್ರೀಮ್ ಶೇಡ್‌ನ ಶರ್ಟ್ ಕಾಟನ್ ಸಿಲ್ಕ್ ಅಥವಾ ಸಿಲ್ಕ್ ಶರ್ಟ್ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಪಂಚೆ – ಶಲ್ಯ ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ?
ಆದಷ್ಟೂ ನಿಮಗೆ ಕಂಫರ್ಟಬಲ್ ಎಂದೆನಿಸುವ ಸೈಝ್‌ನದ್ದು ನೋಡಿ ಆಯ್ಕೆ ಮಾಡಿ.
ಪಾಕೆಟ್ ಹಾಗೂ ವೆಲ್ಕ್ರಾನ್ ಇರುವಂತಹ ಅಂಟಿಸಬಹುದಾದ ಪಂಚೆ ಆಯ್ಕೆ ಮಾಡಿ.
ಮಕ್ಕಳಿಗಾದಲ್ಲಿ ಮಿನಿ ಸೈಝ್‌ನದ್ದನ್ನು ಟ್ರಯಲ್ ನೋಡಿ ಕೊಳ್ಳೀ.
ತೀರಾ ಗಿಡ್ಡನಾದ ಶಲ್ಯವನ್ನು ಧರಿಸಬೇಡಿ. ಧರಿಸಿದಾಗ ಕನಿಷ್ಠ ಪಕ್ಷ ಸೊಂಟದವರೆಗೆ ಇರಬೇಕು.
ಪಂಚೆಗೆ ಧರಿಸುವ ಶರ್ಟ್ ಮ್ಯಾಚ್ ಮಾಡುವುದು ಅತ್ಯಗತ್ಯ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Festive Season Shopping 2025: ಶುರುವಾಯ್ತು ಗೌರಿ-ಗಣೇಶ ಹಬ್ಬದ ವೀಕೆಂಡ್ ಭರ್ಜರಿ ಶಾಪಿಂಗ್