ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೆಚ್ಚುತ್ತಿರುವ ಹೃದಯಾಘಾತ ಸಂಘದ ಆಶ್ರಯದಲ್ಲಿ ತಜ್ಞರ ಜತೆ ಪತ್ರಕರ್ತರ ಸಂವಾದ

ಯುವಕರು ಮತ್ತು ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘವು ಹುಣ್ಣಿಮೆ ಅಂಗವಾಗಿ ತಜ್ಞವೈದ್ಯರು ಮತ್ತು ಮತ್ರಕರ್ತರ ಜತೆ ಮುಖಾಮುಖಿ ಸಂವಾದ ಏರ್ಪಡಿಸಿ ಈ ಬಗ್ಗೆ ಸಾಕಷ್ಟು ಖಚಿತ ಮಾಹಿತಿಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು.

ಹೆಚ್ಚುತ್ತಿರುವ ಹೃದಯಾಘಾತ: ತಜ್ಞರ ಜತೆ ಪತ್ರಕರ್ತರ ಸಂವಾದ

Ashok Nayak Ashok Nayak Aug 10, 2025 3:28 PM

ಪೋಷಕರ ಆಯ್ಕೆ ನಮ್ಮಕೈಲಿಲ್ಲ : ಆರೋಗ್ಯದ ಆಯ್ಕೆ ನಮ್ಮ ಕೈಲಿದೆ ; ಡಾ.ಸಿ.ಎಸ್.ಹಿರೇಮಠ್ ಅಭಿಮತ

ಚಿಕ್ಕಬಳ್ಳಾಪುರ : ಹೆತ್ತವರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಯಾವ ಮಕ್ಕಳ ಕೈಯಲ್ಲಿಯೂ ಇರುವುದಿಲ್ಲ.ಆದರೆ ಬೆಳೆಯುವಾಗ,ಬೆಳೆದು ಬದುಕು ಕಟ್ಟುಕೊಳ್ಳುವಾಗ ಉತ್ತಮ ಜೀವನ ಶೈಲಿ ಹೊಂದುವುದು, ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ ಎಂದು ಸತ್ಯಸಾಯಿ  ಮಾನವ ಅಭ್ಯುದಯ ವೈದ್ಯಕೀಯ ವಿಶ್ವವಿದ್ಯಾಲಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್. ಹಿರೇಮಠ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ಪತ್ರಕರ್ತರ ಸಾಂಸ್ಕೃತಿಕ ಚಿಂತನಾ ಸಮ್ಮಿಲನದ ಭಾಗವಾಗಿ ಎರಡನೇ ತಿಂಗಳ ಕಾರ್ಯಕ್ರಮದಲ್ಲಿ ಹೆಚ್ಚು ತ್ತಿರುವ ಹೃದಯಾಘಾತ ಸಂಬಂಧ ತಜ್ಞರ ಜತೆ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಯುವಕರು ಮತ್ತು ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘವು ಹುಣ್ಣಿಮೆ ಅಂಗವಾಗಿ ತಜ್ಞವೈದ್ಯರು ಮತ್ತು ಮತ್ರಕರ್ತರ ಜತೆ ಮುಖಾಮುಖಿ ಸಂವಾದ ಏರ್ಪಡಿಸಿ ಈ ಬಗ್ಗೆ ಸಾಕಷ್ಟು ಖಚಿತ ಮಾಹಿತಿಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು.

ಸಂವಾದಕ್ಕೂ ಮುನ್ನ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಹೃದ್ರೋಗ ತಜ್ಞ ಡಾ.ಸಿ.ಎಸ್.ಹಿರೇಮಠ್, ಕೊರೋನಾ ನಂತರದ ಕಾಲದಲ್ಲಿ ದೇಶದಲ್ಲಿ ಹೃದ್ರೋಗ ಸಮಸ್ಯೆ ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಹೃದಯಸ್ತಭಂನ ಭಾರತದ ಬಹುದೊಡ್ಡ ಸಮಸ್ಯೆಯಾಗಿದೆ.ಇದನ್ನು ಹೋಗಲಾಡಿಸಲು ನಮ್ಮ ಸರಕಾರಗಳು, ಸಮಾಜ, ಮಠ ಮಾನ್ಯಗಳು ಮತ್ತು ಸಂಘಸAಸ್ಥೆಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿವೆ.ಜನತೆ ಕೂಡ ಇದನ್ನು ಅರಿತು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗುವುದು ಅಗತ್ಯ ಎಂದರು.

ಆಧುನಿಕ ಜೀವನಶೈಲಿಯಿಂದಾಗಿ ಹಲವಾರು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ.ಹೃದ್ರೋಗಕ್ಕೆ ಪ್ರಧಾನವಾಗಿ ಹೆಚ್ಚಿನ ರಕ್ತದೊತ್ತಡ,ಹೆಚ್ಚಿನ ಕೊಲೆಸ್ಟಾçಲ್,ಧೂಮಪಾನ,ಮಧುಮೇಹ,ಕರಿದ ಪದಾರ್ಥಗಳು ಮತ್ತು ಕ್ರಿಯಾಶೀಲವಲ್ಲದ ಜೀವನ ಶೈಲಿ ಕಾರಣವಾಗಿದೆ.ಇದನ್ನು ತಪ್ಪಿಸಬೇಕಾದರೆ ಧ್ಯಾನ, ಯೋಗ, ನಿತ್ಯವ್ಯಾಯಾಮ,ಜಂಕ್ ಫುಡ್ ರಹಿತಪೌಷ್ಟಿಕ ಆಹಾರ ಸೇವನೆ, ಕಾಲಕಾಲಕ್ಕೆ ತಜ್ಞ ವೈದ್ಯರಿಂದ ತಪಾಸಣೆಯ ಅಗತ್ಯವಿದೆ ಎಂದರು.

ಮುದ್ದೇನಹಳ್ಳಿಯ ಸದ್ಗುರು ಮಧುಸೂಧನ್ ಸಾಯಿ ಮಾನವ ಅಭ್ಯುದಯ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ಒಂದು ದಿನ ಹೃದ್ರೋಗ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಹೆಸರು ನೊಂದಾಯಿಸಿಕೊಟ್ಟರೆ ಆದಷ್ಟು ಶೀಘ್ರವೇ ಇದಕ್ಕೆ ಬೇಕಾದ ಕ್ರಮಗಳನ್ನು ಮುಗಿಸಲಾಗುವುದು.ಈವೇಳೆ ಹೃದಯಾಘಾತ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆಪೂರ್ವ ಕೈಗೊಳ್ಳ ಬೇಕಾದ ತಪಾಸಣಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಹೃದಯಾಘಾತಕ್ಕೆ ಒಳಗಾಗುವ ಯಾರೇ ಆಗಲಿ ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಈ ಘಟನೆ ಆದ ೩ ಗಂಟೆಯ ಒಳಗೆ ಸೂಕ್ತ ಮತ್ತು ಸಮರ್ಥ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದರೆ ಮಾತ್ರ ಅಮೂಲ್ಯ ಜೀವ ಉಳಿಸಬಹುದು.ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೂಡ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲಾಗುವುದು.ಈಭಾಗದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳ ಬಹುದು ಎಂದು ಕೋರಿದರು.

ಮಕ್ಕಳ ಹೃದ್ರೋಗ ತಜ್ಞೆ ಡಾ.ಆನಿ ಮಾತನಾಡಿ, ಮಕ್ಕಳಲ್ಲಿ ವಂಶಪಾರಂಪರ್ಯವಾಗಿ ಬರುವ ಹೃದ್ರೋಗದ ಸಮಸ್ಯೆ, ಕಾರಣ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು.

ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಮಾತನಾಡಿ ಬಿಡುವಿಲ್ಲದ ವೇಳೆಯಲ್ಲಿಯೂ ನಮ್ಮ ಮನವಿ ಮೇರೆಗೆ ಹುಣ್ಣಿಮೆ ಕಾರ್ಯಕ್ರಮಕ್ಕೆ ಬಂದು ಹೃದ್ರೋಗ ಸಂಬAಧಿ ಖಾಯಿಲೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ,ನಂತರ ನಡೆದ ಸಂವಾದದಲ್ಲಿ ಪತ್ರಕರ್ತರು ಎತ್ತಿದ ಹಲವು ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ನೀಡಿದ್ದಾರೆ.ಇಬ್ಬರೂ ವೈದ್ಯರಿಗೆ ಸಂಘವು ಆಭಾರಿಯಾಗಿದೆ ಎಂದರು.
ಹುಣ್ಣಿಮೆ ಕಾರ್ಯಕ್ರಮದಲ್ಲಿ ಹಾಡುಗಾರಿಕೆ ನಡೆಸಿಕೊಟ್ಟ ಪ್ರೌಢಶಾಲೆ ಶಿಕ್ಷಕ ನಾರಾಯಣಸ್ವಾಮಿ, ಜನಕಲಾರಂಗದ ವೆಂಕಟರಾಮು, ನಿಲುವುರಾತಹಳ್ಳಿ ನಾರಾಯಣಸ್ವಾಮಿ ಅವರನ್ನು ಇದೇ ವೇಳೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.೨ನೇ ತಿಂಗಳ ಹುಣ್ಣಿಮೆ ಕಾರ್ಯಕ್ರಮದ ನಿರೂಪಣೆ ಯನ್ನು ಮುನಿರಾಜು ಎಂ ಅರಿಕೆರೆ ಮಾಡಿದರೆ, ಸದಾಶಿವ ಬಿ ಆರಾಧ್ಯ ಸ್ವಾಗತಿಸಿ ವಂದಿಸಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ರವಿಕುಮಾರ್, ಹಿರಿಯ ಪತ್ರಕರ್ತರು, ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.