ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಕಾರು ಸಮೇತ ಕೆರೆಗೆ ತಳ್ಳಿ ಪ್ರೇಯಸಿಯ ಕೊಲೆ, ವಿವಾಹಿತೆಗೆ ಯಮನಾದ ಪ್ರಿಯತಮ

Hassan: ಬೇಲೂರು ತಾಲೂಕಿನ ಚಂದನಹಳ್ಳಿ ಕೆರೆಗೆ ಶ್ವೇತಾಳನ್ನು ಕಾರಿನ ಸಮೇತ ಆರೋಪಿ ರವಿ ತಳ್ಳಿದ್ದಾನೆ. ಘಟನೆಯ ಬಳಿಕ, ರವಿ ತಾನು ಈಜಿ ದಡ ಸೇರಿದ್ದೇನೆ ಎಂದು ಹೇಳಿಕೊಂಡು, ಗೆಳತಿ ಶ್ವೇತಾ ಕಾರಿನೊಳಗೆ ಸಿಲುಕಿಕೊಂಡಿದ್ದಾಳೆ ಎಂದು ಆಕಸ್ಮಿಕ ಘಟನೆಯಂತೆ ಚಿತ್ರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮೃತ ಶ್ವೇತಾ, ಆರೋಪಿ ರವಿ

ಹಾಸನ: ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಚಂದನಹಳ್ಳಿ ಕೆರೆ ಬಳಿ ಸಿನಿಮೀಯ ರೀತಿಯಲ್ಲಿ ದಾರುಣ ಕೊಲೆಯೊಂದು (Murder Case) ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. 32 ವರ್ಷದ ವಿವಾಹಿತ ಮಹಿಳೆ ಶ್ವೇತಾ ಎಂಬಾಕೆ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ. ರವಿ ಎಂಬಾತನ ಪ್ರೀತಿಯನ್ನು ಶ್ವೇತಾ ನಿರಾಕರಿಸಿದ್ದಕ್ಕೆ ಕಾರು ಸಮೇತ ಆಕೆಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅವರಿಬ್ಬರಿಗೂ ಬೇರೆ ಮದುವೆಯಾಗಿತ್ತು. ಆದರೆ ಹುಚ್ಚು ಪ್ರೀತಿ ಅಪರಾಧದಲ್ಲಿ ಕೊನೆಯಾಗಿದೆ. ಶ್ವೇತಾ ಹಿಂದೆ ಬಿದ್ದ ಕಾರಣಕ್ಕೆ ಇಂದು ರವಿ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಶ್ವೇತಾ (32), ಬೇಲೂರು ತಾಲೂಕಿನ ನಿವಾಸಿಯಾಗಿದ್ದು, ತನ್ನ ಗಂಡನಿಂದ ದೂರವಾಗಿ ತಂದೆ-ತಾಯಿಯ ಜೊತೆಗೆ ವಾಸಿಸುತ್ತಿದ್ದಳು. ಆಕೆ ಗಂಡನಿಂದ ಬೇರ್ಪಟ್ಟಿರುವುದನ್ನು ತಿಳಿದ ರವಿ ಎಂಬಾತ, ಶ್ವೇತಾಳ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ರವಿ ತನ್ನ ಪತ್ನಿಯನ್ನು ಬಿಟ್ಟು ಶ್ವೇತಾಳ ಜೊತೆಗೆ ಜೀವನ ನಡೆಸಲು ಒತ್ತಾಯಿಸಿದ್ದಾನೆ. ಶ್ವೇತಾ ಹಾಗೆ ಮಾಡಲು ನಿರಾಕರಿಸಿದ್ದಳು. ಇದು ರವಿಯ ಕೋಪಕ್ಕೆ ಕಾರಣವಾಗಿತ್ತು.

ಆಗಸ್ಟ್ 19ರಂದು ಹಾಸನದಿಂದ ತನ್ನ ಕಾರಿನಲ್ಲಿ ಶ್ವೇತಾಳನ್ನು ಕರೆತಂದ ರವಿ, ಬೇಲೂರು ತಾಲೂಕಿನ ಚಂದನಹಳ್ಳಿ ಕೆರೆಯ ಬಳಿಗೆ ಆಕೆಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಶ್ವೇತಾಳನ್ನು ಕಾರಿನ ಸಮೇತ ಕೆರೆಗೆ ತಳ್ಳಿದ್ದಾನೆ. ಘಟನೆಯ ಬಳಿಕ, ರವಿ ತಾನು ಈಜಿ ದಡ ಸೇರಿದ್ದೇನೆ ಎಂದು ಹೇಳಿಕೊಂಡು, ಗೆಳತಿ ಶ್ವೇತಾ ಕಾರಿನೊಳಗೆ ಸಿಲುಕಿಕೊಂಡಿದ್ದಾಳೆ ಎಂದು ಆಕಸ್ಮಿಕ ಘಟನೆಯಂತೆ ಚಿತ್ರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ, ಶ್ವೇತಾಳ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಈ ಘಟನೆಯನ್ನು ಕೊಲೆಯಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿ ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಾರಿನ ಸಮೇತ ಶ್ವೇತಾಳನ್ನು ಕೆರೆಗೆ ತಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಶ್ವೇತಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯನ್ನು ಕಾಯ್ದಿರಿಸಲಾಗಿದೆ. ಶ್ವೇತಾಳ ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Mysuru News: ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿರಾಯ!

ಹರೀಶ್‌ ಕೇರ

View all posts by this author