ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kurnool Bus Fire: ಕರ್ನೂಲ್ ಬಸ್ ದುರಂತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ದುರ್ಮರಣ

Bengaluru: ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನೆಲ್ಲೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಮೇಶ್ ಅವರ ಕುಟುಂಬ ಸೇರಿದೆ. ರಮೇಶ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಬಸ್ಸಿನಲ್ಲಿದ್ದರು ಎಂದು ವರದಿಯಾಗಿದೆ. ರಮೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಊರಿನಲ್ಲಿ ದೀಪಾವಳಿ ಹಬ್ಬ ಮುಗಿಸಿ ಬೆಂಗಳೂರಿಗೆ ಬಸ್ಸಿನಲ್ಲಿ ಕುಟುಂಬ ಸಮೇತ ತೆರಳುತ್ತಿದ್ದರು.

ಹೈದರಾಬಾದ್: ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್‌ ಬೆಂಕಿ ದುರಂತದಲ್ಲಿ (Kurnool Bus Fire) ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ ಸುಮಾರು 20 ಜನರು ಸಜೀವ ದಹನವಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ. ದುರಂತದಲ್ಲಿ (Kurnool Bus accident) ಬೆಂಗಳೂರು (Bengaluru) ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ ಎಂದು ಗೊತ್ತಾಗಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕಾವೇರಿ ಖಾಸಗಿ ಟ್ರಾವೆಲ್ಸ್ ಬಸ್ ಉಳಿಂದಕೊಂಡ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಸ್ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಅವರಲ್ಲಿ 12 ಮಂದಿ ಕೆಳಗೆ ಹಾರಿ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಇತರರಲ್ಲಿ 20 ಮಂದಿ ಸ್ಥಳದಲ್ಲೇ ದಹಿಸಿಹೋದರೆ, ಇತರರು ತೀವ್ರ ಸುಟ್ಟು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನೆಲ್ಲೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಮೇಶ್ ಅವರ ಕುಟುಂಬ ಸೇರಿದೆ. ರಮೇಶ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಬಸ್ಸಿನಲ್ಲಿದ್ದರು ಎಂದು ವರದಿಯಾಗಿದೆ. ರಮೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಊರಿನಲ್ಲಿ ದೀಪಾವಳಿ ಹಬ್ಬ ಮುಗಿಸಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಕುಟುಂಬ ಸಮೇತ ತೆರಳುತ್ತಿದ್ದರು. ವಿಂಜಾಮುರು ಮಂಡಲದ ಗೊಲ್ಲವರಿ ಪಾಲೆಮ್‌ಗೆ ಸೇರಿದ ಗೊಲ್ಲ ರಮೇಶ್ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು.

ಇದನ್ನೂ ಓದಿ: Fire Accident: ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ; 10 ಕ್ಕೂ ಅಧಿಕ ಮಂದಿ ಸಜೀವ ದಹನದ ಶಂಕೆ

ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಸುಮಾರು 44 ಪ್ರಯಾಣಿಕರೊಂದಿಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿತ್ತು. ಕಲ್ಲೂರು ಮಂಡಲದ ಚಿನ್ನಟೇಕುರು ಸಮೀಪಿಸುತ್ತಿದ್ದಂತೆ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ಸಿನ ಮುಂಭಾಗ ಬೆಂಕಿಗೆ ಆಹುತಿಯಾಯಿತು. ಬೆಂಕಿ ಕೂಡಲೇ ಇಡೀ ಬಸ್ಸಿಗೆ ವ್ಯಾಪಿಸಿತು. ಎಚ್ಚರವಾಗಿದ್ದ 12 ಪ್ರಯಾಣಿಕರು ಬಸ್ಸಿನ ಕಿಟಕಿಗಳನ್ನು ಒಡೆದು ಕೆಳಗೆ ಹಾರಿದರು. ಉಳಿದ ಪ್ರಯಾಣಿಕರು ನಿದ್ದೆಯಿಂದ ಏಳುವುದಕ್ಕೂ ಮೊದಲೇ ಬೆಂಕಿ ವ್ಯಾಪಿಸಿ, ಅದರಲ್ಲಿ ಸಿಲುಕಿಕೊಂಡಿದ್ದರು.

ದುರ್ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಹರೀಶ್‌ ಕೇರ

View all posts by this author