ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Corruption case: ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಲಂಚ ಕೇಳಿದ ಲ್ಯಾಬ್ ಟೆಕ್ನಿಷಿಯನ್; ವಿಡಿಯೋ ವೈರಲ್‌

Kalaburagi News: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟೆಯಲ್ಲಿ ನಡೆದಿದೆ. ಬಡ ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ‌ ಲಂಚ ಕೇಳಿದ್ದಾನೆ. ಪ್ರತಿ ಗರ್ಭಿಣಿ ತಪಾಸಣೆಗೆ 100 ರೂ. ನೀಡಬೇಕು ಎಂದು ಆಶಾ ಕಾರ್ಯಕರ್ತೆಯರ ಬಳಿ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೇ ಕೆಲಸ ಮಾಡಲ್ಲ ಎಂದು ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ತಿಳಿಸಿದ್ದಾನೆ.

ಕಲಬುರಗಿ: ಆಶಾ ಕಾರ್ಯಕರ್ತೆಯರ ಬಳಿ ಸರ್ಕಾರಿ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಷಿಯನ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ (Corruption case) ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟೆಯಲ್ಲಿ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಲ್ಯಾಬ್ ಟೆಕ್ನಿಷಿಯನ್ ಜಗನ್ನಾಥ್‌ ಎಂಬಾತ ಲಂಚ ಕೇಳಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಡ ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ‌ ಲಂಚ ಕೇಳಿದ್ದಾನೆ. ಪ್ರತಿ ಗರ್ಭಿಣಿ ತಪಾಸಣೆಗೆ 100 ರೂ. ನೀಡಬೇಕು ಎಂದು ಆಶಾ ಕಾರ್ಯಕರ್ತೆಯರ ಬಳಿ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೇ ಕೆಲಸ ಮಾಡಲ್ಲ ಎಂದು ಲ್ಯಾಬ್ ಟೆಕ್ನಿಷಿಯನ್ ತಿಳಿಸಿದ್ದಾನೆ.



ಲಂಚ‌ ಕೊಟ್ಟರೆ ಮಾತ್ರ ಕೆಲಸ ಎಂದು ಆವಾಜ್ ಹಾಕಿರುವ ಲ್ಯಾಬ್ ಟೆಕ್ನಿಷಿಯನ್, ಎಲ್ಲರೂ ಸುಮ್ಮನೆ ಕೊಟ್ಟು ಹೋಗುತ್ತಾರೆ. ನೀನೇ ತಕರಾರು ತೆಗೆಯುತ್ತಿಯಾ. ನೀನು ಯಾರಿಗೆ ಹೇಳುತ್ತಿಯೋ ಹೇಳಿಕೋ, ನಾವೆಲ್ಲಾ ಒಂದೇ ಇದ್ದೇವೆ, ಯಾರೂ ಏನೂ ಮಾಡಕ್ಕಾಗಲ್ಲ ಎಂದು ಆಶಾ ಕಾರ್ಯಕರ್ತೆಗೆ ಆವಾಜ್ ಹಾಕಿರುವುದು ವಿಡಿಯೋದಲ್ಲಿದೆ. ಇನ್ನೂ ಸಂಬಳ ಆಗಿಲ್ಲ ಎಂದು ಅಂಗಲಾಚಿದರೂ ಲಂಚಕ್ಕಾಗಿ ಲ್ಯಾಬ್ ಟೆಕ್ನಿಷಿಯನ್ ಪೀಡಿಸಿದ್ದಾನೆ ಎನ್ನಲಾಗಿದೆ.