ಶಿರಸಿ: ಪ್ರತೀ ವರ್ಷ ನಡೆಯುವ 'ನಾಟಿ ಹಬ್ಬ ನೆಲಮೂಲ ಸಂಸ್ಕೃತಿಯ ಪ್ರತೀಕವಾಗಿದ್ದು, ಪಾರಂಪರಿಕ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸುವ, ಸಂರಕ್ಷಿಸುವ ಪ್ರಯತ್ನವಾಗಿದೆ.
ಅಳಿವಿನಂಚಿನಲ್ಲಿರುವ ಔಷಧೀಯ ಗುಣಗಳನ್ನು ಹೊಂದಿರುವ ದೇಸಿ ನೆಲಮೂಲ ತಳಿಯ ಭತ್ತಗಳ ಸಂರಕ್ಷಣೆಗಾಗಿ ನಾಟಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಸ್ಕೊಡ್ವೆಸ್ ಸಂಸ್ಥೆಯ ವೆಂಕಟೇಶ್ ನಾಯ್ಕ ಹೇಳಿದರು. ಅವರಿಂದು ನಗರದಲ್ಲಿಯ ತಮ್ಮ ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇದನ್ನೂ ಓದಿ: Sirsi News: ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಈ ಜಿಲ್ಲೆಯಲ್ಲಿ “ಕೂಬಿಂಗ್ ಆಪರೇಷನ್” ಆಗಲಿ
ಯುವಕರನ್ನು ಕೃಷಿಯತ್ತ ಆಕರ್ಷಿಸುವ, ಸರಳ ಬೇಸಾಯದಿಂದ ರೈತರ ಆದಾಯವನ್ನು ಹೆಚ್ಚಿ ಸುವ, ಕಡಿಮೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಲು ಬೇಕಾದ ಮಾಹಿತಿ ಒದಗಿಸುವ ಉದ್ದೇಶದಿಂದ ಪ್ರತೀ ವರ್ಷ ನಾಟಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಳಿವಿನಂಚಿ ನಲ್ಲಿರುವ ಬೀಜಗಳ ಪ್ರದರ್ಶನ ಹಾಗೂ ಮಾಹಿತಿ, ಸಮಗ್ರ ಕೃಷಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಮಹಿಳೆಯರಿಂದ ಜೇನು ಕೃಷಿ, ಜೈವಿಕ ಸಂಪನ್ಮೂಲ ಕೇಂದ್ರದ ಪರಿಚಯ, ಕೃಷಿ ಯಾಧಾರಿತ ಅರಣೀಕರಣದ ಪ್ರಾತ್ಯಕ್ಷಿಕೆಗಳು ನಾಟಿ ಹಬ್ಬದಲ್ಲಿ ಇರಲಿದೆ.
'ಸ್ಕೊಡ್ ವೆಸ್ ನಾಟಿ ಹಬ್ಬ-2025' ಅಗಸ್ಟ್ 01 ರಂದು 10:30ಕ್ಕೆ ಬನವಾಸಿ ರಸ್ತೆಯ ಉಂಚಳ್ಳಿಯ ತುಡ್ಡಿ ಮನೆಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಹಾಗೂ ವಿಶ್ವ ವಿದ್ಯಾಲಯಗಳ ಕೃಷಿ ವಿಜ್ಞಾನಿಗಳು, ಮಾದರಿ ಕೃಷಿಕರು, ರೈತ ಮಹಿಳೆಯರು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪ್ರತಿಷ್ಠಿತ ಮಾಧ್ಯಮ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರಮುಖರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯದರ್ಶಿಗಳು, ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ, ಕೃಷಿ ವಿಭಾಗದ ಮುಖ್ಯಸ್ಥ ಪ್ರಶಾಂತ ನಾಯಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.