ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಹಳದಿ ಮಾರ್ಗದ ಮೊದಲ ಮೆಟ್ರೋ ರೈಲಿನಲ್ಲಿ ಕಾರ್ಮಿಕರು- ಶಾಲಾ ಮಕ್ಕಳ ಜೊತೆ ಪ್ರಧಾನಿ ನಮೋ ಪ್ರಯಾಣ

Namma Metro: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ಸಂಸದರು ಸಾಥ್ ಕೊಟ್ಟಿದ್ದಾರೆ. ಪ್ರಧಾನಿ ಟಿಕೆಟ್ ಪಡೆದು, ಸ್ಕ್ಯಾನ್ ಮಾಡುವ ಮೂಲಕ , ರಾಗಿಗುಡ್ಡ ಮಟ್ರೋ ನಿಲ್ದಾಣ ಪ್ರವೇಶಿಸಿದ್ದು ವಿಶೇಷವಾಗಿತ್ತು. ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಗಳ ವಿವರವನ್ನು ಪ್ರಧಾನಿಗೆ ನೀಡಿದರು.

ಹಳದಿ ಮಾರ್ಗದ ಮೊದಲ ಮೆಟ್ರೋದಲ್ಲಿ ಕಾರ್ಮಿಕರು- ಮಕ್ಕಳ ಜೊತೆ ನಮೋ ಪ್ರಯಾಣ

ಹರೀಶ್‌ ಕೇರ ಹರೀಶ್‌ ಕೇರ Aug 10, 2025 1:28 PM

ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು ಇಂದು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸಿತು. ರಾಗಿ ಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ನಂತರ ಶಾಲಾ ಮಕ್ಕಳು ಹಾಗೂ ಕಾರ್ಮಿಕರ ಜೊತೆಗೆ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್‌ ಸಿಟಿಯವರೆಗೆ ಸಂಚರಿಸಿದರು. ಮಳೆಯ ನಡುವೆಯೇ ಜನ ಉತ್ಸಾಹದಿಂದ ಪ್ರಧಾನಿಯನ್ನು ಉದ್ಘಾಟನೆಗೆ ಸ್ವಾಗತಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸೇರಿದಂತೆ ಸಂಸದರು ಸಾಥ್ ಕೊಟ್ಟಿದ್ದಾರೆ. ಪ್ರಧಾನಿ ಟಿಕೆಟ್ ಪಡೆದು, ಸ್ಕ್ಯಾನ್ ಮಾಡುವ ಮೂಲಕ , ರಾಗಿಗುಡ್ಡ ಮಟ್ರೋ ನಿಲ್ದಾಣ ಪ್ರವೇಶಿಸಿದ್ದು ವಿಶೇಷವಾಗಿತ್ತು. ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಗಳ ವಿವರವನ್ನು ಪ್ರಧಾನಿಗೆ ನೀಡಿದರು.



ಉದ್ಘಾಟನೆ ಬಳಿಕ ಮೊದಲ ಹಳದಿ ಮೆಟ್ರೋ ರೈಲಿನಲ್ಲಿ ಪ್ರಧಾನಿ ಸಂಚರಿಸಿದರು. ಮಹಿಳಾ ಲೋಕಾಪೈಲೆಟ್ ವಿನುತಾ ರೈಲು ಚಲಾಯಿಸಿದರು. ಸರಕಾರಿ ಪ್ರೌಢಶಾಲೆಯ 16 ವಿದ್ಯಾರ್ಥಿಗಳು ಹಾಗೂ 8 ಮಂದಿ ಮೆಟ್ರೋ ಕಾರ್ಮಿಕರು ಹಾಗೂ ಸಾಮಾನ್ಯ ಜನ ಮೊದಲ ಕೋಚ್‌ನಲ್ಲಿ ಪ್ರಧಾನಿ ಪ್ರಯಾಣಿಸಿದ್ದಾರೆ. ಹಳದಿ ಮಾರ್ಗದ ಉದ್ಘಾಟನೆ ಬಳಿಕ ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ, ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದರು. ನಿಂತುಕೊಂಡೆ ಪ್ರಯಾಣಿಸಿದ ಪ್ರಧಾನಿಗೆ ಸಿಎಂ, ಡಿಸಿಎಂ ಕೂಡಾ ಸಾಥ್ ಕೊಟ್ಟರು. ಎಲೆಕ್ಟ್ರಾನಿಕ್ ಸಿಟಿವರೆಗೂ ಈ ಮೆಟ್ರೋ ಸಂಚರಿಸಲಿದ್ದು, ಐಐಐಟಿ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಇದ್ದು, 3 ನೇ ಹಂತಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ.

ಹಳದಿ ಮಾರ್ಗದಲ್ಲಿ ಸಂಚಾರ ಹೇಗೆ?

ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮೆಟ್ರೋ ಸಂಚರಿಸಲಿದೆ. ಮೊದಲ ಆರು ತಿಂಗಳು ಕೂಡಾ ಅರೆ-ಸ್ವಯಂಚಾಲಿತ (ಜಿಒಎ-2) ಮೋಡ್‌ನಲ್ಲಿ ರೈಲನ್ನು ಓಡಿಸಲಿದ್ದು, ಲೋಕೋ ಪೈಲೆಟ್ ರೈಲು ಓಡಿಸಲಿದ್ದಾರೆ. ಹಳದಿ ಮಾರ್ಗವು ಒಟ್ಟು 19.15 ಕಿಮೀ ಉದ್ದ ಇರಲಿದ್ದು, ಈ ಮಾರ್ಗಕ್ಕಾಗಿ ಹಸಿರು ಮಾರ್ಗದ ಆರ್‌ ವಿ ರಸ್ತೆಯಲ್ಲಿ ಇಂಟರ್‌ಚೇಂಜ್ ಮಾಡಿಕೊಳ್ಳಬೇಕಾಗಿದೆ. ಸದ್ಯ 3 ರೈಲುಗಳ ಮೂಲಕ, ಅರ್ಧ ಗಂಟೆಗೊಮ್ಮೆ ಮೆಟ್ರೋ ಸಂಚರಿಸಲಿದೆ. ಸದ್ಯ ಚಾಲಕಸಹಿತ ಮೆಟ್ರೋ ಸಂಚಾರಗೊಳ್ಳಲಿದೆ, ನಂತರದಲ್ಲಿ ಚಾಲಕರಹಿತ ಮೆಟ್ರೋ ಓಡಾಲಿದೆ.

ಇದನ್ನೂ ಓದಿ: Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸೋಮವಾರದಿಂದ ಸಂಚಾರ, ಏನೇನು ವಿಶೇಷತೆ?