Chikkaballapur News: ಚಿಕ್ಕಬಳ್ಳಾಪುರ ನಗರದಲ್ಲಿ ಶ್ರೀ ಕೃಷ್ಣ ಜಯಂತಿಯ ಅದ್ದೂರಿ ಆಚರಣೆ : ಕಳೆಗಟ್ಟಿದ ಜಾನಪದ ಕುಣಿತ
ಸತ್ಯ, ಪರಿಶುದ್ದ ಮನಸ್ಸು, ಸಹನೆ,ನಿಷ್ಠೆಯಿಂದಿರುವ ಭಕ್ತನಾದ ಪಂಡರಾಪುರದ ತುಕಾರಾಂ, ಸಂತ ನಾಮದೇವ ಇನ್ನು ಮುಂತಾದವರಿಗೆ ಪ್ರತ್ಯಕ್ಷವಾಗಿ ಆಶೀರ್ವದಿಸಿದರು. ಅಂತಹ ಭಗವಂತನಾದ ಶ್ರೀಕೃಷ್ಣನಿಗೆ ಪ್ರಪಂಚದದ್ಯAತ ಭಕ್ತರಿದ್ದಾರೆ. ವರ್ಷಕ್ಕೊಮ್ಮೆ ಜಯಂತಿಗಳ ರೂಪದಲ್ಲಿ ಶ್ರೀಕೃಷ್ಣನನ್ನು ನೆನಪಿಸಿಕೊಳ್ಳದೆ, ಪ್ರತಿನಿತ್ಯವೂ ಶ್ರೀಕೃಷ್ಣನ ನೆನಪು ನಮ್ಮಲ್ಲಿರಬೇಕು.

-

ಕಣ್ಮನ ಸೆಳೆದ ಹೂವಿನ ಪಲ್ಲಕ್ಕಿ ಮೆರವಣಿಗೆ : ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಯಾದವ ಯುವಕರು
ಚಿಕ್ಕಬಳ್ಳಾಪುರ : ಜಿಲ್ಲಾಡಳಿತ ಮತ್ತು ಯಾದವ ಸಮುದಾಯದ ಸಹಯೋಗದಲ್ಲಿ ನಡೆದ ಶ್ರೀಕೃಷ್ಣ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದು ವೇಣುಗೋಪಾಲಸ್ವಾಮಿ ದೇವಾಲಯ ದಿಂದ ಕನ್ನಡಭವನದವರೆಗೆ ತಮಟೆ, ಕೀಲುಕುದುರೆ,ಡೊಳ್ಳು ಕುಣಿತ ಮೊದಲಾದ ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಶ್ರೀಕೃಷ್ಣಮೂರ್ತಿಯನ್ನು ತರಲಾಯಿತು.
ಮೆರವಣಿಗೆಯಲ್ಲಿ ಯಾದವ ಸಮುದಾಯದ ಮುಖಂಡರಾದ ಕೆ.ಎಂ.ಮುನೇಗೌಡ, ಕೇಶವಮೂರ್ತಿ, ಯಾದವ ಸಂಘದ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್,ತಾಲೂಕು ಗೌರವಾಧ್ಯಕ್ಷ ಜಿ.ನರಸಿಂಹಯ್ಯ, ತಾಲೂಕು ಅಧ್ಯಕ್ಷ ವಿ.ಮುನಿಕೃಷ್ಣ, ಖಜಾಂಚಿ ಬನ್ನಿಕುಪ್ಪೆ ವಿ ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಸಿ.ಎಂ.ಶ್ರೀನಿವಾಶ್, ತಾಲೂಕು ಉಪಾಧ್ಯಕ್ಷ ಎನ್.ಮುನಿರಾಜು,ಸಹಕಾರ್ಯದರ್ಶಿ ಪಿ.ಮೋಹನ್‌ಕುಮಾರ್,ಸಮುದಾಯದ ಮುಖಂಡರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಯ ನಂತರ ಕನ್ನಡ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದುರ್ಗದ ಶ್ರೀಜಗದ್ಗುರು ಕೃಷ್ಣ ಯಾದವಾನಂದ ಮಹಾಸ್ವಾಮಿ ಮಾತನಾಡಿ ಒಳಿತು ಮಾಡಲು ಯಾರ ಮನಸ್ಸು ಪರಿಶುದ್ಧತೆಯಿಂದ ಶ್ರದ್ಧೆ,ಭಕ್ತಿ ,ಸಹನೆ ಹಾಗೂ ನಿಷ್ಠೆಯಿಂದ ಇರುತ್ತದೋ ಅಂತವರಿಗೆ ಭಗವಂತ ಆಶೀರ್ವದಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಜೀವನಶೈಲಿ ಸಮಸ್ಯೆಯೇ ಸಾವಿಗೆ ಕಾರಣವಾಗುವ ಅಪಾಯ: ಸದ್ಗುರು ಶ್ರೀ ಮಧುಸೂದನ ಸಾಯಿ ಆತಂಕ
ಹಿಂದೂ ಧರ್ಮೀಯರು ಶ್ರೀಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾದಿ ಕಾಲದಿಂದಲೂ ಪಾಲಿಸುತ್ತಿದ್ದಾರೆ. ಶ್ರೀಕೃಷ್ಣ ದೇವರು ವಿಶೇಷವಾಗಿ ಬಡವರ ಕಷ್ಟಗಳಿಗೆ ಕಾಣುವ ದೇವರಾಗಿದ್ದಾರೆ.
ಸತ್ಯ, ಪರಿಶುದ್ದ ಮನಸ್ಸು, ಸಹನೆ,ನಿಷ್ಠೆಯಿಂದಿರುವ ಭಕ್ತನಾದ ಪಂಡರಾಪುರದ ತುಕಾರಾಂ, ಸಂತ ನಾಮದೇವ ಇನ್ನು ಮುಂತಾದವರಿಗೆ ಪ್ರತ್ಯಕ್ಷವಾಗಿ ಆಶೀರ್ವದಿಸಿದರು. ಅಂತಹ ಭಗವಂತನಾದ ಶ್ರೀಕೃಷ್ಣನಿಗೆ ಪ್ರಪಂಚದದ್ಯAತ ಭಕ್ತರಿದ್ದಾರೆ. ವರ್ಷಕ್ಕೊಮ್ಮೆ ಜಯಂತಿಗಳ ರೂಪದಲ್ಲಿ ಶ್ರೀಕೃಷ್ಣ ನನ್ನು ನೆನಪಿಸಿಕೊಳ್ಳದೆ, ಪ್ರತಿನಿತ್ಯವೂ ಶ್ರೀಕೃಷ್ಣನ ನೆನಪು ನಮ್ಮಲ್ಲಿರಬೇಕು. ದೇವಾಲಯಕ್ಕೆ ಹೋದಾಗ ಕನಿಷ್ಠ ೫ ನಿಮಿಷಗಳ ಕಾಲ ಪ್ರಾರ್ಥನೆ ಮಾಡುವ ಮೂಲಕ ನಮ್ಮ ಧಾರ್ಮಿಕ ಜೀವನವನ್ನು ಪಾಲಿಸೋಣ.ಅದು ಶ್ರೀ ಕೃಷ್ಣನಿಗೆ ಅರ್ಪಣೆಯಾಗುತ್ತದೆ. ಶ್ರೀ ಕೃಷ್ಣನ ಮೆರವಣಿಗೆ ಯಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸಿ ಕುಣಿದು ಕುಪ್ಪಳಿಸುವ ಬದಲು ಕನಕದಾಸರ, ಪುರಂದರದಾಸರ, ಕೀರ್ತನೆಗಳನ್ನು ಅದರ ಜೊತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಪಿ.ಎನ್.ನರಸಿಂಹರೆಡ್ಡಿ ಅವರು ಭಗವಾನ್ ಶ್ರೀಕೃಷ್ಣ ದೇವರ ಜೀವನ ಚರಿತ್ರೆಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಹಾಗೂ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕೃಷ್ಣ ಹೂವಿನ ಪಲ್ಲಕ್ಕಿಯು ಮೆರವಣಿಗೆಯೊಂದಿಗೆ ವೇಣುಗೊಪಾಲ ದೇವಾಲಯದಿಂದ ಆರಂಭಗೊAಡು ಬಿ.ಬಿ ರಸ್ತೆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು. ಜಾನಪದ, ತಮಟೆ ವಾದ್ಯ, ಸೋಮನ ಕುಣಿತಗಳು ಸಾರ್ವಜನಿಕರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯಲುವಳ್ಳಿ ಎನ್ ರಮೇಶ್,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಉಪ ವಿಭಾಗಾಧಿಕಾರಿ ಅಶ್ವಿನ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ ಎಂ ರವಿಕುಮಾರ್, ಸಮುದಾಯದ ಮುಖಂಡರಾದ ಕೆಎಂ ಮುನೇಗೌಡ, ಆರ್ ವೆಂಕಟೇಶ್,ವಿ ಮನಿ ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನರಸಪ್ಪ ,ಗೋಪಾಲಪ್ಪ ಸಮುದಾಯದ ಮುಖಂಡರು, ಪದಾಧಿಕಾರಿಗಳು, ಉಪಸ್ಥಿತರಿದ್ದರು.