ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿದ ಮಹಿಳೆ; ಆತ ಮದುವೆಗೆ ನಿರಾಕರಿಸಿದಾಗ ಆತ್ಮಹತ್ಯೆ

Vijayanagar News: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಮಹಿಳೆ ಆತ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.

ಅನೈತಿಕ ಸಂಬಂಧಕ್ಕೆ ಮತ್ತೊಂದು ಗೃಹಿಣಿ ಬಲಿ

ಡೆತ್‌ನೋಟ್‌ ಮತ್ತು ಸಾಂದರ್ಭಿಕ ಚಿತ್ರ.

Ramesh B Ramesh B Jul 27, 2025 8:01 PM

ವಿಜಯನಗರ: ಆಕೆಗೆ ಅದಾಗಲೇ ಮದುವೆಯಾಗಿತ್ತು. ಆದರೂ ಪರಪುರುಷನ ಆಕರ್ಷಣೆಗೆ ಒಳಗಾಗಿ ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದಳು. ಅಲ್ಲದೆ ಅದನ್ನೆಲ್ಲ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಟ್ಟಳು. ಇದೀಗ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ (Self Harming). ಅಲ್ಲಿಗೆ ಮತ್ತೊಂದು ವಿವಾಹೇತರ ಸಂಬಂಧ ದುರಂತ ಅಂತ್ಯ ಕಂಡಿದೆ (Vijayanagar News). ಹೀಗೆ ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.

ಜ್ಯೋತಿ ತುಂಗಭದ್ರಾ ನದಿಯ ಸೇತುವೆ ಮೇಲಿನಿಂದ ಹಾರಿದ್ದಳು. ಆಕೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಅದಾಗಲೇ ಆಕೆ ಮೃತಪಟ್ಟಿದ್ದಳು. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಜ್ಯೋತಿಯ ಶವ ಹೊರ ತೆಗೆದಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್‌ನೋಟ್‌ ಸಿಕ್ಕಿದೆ. ಅದರಲ್ಲಿ ತನಗಿದ್ದ ವಿವಾಹೇತರ ಸಂಬಂಧದ ಬಗ್ಗೆ ಮಾಹಿತಿ ನೀಡಿ ಆತತ್ಮಹತ್ಯೆಗೆ ಕಾರಣವನ್ನೂ ವಿವರಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: Self Harming: ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆ ಕೇಸ್‌ಗೆ ತಿರುವು; ಗಂಡನ ಅನೈತಿಕ ಸಂಬಂಧದಿಂದ ಪತ್ನಿ ಸೂಸೈಡ್‌

ಡೆತ್‌ನೋಟ್‌ನಲ್ಲಿ ಏನಿದೆ?

ಡೆತ್‌ನೋಟ್‌ನಲ್ಲಿ ಜ್ಯೋತಿ ತನ್ನ ಸಾವಿಗೆ ಶಿವಮೊಗ್ಗ ಜಿಲ್ಲೆಯ ಸುಗೂರು ಶಿವಮೂರ್ತಿ ಮತ್ತು ಗಂಗಮ್ಮ ದಂಪತಿಯ ಮಗ ಬಸವರಾಜ (ವಿನಯ್‌) ಕಾರಣ ಎಂದು ಬರೆದಿದ್ದಾಳೆ. ʼʼಮೊದಲು ಇನ್‌ಸ್ಟಾಗ್ರಾಂನಲ್ಲಿ ಆತನೇ ಮೆಸೇಜ್‌ ಮಾಡಿದ್ದು. ಆರಂಭದಲ್ಲಿ ನಾನು ಇವನ ಲವ್‌ ಮಾಡಲು ಒಪ್ಪಲಿಲ್ಲ. ಒತ್ತಾಯ ಮಾಡಿದ್ದ. ಚೆನ್ನಾಗಿ ನೋಡಿಕೊಳ್ತೇನೆ ಎಂದು ಹೇಳಿ ಬಸವರಾಜ ನನ್ನ ಬುಟ್ಟಿಗೆ ಹಾಕಿಕೊಂಡ. ಹೀಗೆ 2024ರ ಆಗಸ್ಟ್‌ನಲ್ಲಿ ನಮ್ಮ ನಡುವೆ ಲವ್‌ ಆರಂಭವಾಯ್ತು. ಇವನು ನನ್ನ ಜತೆನೂ ಚೆನ್ನಾಗಿದ್ದು, ಬೇರೆ ಹುಡುಗಿಯರ ಜತೆನೂ ಚಾಟ್‌ ಮಾಡ್ತಿದ್ದ. ಹಾಗಾಗಿ ನಾನು ಇವನ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಜಿಮೇಲ್‌ ಹ್ಯಾಕ್‌ ಮಾಡಿಕೊಂಡಿದ್ದೆʼʼ ಎಂದು ಹೇಳಿದ್ದಾಳೆ.

ಮುಂದುವರಿದು, ʼʼಸುಮಾರು 12 ಬಾರಿ ನಾವಿಬ್ಬರು ಹರಿಹರ, ರಾಣೆಬೆನ್ನೂರು ಲಾಡ್ಜ್‌ಗೆ ಹೋಗಿದ್ವಿ. ಇವನು ನನ್ನನ್ನು ಮದುವೆ ಆಗ್ತೀನಿ, ಯಾವ ಹುಡುಗಿನೂ ನೋಡಲ್ಲ, ಮೆಸೇಜ್‌ ಮಾಡಲ್ಲ, ಕಾಲ್‌ ಮಾಡಲ್ಲ, ಮಾಡಿದರೆ ನೀನು ಸಾಯಿ ಎಂದು ಹೇಳಿದ್ದ. ಆದರೂ ಆತ 3-4 ಸಲ ಬೇರೆ ಹುಡುಗಿಗೆ ಮೆಸೇಜ್‌ ಮಾಡಿದ್ದು ಗೊತ್ತಾಯ್ತು. ಅದಕ್ಕೆ ನಾನು ಆವಾಗ ಸಾಯಬೇಕು ಎಂದು ಹೋಗಿದ್ದೆ. ಇನ್ಮೇಲೆ ಹೀಗೆ ಮಾಡಲ್ಲ ಎಂದು ಹೇಳಿದ್ದ. ಜು. 7ರಂದು ಕುರುವತಿ ಬಸವಣ್ಣ ದೇವರ ಬಳಿ ಹೋಗಿದ್ವಿ. ಅಲ್ಲಿ ಎಲ್ಲ ದೇವರ ಆಣೆ ಹಾಕಿ, ಗಂಟೆ ಹೊಡೆದಿದ್ದ. ಫೋನ್‌ ಕೂಡ ನನ್ನ ಬಳಿ ಇತ್ತು. ಇವನ ಕಾರಣದಿಂದ ನಾನು ಗಂಡನ ಜತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮಲ್ಕೊತಿರಲಿಲ್ಲ. ಆದರೆ ಬಸವರಾಜ ನನಗೆ ಮೋಸ ಮಾಡಿದ್ದಾನೆ. ನನ್ನ ಮದುವೆ ಆಗ್ತೀನಿ ಎಂದು ಹೇಳಿ ಈಗ ಅವಾಯ್ಡ್‌ ಮಾಡುತ್ತಿದ್ದಾನೆ. ಅದಕ್ಕೆ ಸಾಯ್ತಿದ್ದೀನಿ. ನನ್ನ ಸಾವಿಗೆ ಸುಗೂರು ಶಿವಮೂರ್ತಿ ಗಾಣಿಗ ಮಗ ಬಸವರಾಜನೇ ಕಾರಣ. ನನ್ನ ಗಂಡನ ಮನೆಯವರು ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರುʼʼ ಎಂದು ಜ್ಯೋತಿ ತಿಳಿಸಿದ್ದಾಳೆ.

ʼʼನಾನು ಇವನ ಜತೆ ಮಾತನಾಡಿರುವ ರೆಕಾರ್ಡ್‌ ನನ್ನ ಫೋನ್‌ನಲ್ಲಿ ಇದ್ದಾವೆ ನೋಡಿ. ನಾವು ಲಾಡ್ಜ್‌ಗೆ ಹೋದಾಗ ತೆಗೆದ ಫೋಟೊ, ಸೆಕ್ಸ್‌ ಮಾಡಿದ್ದು ಕೂಡ ನನ್ನ ಫೋನ್‌ನಲ್ಲಿ ಇದ್ದಾವೆ ನೋಡಿ. ನನಗೆ ಇವನು ನಿನ್ನ ಗಂಡನನ್ನು ಸಾಯಿಸಿ ನಿನ್ನ ಹೆಸರಿನಲ್ಲಿ ಆಸ್ತಿ ತೆಗೆದುಕೊಂಡು ಬಾ ಅಂತ ಹೇಳ್ತಿದ್ದ, ನಾನು ಆತನನ್ನು ತುಂಬ ಇಷ್ಟಪಡ್ತಿದ್ದೆ, ಇವನಿಗೆ ಮರಣ ದಂಡನೆ ಆಗಬೇಕುʼʼ ಎಂದು ಆಗ್ರಹಿಸಿದ್ದಾಳೆ.