ತಂದೆಯನ್ನು ದೋಚಲು ಮಗನಿಂದ ಅಪಹರಣದ ನಾಟಕ
ತಂದೆಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಲು ಮಗನೊಬ್ಬ ಅಪಹರಣದ ನಾಟಕ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಇದೀಗ ಆತನನ್ನು ಜೈಲಿಗೆ ಅಟ್ಟಲಾಗಿದೆ. ಈ ಘಟನೆ ಹಾಸನದಲ್ಲಿ ನಡೆದಿದೆ. ಆರೋಪಿಯನ್ನು 40 ವರ್ಷದ ಮನೀಶ್ ಎಂದು ಗುರುತಿಸಲಾಗಿದೆ. ಆತ ತನ್ನ ತಂದೆಯಿಂದ ಬರೋಬ್ಬರಿ 90 ಲಕ್ಷ ರೂ. ಸುಲಿಗೆ ಮಾಡಲು ಈ ನಾಟಕ ರೂಪಿಸಿದ್ದಾನೆ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.