ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sri Raghavendra Swamy Mutt: ಮಂತ್ರಾಲಯದ ಮೂಲ ರಾಮ ದೇವರಿಗೆ ನವರತ್ನ ಹಾರ ಸಮರ್ಪಿಸಿದ ಜಿ.ವಿ. ರಾಮಕೃಷ್ಣ ದಂಪತಿ

Sri Raghavendra Swamy Mutt: ಗುರು ರಾಯರ ಪೂರ್ವಾರಾಧನೆ ಸಂದರ್ಭದಲ್ಲಿ ಬೆಂಗಳೂರಿನ ಜಿ.ವಿ. ರಾಮಕೃಷ್ಣ ಮತ್ತು ಪತ್ನಿ ಕವಿತಾ ರಾಮಕೃಷ್ಣ ಅವರು ಮಂತ್ರಾಲಯದ ಮೂಲ ರಾಮ ದೇವರಿಗೆ ಅಪರೂಪದ ನವರತ್ನ ಹಾರವನ್ನು ಸಮರ್ಪಿಸಿದ್ದಾರೆ. ಜಿ.ವಿ. ರಾಮಕೃಷ್ಣ ಅವರು 2007ರಿಂದ ಒಮಾನ್ ಪ್ರಮುಖ ಬ್ಯಾಂಕ್‌‌ವೊಂದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂತ್ರಾಲಯದ ಮೂಲ ರಾಮ ದೇವರಿಗೆ ನವರತ್ನ ಹಾರ ಸಮರ್ಪಣೆ

Prabhakara R Prabhakara R Aug 17, 2025 10:33 PM

ಮಂತ್ರಾಲಯ: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ (Sri Raghavendra Swamy Mutt) ಅದ್ಧೂರಿಯಾಗಿ ನಡೆದಿದೆ. ಇದರ ಅಂಗವಾಗಿ ಗುರು ರಾಯರ ಪೂರ್ವಾರಾಧನೆ ಸಂದರ್ಭದಲ್ಲಿ, ಜಿ.ವಿ. ರಾಮಕೃಷ್ಣ ಮತ್ತು ಪತ್ನಿ ಕವಿತಾ ರಾಮಕೃಷ್ಣ ಅವರು ಮಂತ್ರಾಲಯದ ಮೂಲ ರಾಮ ದೇವರಿಗೆ ಅಪರೂಪದ ನವರತ್ನ ಹಾರವನ್ನು ಸಮರ್ಪಿಸಿದ್ದಾರೆ.

ಜಿ.ವಿ. ರಾಮಕೃಷ್ಣ ಪೂರ್ಣ ಹೆಸರು ಗೌಡಗೆರೆ ವೇದಾಂತಿ ರಾಮಕೃಷ್ಣ. ಇವರು ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ. 2007ರಿಂದ ಒಮಾನ್ ಪ್ರಮುಖ ಬ್ಯಾಂಕ್‌‌ವೊಂದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಕವಿತಾ ಅವರು ಯೋಗ ಗುರುಗಳಾಗಿದ್ದಾರೆ. ಒಮಾನ್‌‌ನಲ್ಲೂ ಯೋಗದ ಮಹಿಮೆಯನ್ನು ಪಸರಿಸಿದ್ದಾರೆ. ಒಮಾನ್‌‌ನ ಪಾರಂಪರಿಕ ಜ್ಯುವೆಲ್ಲರಿಗಳಿಗೆ ಕಲೆಯ ಸ್ಪರ್ಶ ನೀಡುತ್ತಿದ್ದಾರೆ.

Sri Raghavendra Swamy Mutt (1)

ರಾಯರ ವರ್ಧಂತಿ ಉತ್ಸವದ ವೇಳೆ ನಾವು ನಕ್ಷತ್ರ ಮಾಲೆಯನ್ನು ಸಮರ್ಪಿಸಿದ್ದೆವು. ಮಧ್ಯಾರಾಧನೆ ಸಂದರ್ಭದಲ್ಲಿ ರಾಯರ ಅನುಗ್ರಹಕ್ಕಾಗಿ ನವರತ್ನಮಾಲೆ ಸಮರ್ಪಿಸಿದ್ದೇವೆ ಎಂದು ಜಿ.ವಿ. ರಾಮಕೃಷ್ಣ ಅವರು ಭಕ್ತಿ ಮತ್ತು ವಿನಮ್ರತೆಯಿಂದ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Mantralayam Rathotsava: ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆದ ರಾಯರ ಉತ್ತರಾರಾಧನೆ ಮಹಾರಥೋತ್ಸವ