ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BL Santosh: ಉಡುಪಿಯಲ್ಲಿ ನೂತನ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡದ ಶಿಲಾನ್ಯಾಸ

BL Santosh: ಬಹಳ ದಿನಗಳಿಂದ ನಮ್ಮೆಲ್ಲರ ಮನಸ್ಸಿನಲ್ಲಿ, ನಮ್ಮ ಹಿಂದಿನ ಪೀಳಿಗೆಯ ಕಾರ್ಯಕರ್ತರ, ನಾಯಕರ ಮನಸ್ಸಿನಲ್ಲಿ ಇದ್ದ ಕನಸು ನನಸಾಗುವ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹೆಜ್ಜೆ ಇದು. ನಮ್ಮ ಸಂಘಟನೆಗೆ ಕಾರ್ಯಾಲಯ ಬೇಕು ಎಂಬುದು ಒಂದು ಅನುಕೂಲತೆಯಲ್ಲ; ಅದೊಂದು ಅನಿವಾರ್ಯತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದ್ದಾರೆ.

ಉಡುಪಿ: ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷ ಇವತ್ತಿನ ಸ್ವರೂಪ ತಾಳಲು ಅನೇಕ ಜನ ಪ್ರತ್ಯಕ್ಷ, ಇನ್ನೂ ಅನೇಕ ಜನರು ಪರೋಕ್ಷ, ಅನೇಕ ಜನರು ನೈತಿಕವಾಗಿ, ಅನೇಕ ಜನರು ಶಾರೀರಿಕವಾಗಿ- ಹೀಗೆ ಎಲ್ಲರೂ ಯೋಗದಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ಹೇಳಿದರು. ಶುಕ್ರವಾರ ಇಲ್ಲಿನ ಜಿಲ್ಲಾ ಕಾರ್ಯಾಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಸಿ ಕಟ್ಟಿದ ರೀತಿಯಲ್ಲಿ ಬೇರೆ ಬೇರೆ ಪಕ್ಷಗಳಿಂದ ಬಂದು ನಮ್ಮ ಪಕ್ಷಕ್ಕೆ ವೈಚಾರಿಕ, ರಾಜಕೀಯವಾಗಿ ಸೇರ್ಪಡೆಗೊಂಡ ನಾಯಕರೂ ಇಲ್ಲಿದ್ದಾರೆ. 3 ಥರದ ವ್ಯಕ್ತಿಗಳು ರಾಜಕೀಯ ಸಂಘಟನೆಯಲ್ಲಿ ಅನಿವಾರ್ಯ. ಬೇರು, ಚಿಗುರು ಮತ್ತು ನಮ್ಮ ಸಂಘಟನೆಗೆ, ನಮ್ಮ ವೃಕ್ಷಕ್ಕೆ ಆಗಾಗ ಕಸಿಯೂ ಕಟ್ಟುತ್ತಿರಬೇಕು. ಕಾಲಕ್ಕನುಗುಣವಾದ ಕುಶಲತೆಗಳು ನಮ್ಮದಾಗಲು ಸ್ವಾಭಾವಿಕ- ಸ್ವಾಭಾವಿಕವಲ್ಲದ ಬೆಳವಣಿಗೆ ಬೇಕು ಎಂದು ತಿಳಿಸಿದರು.

ಬಹಳ ದಿನಗಳಿಂದ ನಮ್ಮೆಲ್ಲರ ಮನಸ್ಸಿನಲ್ಲಿ, ನಮ್ಮ ಹಿಂದಿನ ಪೀಳಿಗೆಯ ಕಾರ್ಯಕರ್ತರ, ನಾಯಕರ ಮನಸ್ಸಿನಲ್ಲಿ ಇದ್ದ ಕನಸು ನನಸಾಗುವ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹೆಜ್ಜೆ ಇದು. ನಮ್ಮ ಸಂಘಟನೆಗೆ ಕಾರ್ಯಾಲಯ ಬೇಕು ಎಂಬುದು ಒಂದು ಅನುಕೂಲತೆಯಲ್ಲ; ಅದೊಂದು ಅನಿವಾರ್ಯತೆ ಎಂದು ಹೇಳಿದರು.

ಈಗಿನ ಕಟ್ಟಡ ನಮ್ಮದೇ ಕಟ್ಟಡ, ಕಾರ್ಯಾಲಯ ಆಗಿದ್ದರೂ ನಮ್ಮ ಮನಸ್ಸಿನಲ್ಲಿ ಆ ಜಾಗ ನಮ್ಮದಲ್ಲ ಎಂಬ ಕೊರತೆ ಇತ್ತು. ಹಾಗಾಗಿ ನಾವು ಜಮೀನು ಹುಡುಕಿದೆವು. ಇವತ್ತು ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಬರುವ 12, 16, 18 ತಿಂಗಳಲ್ಲಿ ನಮ್ಮದೇ ಜಾಗ, ನಮ್ಮದೇ ಕಟ್ಟಡದಲ್ಲಿ ಬಿಜೆಪಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | CT Ravi: ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ? ಸಿದ್ದರಾಮಯ್ಯ ಅವರೇ ನಿಮಗೇ ಈ ಪತ್ರ ಬರೆದಿದ್ದಾರೆ ಎಂದ ಸಿ.ಟಿ. ರವಿ

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಕೆ.ಟಿ. ಪೂಜಾರಿ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಾಸಕರಾದ ಯಶ್‍ಪಾಲ್ ಆನಂದ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.