ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಂಪಿ ವಿವಿ 33ನೇ ನುಡಿಹಬ್ಬ; ನ್ಯಾ.ಶಿವರಾಜ್‌ ಪಾಟೀಲ್‌, ಕುಂ.ವೀ, ವೆಂಕಟೇಶ್‌ ಕುಮಾರ್‌ಗೆ ನಾಡೋಜ ಪದವಿ ಪ್ರದಾನ

ಹಂಪಿ ವಿಶ್ವವಿದ್ಯಾಲಯದಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಶಿವರಾಜ್ ವಿ.ಪಾಟೀಲ್, ಖ್ಯಾತ ಬರಹಗಾರ, ಚಿಂತಕ ಕುಂ.ವೀರಭದ್ರಪ್ಪ (ಕುಂ.ವೀ), ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಯಿತು.

ನ್ಯಾ.ಶಿವರಾಜ್‌ ಪಾಟೀಲ್‌, ಕುಂ.ವೀ, ವೆಂಕಟೇಶ್‌ ಕುಮಾರ್‌ಗೆ ನಾಡೋಜ ಪ್ರದಾನ

Profile Prabhakara R Apr 4, 2025 8:05 PM

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ (Hampi university) 33ನೇ ನುಡಿಹಬ್ಬವು ವಿವಿ ಆವರಣದ ನವರಂಗ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆಯಿತು. ಈ ವೇಳೆ ಗಣನೀಯ ಸಾಧನೆ ಮಾಡಿದ ಮೂವರಿಗೆ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ಪದವಿ ನಾಡೋಜ (Nadoja) ಗೌರವ ಪದವಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಶಿವರಾಜ್ ವಿ.ಪಾಟೀಲ್, ಖ್ಯಾತ ಬರಹಗಾರ, ಚಿಂತಕ ಕುಂ.ವೀರಭದ್ರಪ್ಪ (ಕುಂ.ವೀ), ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಯಿತು.

ಈ ವೇಳೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎಂ.ಎಚ್, ಹಂಪಿ ವಿವಿ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ.ಸಿ. ಸುಧಾಕರ್ ಅವರು ವಿಶ್ವವಿದ್ಯಾಲಯದಲ್ಲಿ ಪಿಎಚ್. ಡಿ ಅಧ್ಯಯನವನ್ನು ಕೈಗೊಂಡ 190 ಸಂಶೋಧನಾರ್ಥಿಗಳಿಗೆ ಪಿಎಚ್‌.ಡಿ ಪದವಿಯನ್ನು ಪ್ರದಾನ ಮಾಡಿದರು.

ಹಂಪಿಯ ಐತಿಹಾಸಿಕ ʼಸುಗ್ರೀವ ಗುಹೆʼ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

Thawar Chand Gehlot (4)

ಹೊಸಪೇಟೆ: ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಹಂಪಿಯಲ್ಲಿರುವ ಐತಿಹಾಸಿಕ ಸುಗ್ರೀವ ಗುಹೆಗೆ (Sugriva's Cave) ಭೇಟಿ ನೀಡಿ ವೀಕ್ಷಿಸಿದರು. ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇದ್ದರು. ಭೇಟಿಯ ಸಮಯದಲ್ಲಿ ರಾಮಾಯಣದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಮತ್ತು ಕರ್ನಾಟಕದ ಅಮೂಲ್ಯ ಪರಂಪರೆಯ ಹೆಗ್ಗುರುತಾಗಿರುವ ಈ ಸ್ಥಳದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಕುರಿತು ರಾಜ್ಯಪಾಲರು ಮಾಹಿತಿ ಪಡೆದರು.

ಈ ಸುದ್ದಿಯನ್ನೂ ಓದಿ | ಬಿಸಿಲಿನ ತಾಪಮಾನ ಹೆಚ್ಚಳ: ಅಂಗನವಾಡಿ ಕೇಂದ್ರಗಳ ಸಮಯ‌ ಬದಲಾವಣೆ

ಸುಗ್ರೀವನು, ಸೀತೆಯನ್ನು ಅಪಹರಿಸಿದ್ದ ರಾವಣನನ್ನು ತಲುಪಲು ರಾಮನಿಗೆ ಸಹಾಯ ಮಾಡುವ ವಾನರ ರಾಜ. ಈತನ ರಾಜ್ಯ ಕಿಷ್ಕಿಂದೆ. ಇಂದಿನ ಹಂಪಿಯ ಸುತ್ತಮುತ್ತಲಿನ ಪ್ರದೇಶವನ್ನೇ ರಾಮಾಯಣದ ಕಾಲದ ಕಿಷ್ಕಿಂದೆ ಎಂದು ನಂಬಲಾಗಿದೆ. ಸುಗ್ರೀವ, ರಾಮನ ಸಹಾಯ ಪಡೆದು ತನ್ನನ್ನು ಗಡಿಪಾರು ಮಾಡಿದ್ದ ಅಣ್ಣ ವಾಲಿಯನ್ನು ಸದೆಬಡಿಯುತ್ತಾನೆ. ಅಲ್ಲದೆ ತನಗೆ ಸಹಾಯ ಮಾಡಿದ್ದರಿಂದ ವಾನರ ಸೇನೆಯೊಂದಿಗೆ ರಾಮನಿಗೆ ಸಹಾಯವಾಗಿ ಲಂಕೆಗೆ ಹೋಗುತ್ತಾನೆ. ಇನ್ನು ಹಂಪಿಯ ಸುಗ್ರೀವ ಗುಹೆಯಲ್ಲೇ ಶ್ರೀರಾಮನು ಹನುಮ೦ತ ಮತ್ತು ಸುಗ್ರೀವನನ್ನು ಭೇಟಿಯಾದ ಎ೦ದು ಹೇಳಲಾಗಿದೆ.