ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lioness Death: ಮೈಸೂರು ಮೃಗಾಲಯದ ಸಿಂಹಿಣಿ ರಕ್ಷಿತಾ ಸಾವು

Mysuru Zoo: ಈ ಹೆಣ್ಣು ಸಿಂಹವು 2004ರ ಏಪ್ರಿಲ್ 1ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹ ಜೋಡಿಗೆ ಜನಿಸಿತ್ತು. ಅಂದಿನಿಂದ ಮೃಗಾಲಯದಲ್ಲಿ ಆಕರ್ಷಣೀಯ ಪ್ರಾಣಿಯಾಗಿದ್ದು, ನೋಡುಗರನ್ನು ಸೆಳೆಯುತ್ತಿತ್ತು. ವಯೋಸಹಜ ಕಾಯಿಲೆಗಳಿಂದಾಗಿ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿತ್ತು

ಮೈಸೂರು ಮೃಗಾಲಯದ ಸಿಂಹಿಣಿ ರಕ್ಷಿತಾ ಸಾವು

ಸಿಂಹಿಣಿ ರಕ್ಷಿತಾ

ಹರೀಶ್‌ ಕೇರ ಹರೀಶ್‌ ಕೇರ Aug 10, 2025 10:17 AM

ಮೈಸೂರು: ನಗರದ (Mysuru news) ಚಾಮರಾಜೇಂದ್ರ ಮೃಗಾಲಯದಲ್ಲಿ (Mysuru Zoo) ಪ್ರವಾಸಿಗರ ಆಕರ್ಷಣೆ ಆಗಿದ್ದ ಹೆಣ್ಣು ಸಿಂಹ ರಕ್ಷಿತಾ ಅನಾರೋಗ್ಯಕ್ಕೆ ತುತ್ತಾಗಿ ನಿನ್ನೆ (Lioness Death) ಸಾವಿಗೀಡಾಗಿದೆ. 21 ವರ್ಷ 4 ತಿಂಗಳ ವಯಸ್ಸಿನ ಸಿಂಹಿಣಿ ರಕ್ಷಿತಾಗೆ ವಯೋಸಹಜ ಕಾಯಿಲೆಗಳಿಂದಾಗಿ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ (ಆಗಸ್ಟ್​ 9) ಬೆಳಗ್ಗೆ 7 ಗಂಟೆ ಸಮಯದಲ್ಲಿ ಸಿಂಹ ಕೊನೆಯುಸಿರೆಳೆದಿದೆ.

ಈ ಹೆಣ್ಣು ಸಿಂಹವು 2004ರ ಏಪ್ರಿಲ್ 1ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹ ಜೋಡಿಗೆ ಜನಿಸಿತ್ತು. ಅಂದಿನಿಂದ ಮೃಗಾಲಯದಲ್ಲಿ ಆಕರ್ಷಣೀಯ ಪ್ರಾಣಿಯಾಗಿತ್ತು. ರಕ್ಷಿತಾ ಸಿಂಹಿಣಿಯ ಸಾವು ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಮೃಗಾಲಯದ ಆಡಳಿತ ವರ್ಗ, ಪಶು ವೈದ್ಯಕೀಯ ತಂಡ ಮತ್ತು ಪ್ರಾಣಿ ಪಾಲನಾ ತಂಡ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ.

ಈ ಹೆಣ್ಣು ಸಿಂಹದ ಚಿಕ್ಸಿತೆಯ ಸಂದರ್ಭದಲ್ಲಿ ಜಾಗತಿಕ ಪಶುವೈದ್ಯಕೀಯ ಸಮುದಾಯ ಮತ್ತು ವನ್ಯಜೀವಿ ನೀಡಿದ ಬೆಂಬಲವನ್ನು ಮೃಗಾಲಯದ ಆಡಳಿತ ಮಂಡಳಿ ಶ್ಲಾಘಿಸಿದೆ.

ಇದನ್ನೂ ಓದಿ: Viral Video: ಇದೇನು ಭಂಡ ಧೈರ್ಯನಾ... ಇಲ್ಲ ಹುಚ್ಚಾಟನಾ? ಅದೃಷ್ಟ ಕೈ ಕೊಟ್ಟಿದ್ರೆ ಸಿಂಹಕ್ಕೆ ಈತನೇ ಫುಲ್‌ ಮೀಲ್ಸ್‌!