ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RSS : ನ.2ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ಇ-ಮೇಲ್​ ಮೂಲಕ ಡಿಸಿಗೆ ಅರ್ಜಿ ಸಲ್ಲಿಕೆ

Kalaburagi: ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್​ ನ ಈ ಆದೇಶದ ಅನ್ವಯ ಈಗ ಮತ್ತೆ ಹೊಸ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಕಲಬುರಗಿ: ನ.2ರಂದು ಕಲಬುರಗಿ (Kalaburagi) ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪಥಸಂಚಲನ ನಡೆಸಲು ಅನುಮತಿ ವಿಚಾರವಾಗಿ ಕಲಬುರಗಿ ಹೈಕೋರ್ಟ್ (High Court) ವಿಭಾಗೀಯ ಪೀಠದ ಸೂಚನೆಯಂತೆ ಹೊಸ ಅರ್ಜಿಯನ್ನು ಆರೆಸ್ಸೆಸ್​ (RSS) ಮುಖಂಡರು ಸಲ್ಲಿಕೆ ಮಾಡಿದ್ದಾರೆ. ಮನವಿ ಪತ್ರ ಖುದ್ದಾಗಿ ನೀಡಲು ಜಿಲ್ಲಾಧಿಕಾರಿ ಕಚೇರಿ ಮತ್ತು ಅವರ ಸರ್ಕಾರಿ ನಿವಾಸಕ್ಕೆ RSS​ ಮುಖಂಡರು ತೆರಳಿದ್ದರು. ಆದರೆ ಡಿಸಿ ಸಿಗದ ಹಿನ್ನೆಲೆ ಸರ್ಕಾರಿ ನಿವಾಸದ ಸಿಬ್ಬಂದಿಯಿಂದ ಜಿಲ್ಲಾಧಿಕಾರಿ ಆಪ್ತ ಸಹಾಯಕರಿಗೆ ಫೋನ್​ ಮಾಡಿಸಲಾಗಿದೆ. ಆಗ ಆಪ್ತ ಸಹಾಯಕ ಫೋನ್​​ ಕರೆ ಸ್ವಿಕರಿಸದ ಹಿನ್ನಲೆ ಜಿಲ್ಲಾಧಿಕಾರಿಯವರ ಅಧಿಕೃತ ಎರಡು ಇ-ಮೇಲ್​ ಗಳಿಗೆ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ರವಾನೆ ಮಾಡಲಾಗಿದೆ. ಜೊತೆಗೆ ಡಿಸಿ ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆಗೂ ವಾಟ್ಸಾಪ್​​ ಮೂಲಕ ಅರ್ಜಿ ಕಳುಹಿಸಲಾಗಿದೆ.

ಚಿತ್ತಾಪುರದಲ್ಲಿ ನಡೆಯಬೇಕಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್​ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಇದನ್ನ ಕಾರ್ಯಕರ್ತರು ಕೋರ್ಟ್​ ಮೊರೆ ಹೋಗಿದ್ದು, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್​ ನ ಈ ಆದೇಶದ ಅನ್ವಯ ಈಗ ಮತ್ತೆ ಹೊಸ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: RSS march in Chittapur: ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ; ಹೊಸ ಅರ್ಜಿ ಸಲ್ಲಿಸಲು ಸೂಚನೆ

ಕಲಬುರಗಿಯ ಸೇಡಂನಲ್ಲಿ ನಿನ್ನೆ ನಡೆದ ಆರೆಸ್ಸೆಸ್​ ಪಥಸಂಚಲನದಲ್ಲಿ ಸರ್ಕಾರಿ ಅಧಿಕಾರಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಾಗರಾಜ್ ಮನ್ನೆ ಗಣವೇಶ ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. RSSಗೆ ನೂರು ವರ್ಷ ಪೂರೈಸಿದ ಹಿನ್ನಲೆ ನಡೆದಿದ್ದ ಈ ಕಾರ್ಯಕ್ರಮದಲ್ಲಿ, ಹಲವು ಕಾಂಗ್ರೆಸ್​ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು.

ಹರೀಶ್‌ ಕೇರ

View all posts by this author