ಮೈಸೂರು: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಸೆಪ್ಟೆಂಬರ್ 1ರಂದು ಮೈಸೂರಿಗೆ (Mysuru) ಆಗಮಿಸಲಿದ್ದಾರೆ. ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಎಐಐಎಸ್ಎಚ್) ವಜ್ರಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಭಾಗವಹಿಸುವ ಬಗ್ಗೆ ಅಧಿಕೃತ ಮಾಹಿತಿ ಬಂದಿದೆ ಎಂದು ಎಐಐಎಸ್ ನಿರ್ದೇಶಕಿ ಎಂ.ಪುಷ್ಪಾವತಿ ತಿಳಿಸಿದ್ದಾರೆ.
ಇದು ರಾಷ್ಟ್ರಪತಿಗಳು ಮೈಸೂರಿಗೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಅವರು 2022 ರ ಸೆಪ್ಟೆಂಬರ್ 26 ರಂದು ನಾಡಹಬ್ಬ ದಸರಾವನ್ನು ಉದ್ಘಾಟಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರಿಗೆ ಆಗಮಿಸಲಿದ್ದು, ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಪೂರ್ವಭಾವಿ ಸಭೆ ನಡೆಸಿದರು. ಅವರ ಭೇಟಿಯ ಸಮಯದಲ್ಲಿ ಭದ್ರತಾ ಲೋಪಗಳು ಇರಬಾರದು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂತ್ರಾಲಯದ ಮೂಲ ರಾಮ ದೇವರಿಗೆ ನವರತ್ನ ಹಾರ ಸಮರ್ಪಿಸಿದ ಜಿ.ವಿ. ರಾಮಕೃಷ್ಣ ದಂಪತಿ
ಮಂತ್ರಾಲಯ: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ (Sri Raghavendra Swamy Mutt) ಅದ್ಧೂರಿಯಾಗಿ ನಡೆದಿದೆ. ಇದರ ಅಂಗವಾಗಿ ಗುರು ರಾಯರ ಪೂರ್ವಾರಾಧನೆ ಸಂದರ್ಭದಲ್ಲಿ, ಜಿ.ವಿ. ರಾಮಕೃಷ್ಣ ಮತ್ತು ಪತ್ನಿ ಕವಿತಾ ರಾಮಕೃಷ್ಣ ಅವರು ಮಂತ್ರಾಲಯದ ಮೂಲ ರಾಮ ದೇವರಿಗೆ ಅಪರೂಪದ ನವರತ್ನ ಹಾರವನ್ನು ಸಮರ್ಪಿಸಿದ್ದಾರೆ.
ಜಿ.ವಿ. ರಾಮಕೃಷ್ಣ ಪೂರ್ಣ ಹೆಸರು ಗೌಡಗೆರೆ ವೇದಾಂತಿ ರಾಮಕೃಷ್ಣ. ಇವರು ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ. 2007ರಿಂದ ಒಮಾನ್ ಪ್ರಮುಖ ಬ್ಯಾಂಕ್‌ವೊಂದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಕವಿತಾ ಅವರು ಯೋಗ ಗುರುಗಳಾಗಿದ್ದಾರೆ. ಒಮಾನ್‌ನಲ್ಲೂ ಯೋಗದ ಮಹಿಮೆಯನ್ನು ಪಸರಿಸಿದ್ದಾರೆ. ಒಮಾನ್‌ನ ಪಾರಂಪರಿಕ ಜ್ಯುವೆಲ್ಲರಿಗಳಿಗೆ ಕಲೆಯ ಸ್ಪರ್ಶ ನೀಡುತ್ತಿದ್ದಾರೆ.
ರಾಯರ ವರ್ಧಂತಿ ಉತ್ಸವದ ವೇಳೆ ನಾವು ನಕ್ಷತ್ರ ಮಾಲೆಯನ್ನು ಸಮರ್ಪಿಸಿದ್ದೆವು. ಮಧ್ಯಾರಾಧನೆ ಸಂದರ್ಭದಲ್ಲಿ ರಾಯರ ಅನುಗ್ರಹಕ್ಕಾಗಿ ನವರತ್ನಮಾಲೆ ಸಮರ್ಪಿಸಿದ್ದೇವೆ ಎಂದು ಜಿ.ವಿ. ರಾಮಕೃಷ್ಣ ಅವರು ಭಕ್ತಿ ಮತ್ತು ವಿನಮ್ರತೆಯಿಂದ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ?; ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆ ನರೇಂದ್ರ ಮೋದಿ, ಅಮಿತ್ ಶಾ ಸಮಾಲೋಚನೆ