ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಪ್ರಧಾನಿ ಮೋದಿ ತಾಯಿಯ ಬಗ್ಗೆ ಎಐ ವಿಡಿಯೋ ಹರಿಬಿಟ್ಟು ಕಾಂಗ್ರೆಸ್ ನೀಚ ರಾಜಕಾರಣ: ಜೋಶಿ ಆಕ್ರೋಶ

Pralhad Joshi: ಪ್ರಧಾನಿ ಮೋದಿ ಅವರ ದಿವಂಗತ ತಾಯಿ ಹೆಸರನ್ನು ರಾಜಕಾರಣಕ್ಕೆ ಎಳೆದು ತರುವ ಮೂಲಕ ಅವಮಾನ ಮಾಡುತ್ತಿದೆ. ಮಾತ್ರವಲ್ಲ ಪುನರಾವರ್ತಿತ ಅಪರಾಧವೆಸಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಹುಲ್ ಗಾಂಧಿ ವಿಫಲ ನಾಯಕತ್ವದಲ್ಲಿ, ಕಾಂಗ್ರೆಸ್ ದ್ವೇಷ ಮತ್ತು ತುಚ್ಛ ರಾಜಕಾರಣ ಮಾಡಲು ಹೊರಟಿದೆ. ಅಧಿಕಾರದ ದುರಾಸೆಗಾಗಿ ಈ ಮಟ್ಟದ ಕೀಳು ನಡೆ ಕಾಂಗ್ರೆಸ್ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯ ಬಗ್ಗೆ ಎಐ ಆಧಾರಿತ ವಿಡಿಯೋ ಹರಿಬಿಡುವ ಮೂಲಕ ಕಾಂಗ್ರೆಸ್ ಅತ್ಯಂತ ನೀಚತನದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರ ಮಾತೋಶ್ರೀ ಕುರಿತ ಎಐ ಆಧಾರಿತ ವೀಡಿಯೊ ಮೂಲಕ ತೇಜೋವಧೆ ಮಾಡಲು ಹೊರಟಿರುವುದು ಅಸಹ್ಯಕರ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ತೀರಾ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

ಕಾಂಗ್ರೆಸ್‌ನ ಈ ನಡೆ ಸಹ್ಯ ರಾಜಕೀಯವಲ್ಲ, ಹೊಲಸು ರಾಜಕೀಯದಿಂದ ಕೂಡಿದೆ. ಯಾವುದೇ ಸಭ್ಯ ದೃಷ್ಟಿಕೋನವಿಲ್ಲದೆ ರಾಜಕಾರಣದ ಮೌಲ್ಯ, ಘನತೆಯನ್ನು ಗಾಳಿಗೆ ತೂರಿದಂತೆ ವರ್ತಿಸುತ್ತಿದೆ. ಕಾಂಗ್ರೆಸ್‌ನ ಕೆಟ್ಟ ನಡೆಗೆ ಇದು ಕೈಗನ್ನಡಿ ಎಂದು ಜೋಶಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ವಿಫಲ ನಾಯಕತ್ವದಲ್ಲಿ, ಕಾಂಗ್ರೆಸ್ ದ್ವೇಷ ಮತ್ತು ತುಚ್ಛ ರಾಜಕಾರಣ ಮಾಡಲು ಹೊರಟಿದೆ. ಅಧಿಕಾರದ ದುರಾಸೆಗಾಗಿ ಈ ಮಟ್ಟದ ಕೀಳು ನಡೆ ಕಾಂಗ್ರೆಸ್ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಚಾಟಿ ಬೀಸಿದ್ದಾರೆ.

ಅವಮಾನ ಮಾತ್ರವಲ್ಲ; ಅಪರಾಧ

ಪ್ರಧಾನಿ ಮೋದಿ ಅವರ ದಿವಂಗತ ತಾಯಿ ಹೆಸರನ್ನು ರಾಜಕಾರಣಕ್ಕೆ ಎಳೆದು ತರುವ ಮೂಲಕ ಅವಮಾನ ಮಾಡುತ್ತಿದೆ. ಮಾತ್ರವಲ್ಲ ಪುನರಾವರ್ತಿತ ಅಪರಾಧವೆಸಗುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಸಮುದಾಯಕ್ಕೆ ಸೀಮಿತವಾಗಿ ಅಧಿಕಾರ ನಡೆಸುತ್ತಿರುವಂತೆ ತೋರುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.‌ ರಾಜ್ಯದ 22 ವಿಧಾನಸಭಾ ಕ್ಷೇತ್ರಗಳ ಮುಸ್ಲಿಂ ಕಾಲೋನಿ ಅಭಿವೃದ್ಧಿಗೆ ₹398 ಕೋಟಿ ವೆಚ್ಚದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕಾಂಗ್ರೆಸ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅಧಿಕಾರ ಚಲಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ದಿನವೂ ಸಂವಿಧಾನದ ಪ್ರತಿ ಹಿಡಿದು ಅದರ ಬಗ್ಗೆ‌ ಪಾಠ ಮಾಡಲು ಬರುವ ಕಾಂಗ್ರೆಸ್ಸಿಗರು, ಒಂದು ಸಮುದಾಯದ ಓಲೈಕೆ ಹಾಗೂ ತುಷ್ಟೀಕರಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಒಂದೇ ಸಮುದಾಯ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.

ಸಂವಿಧಾನ ಆಶಯಕ್ಕೆ ವಿರುದ್ಧ ನಡೆ

ರಾಜ್ಯದಲ್ಲಿ ಒಂದೇ ಒಂದು ಸಮುದಾಯದ‌ ಅಭಿವೃದ್ಧಿ, ಕಲ್ಯಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಆ ಒಂದು ಸಮುದಾಯದ ಪರವೇ ನಿಂತು ಇಡೀ ರಾಜ್ಯವನ್ನು ದುಸ್ಥರಗೊಳಿಸುತ್ತಿದೆ. ರಾಜ್ಯದ ಅಭಿವೃದ್ಧಿ ಮತ್ತು ಹಣಕಾಸಿನ ಹಳಿ ತಪ್ಪಿಸುತ್ತಿದೆ ಎಂದು ಜೋಶಿ ದೂರಿದ್ದಾರೆ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ಪರಮಾವಧಿ ಎಲ್ಲೆ ಮೀರಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ನಡೆ ರಾಜ್ಯದಲ್ಲಿನ ಸೌಹಾರ್ದಕ್ಕೆ ಧಕ್ಕೆ ತರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Green Hydrogen: ಹಸಿರು ಹೈಡ್ರೋಜನ್‌ ಸಂಶೋಧನೆ, ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರದಿಂದ ₹100 ಕೋಟಿ ಆರ್ಥಿಕ ನೆರವು: ಜೋಶಿ