ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಅಹಮದಾಬಾದ್‌ ಸ್ಟೇಡಿಯಂ ಕೊಹ್ಲಿಗೆ ಅನ್‌ಲಕ್ಕಿ; ಇಲ್ಲಿದೆ ದಾಖಲೆ

ವಿರಾಟ್‌ ಕೊಹ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಖುಷಿಗಿಂತ ಹೆಚ್ಚಾಗಿ ನೋವನ್ನೆ ಕಂಡಿದ್ದಾರೆ. 2022ರ ಐಪಿಎಲ್‌ ಕ್ವಾಲಿಫೈಯರ್‌-2, 2023ರ ಏಕದಿನ ವಿಶ್ವಕಪ್‌ ಫೈನಲ್‌ ಮತ್ತು 2024ರ ಐಪಿಎಲ್‌ ಎಲಿಮಿನೇಟರ್‌ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಅಹಮದಾಬಾದ್‌: ಐಪಿಎಲ್‌ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB), ಈ ಸಲ ಟ್ರೋಫಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಕಳೆದ 17 ವರ್ಷಗಳಲ್ಲಿ ಮೂರು ಬಾರಿ ಫೈನಲ್‌(ipl final 2025) ಪ್ರವೇಶಿಸಿದ್ದ ಆರ್‌ಸಿಬಿ(RCB) ಕಪ್‌ ಗೆಲ್ಲಲು ವಿಫಲವಾಗಿತ್ತು. ಇದೀಗ 18ನೇ ವರ್ಷದಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಐಪಿಎಲ್‌ 18ರ ಹರೆಯ, ವಿರಾಟ್(Virat Kohli) ಅದೃಷ್ಟ ಸಂಖ್ಯೆಯೂ 18. ಹೀಗಾಗಿ ಫೈನಲ್‌ ಪಂದ್ಯ ಹೆಚ್ಚಿನ ರೋಚಕತೆ ಮನೆ ಮಾಡಿದೆ. ಆದರೆ ಫೈನಲ್‌ ನಡೆಯುವ ತಾಣ ಕೊಹ್ಲಿಗೆ ಇದುವರೆಗೆ ನಿರಾಸೆಯನ್ನೇ ಮೂಡಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಹೌದು, ವಿರಾಟ್‌ ಕೊಹ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಖುಷಿಗಿಂತ ಹೆಚ್ಚಾಗಿ ನೋವನ್ನೆ ಕಂಡಿದ್ದಾರೆ. 2022ರ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು. ಇದಾದ ಬಳಿಕ 2023ರ ಏಕದಿನ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ್ದ ಕೊಹ್ಲಿ ಮತ್ತು ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡು ಸೋಲನುಭವಿಸಿದ್ದರು. ಕಳೆದ ಆವೃತ್ತಿಯ ಐಪಿಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿಯೂ ಆರ್‌ಸಿಬಿ ಸೋಲು ಕಂಡಿತ್ತು. ಒಟ್ಟಾರೆ ಮಹತ್ವದ ಪಂದ್ಯದಲ್ಲಿ ಅಹಮದಾಬಾದ್‌ ಸ್ಟೇಡಿಯಂ ಕೊಹ್ಲಿಗೆ ಅನ್‌ ಲಕ್ಕಿ ಆಗಿದೆ. ಈ ಬಾರಿಯಾದರೂ ಲಕ್‌ ಕೊಹ್ಲಿ ಮತ್ತು ಆರ್‌ಸಿಬಿ ಪರ ಒಲಿದು ತಂಡ ಸಂಭ್ರಮಾಚರಣೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.



ಆರ್‌ಸಿಬಿ ಪ್ಲೇ ಆಫ್/ನಾಕೌಟ್‌ ಸಾಧನೆ

2009 - ಫೈನಲ್ (ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್ ಗಳಿಂದ ಸೋಲು)

2010 - ಸೆಮಿಫೈನಲ್ (ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್ ಗಳಿಂದ ಸೋಲು)

2011 - ಫೈನಲ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ58 ರನ್ ಗಳಿಂದ ಸೋಲು)

2015 - ಕ್ವಾಲಿಫೈಯರ್ 2 (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು)

2016 - ಫೈನಲ್ (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳ ಸೋಲು)

2020 - ಎಲಿಮಿನೇಟರ್ (ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಸೋಲು)

2021- ಎಲಿಮಿನೇಟರ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್‌ ಸೋಲು)

2022 - ಕ್ವಾಲಿಫೈಯರ್ 2 (ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಸೋಲು)

2024 - ಎಲಿಮಿನೇಟರ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ಸೋಲು)