ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಜೈಲಿನಲ್ಲಿನ ದರ್ಶನ್‌ ಪೋಟೊ ವೈರಲ್‌ ಮಾಡಿದ್ಯಾರು?; ಪೊಲೀಸರಿಗೆ ಪುನೀತ್‌ ಕೆರೆಹಳ್ಳಿ ಪ್ರಶ್ನೆ

Actor Darshan: ವೈರಲ್ ಆದ ಫೋಟೊದಲ್ಲಿ ದರ್ಶನ್ ತಲೆ ಬೋಳಿಸಿಕೊಂಡಿರುವುದನ್ನು ನೋಡಬಹುದು. ದರ್ಶನ್ ಇತ್ತೀಚೆಗೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮುಡಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದರಿಂದ ಟೀಕೆಗಳು ವ್ಯಕ್ತವಾಗಿವೆ. ಫೋಟೊ ವೈರಲ್‌ ಮಾಡಿದವರ ವಿರುದ್ಧ ಕ್ರಮವಾಗಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ದರ್ಶನ್‌ ಪೋಟೊ ವೈರಲ್‌ ಮಾಡಿದ್ಯಾರು?; ಪುನೀತ್‌ ಕೆರೆಹಳ್ಳಿ

Prabhakara R Prabhakara R Aug 17, 2025 9:20 PM

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಈ ನಡುವೆ ದರ್ಶನ್‌, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ವೇಳೆ ಪೊಲೀಸರು ಕ್ಲಿಕ್ಕಿಸಿದ ಫೋಟೊಗಳು ವೈರಲ್ ಆಗಿದ್ದವು. ಈ ಬಗ್ಗೆ ತರಹೇವಾರಿ ಕಾಮೆಂಟ್ಸ್ ಬರುತ್ತಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಕುರಿತು ಹಿಂದೂಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ಪ್ರತಿಕ್ರಿಯಿಸಿದ್ದು, ಜೈಲಿನ ಒಳಗೆ ತೆಗೆದ ದರ್ಶನ್ (Actor Darshan) ಫೋಟೊ ಹೊರ ಬಂದಿದ್ದು ಹೇಗೆ? ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪುನೀತ್‌ ಕೆರೆಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ, ಜೈಲಿನಲ್ಲಿ ಮೊಬೈಲ್ ಬಳಕೆ ಇಲ್ಲ, ಆದರೂ ಜೈಲಿನ ಒಳಗೆ web camera ದಲ್ಲಿ ತೆಗೆದ photo ಹೊರಗೆ ಮಾಧ್ಯಮಗಳಿಗೆ ಬರುತ್ತೆ ಅಂದರೆ? ಅದು ಹೇಗೆ ಸಾಧ್ಯ? ಈ ಪೊಲೀಸ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ! ಹಾಗೂ ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವುದು ಮನದಟ್ಟಾಗುತ್ತಿದೆ! ಮಾನ್ಯ ಡಿಜಿಪಿಯವರೇ ಕೂಡಲೇ ಈ photo ಹೊರಗೆ ಹಾಕಿದ ನಿಮ್ಮ ಇಲಾಖೆಯವರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.



ಇನ್ನು ವೈರಲ್ ಆದ ಫೋಟೊದಲ್ಲಿ ದರ್ಶನ್ ತಲೆ ಬೋಳಿಸಿಕೊಂಡಿರುವುದನ್ನು ನೋಡಬಹುದು. ದರ್ಶನ್ ಇತ್ತೀಚೆಗೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮುಡಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಹಿಂದೆ ದರ್ಶನ್ ವಿಗ್ ಹಾಕಿಕೊಳ್ಳುತ್ತಿದ್ದರು. ಜೈಲಿನಲ್ಲಿ ವಿಗ್‌ ಇಲ್ಲದ ಲುಕ್ ವೈರಲ್‌ ಆಗಿತ್ತು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದರಿಂದ ಟೀಕೆಗಳು ವ್ಯಕ್ತವಾಗಿವೆ. ಫೋಟೊ ವೈರಲ್‌ ಮಾಡಿದವರ ವಿರುದ್ಧ ಕ್ರಮವಾಗಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.