ಟಿ20 ಮುಂಬೈ ಲೀಗ್; ಐಕಾನ್ ಆಟಗಾರರ ಪಟ್ಟಿಯಲ್ಲಿ ಪೃಥ್ವಿ ಶಾ
ಓಟ್ಟು 8 ತಂಡಗಳ ಟೂರ್ನಿ ಇದಾಗಿದ್ದು, 20 ಪಂದ್ಯಗಳು ಒಳಗೊಂಡಿದೆ. ಲೀಗ್ ಹಂತದಲ್ಲಿ ಪ್ರತಿ ತಂಡ ತಲಾ ಐದು ಪಂದ್ಯಗಳನ್ನು ಆಡಲಿದೆ. ಹರಾಜು ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.
abhilashkurunji@gmail.com
ವೈಭವ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟವೊಂದು ಆರಂಭವಾಗಿದ್ದು, ಇವರ ಸಾಧನೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿಂಡೀಸ್‌ನ ಬ್ರಿಯಾನ್ ಲಾರಾ ಸೇರಿ ಅನೇಕರು ಸಲಾಂ ಹೊಡೆದಿದ್ದಾರೆ. ಈಗಾಗಲೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಮ್ ಇಂಡಿಯಾದ ಮುಂದಿನ ರನ್ ಮಷೀನ್ ಎಂದು ಬಿಂಬಿಸಲಾಗಿದೆ.
ಇದುವರೆಗಿನ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 16 ಪಂದ್ಯ ಗೆದ್ದಿದ್ದರೆ, ಪಂಜಾಬ್ 15 ಪಂದ್ಯ ಜಯಿಸಿದೆ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ತಂಡ 18 ರನ್ ಅಂತರದ ಗೆಲುವು ಸಾಧಿಸಿತ್ತು.
ಸಚಿನ್ ತೆಂಡೂಲ್ಕರ್ 63 ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್ 62 ಇನಿಂಗ್ಸ್‌ನಲ್ಲಿ ಈ ಗುರಿ ತಲುಪಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತೀಯ ದಾಖಲೆ ಋತುರಾಜ್ ಗಾಯಕ್ವಾಡ್(57 ಇನಿಂಗ್ಸ್) ಹೆಸರಿನಲ್ಲಿದೆ. ಕನ್ನಡಿಗ ಕೆ.ಎಲ್ ರಾಹುಲ್(60 ಇನಿಂಗ್ಸ್) ದ್ವಿತೀಯ ಸ್ಥಾನದಲ್ಲಿದ್ದಾರೆ.
ಬಿಸಿಸಿಐ(BCCI) ಮೂಲಗಳ ಪ್ರಕಾರ ಜೋಶಿ ಅವರು ಈಗಾಗಲೇ ಬಿಸಿಸಿಐನ ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಬಿಸಿಸಿಐನ ಶ್ರೇಷ್ಠತಾ ಕೇಂದ್ರದ (ಸೆಂಟರ್ ಆಫ್ ಎಕ್ಸಲೆನ್ಸ್) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬೇ ಕುರುವಿಲ್ಲಾ ಅವರು ಸಂದರ್ಶನ ನಡೆಸಿದ್ದಾರೆ ಎನ್ನಲಾಗಿದೆ.
ಸಿಡಿಲಬ್ಬರದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, 11 ಸಿಕ್ಸರ್‌ಗಳಿದ್ದವು. ಅಂದರೆ ತಾವು ಗಳಿಸಿದ 101 ರನ್‌ಗಳ ಪೈಕಿ 94 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳ ( ಶೇ 93.06) ಮೂಲಕವೇ ಹರಿದು ಬಂದಿತ್ತು. ಇದು ಕೂಡ ದಾಖಲೆಯಾಗಿದೆ.
ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.1 ಕೋಟಿ ರೂ. ನೀಡಿ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಿತ್ತು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. ಹರಾಜಿನಲ್ಲೇ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದ್ದ ಈ ಪೋರ ಅತಿ ವೇಗದ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾನೆ.
IPL 2025: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಅನುಭವಿ ಬೌಲರ್‌ಗಳನ್ನು ಲೆಕ್ಕಿಸದೆ ಫಿಯರ್ಲೆಸ್ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಒಟ್ಟಾರೆಯಾಗಿ 38 ಎಸೆತಗಳಿಂದ 101 ರನ್ ಬಾರಿಸಿ ಮಿಂಚಿದರು. ಅವರ ಈ ಅಬ್ಬರದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 11 ಸೊಗಸಾದ ಸಿಕ್ಸರ್ ಸಿಡಿಯಿತು
ರಾಜಸ್ಥಾನ್ ವಿರುದ್ಧ 39 ರನ್ ಬಾರಿಸಿದ ಸಾಯಿ ಸುದರ್ಶನ್ ಅವರು ವಿರಾಟ್ ಕೊಹ್ಲಿ(443) ಯನ್ನು ಹಿಂದಿಕ್ಕಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. 18 ವಿಕೆಟ್ ಕಿತ್ತಿರುವ ಜೋಶ್ ಹ್ಯಾಜಲ್‌ವುಡ್ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಅಫ್ಘಾನಿಸ್ತಾನದ 26 ವರ್ಷದ ಕರೀಮ್ ಜನ್ನತ್ ಗುಜರಾತ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ಆಡಿದ ಅಫ್ಘಾನಿಸ್ತಾನದ 10 ನೇ ಕ್ರಿಕೆಟಿಗ ಎನಿಸಿಕೊಂಡರು. ಆದರೆ ತಾವೆಸೆದ ಒಂದೇ ಓವರ್‌ನಲ್ಲಿ ಬರೋಬ್ಬರಿ 30 ರನ್ ಹೊಡೆಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.
IPL 2025: 26 ವರ್ಷದ ಕರೀಮ್ ಜನ್ನತ್ ಇದುವರೆಗೆ 160 ಟಿ20 ಪಂದ್ಯಗಳಲ್ಲಿ, 22.67 ರ ಸರಾಸರಿಯಲ್ಲಿ 2494 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳಿವೆ. 7.82 ರ ಎಕಾನಮಿ ದರದಲ್ಲಿ ಬೌಲಿಂಗ್ ನಡೆಸಿ 118 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಶ್ರೀಜೇಶ್ ಭಾರತ ಹಾಕಿ ತಂಡ ಕಳೆದ ವರ್ಷ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಅನಂತರ ನಿವೃತ್ತಿಯಾಗಿದ್ದರು. ಆರ್.ಅಶ್ವಿನ್ ಕಳೆದ ಡಿಸೆಂಬರ್‌ನಲ್ಲಿ ಬೋರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯದ ಅನಂತರ ನಿವೃತ್ತಿಯಾಗಿದ್ದರು. ಅವರು ಟೆಸ್ಟ್‌ನಲ್ಲಿ ಭಾರತದ 2ನೇ ಗರಿಷ್ಠ ವಿಕೆಟ್ (537) ಪಡೆದ ಸಾಧಕರಾಗಿದ್ದಾರೆ.
IPL 2028: ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ ಕೂಡ ಸ್ವದೇಶಿ ಫ್ರಾಂಚೈಸಿ ಟಿ20 ಪಂದ್ಯಾವಳಿಗಳನ್ನು ಹೊಂದಿವೆ. ಹೀಗಿರುವಾಗ 94 ಪಂದ್ಯಗಳ ಐಪಿಎಲ್ ಪಂದ್ಯಗಳನ್ನು ನಡೆಸಲು ಸಾಧ್ಯವೇ ಎಂಬ ಸವಾಲು ಕೂಡ ಮುಂದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಂತೂ ನಡೆಯುತ್ತಿದೆ. ಇದು ಯಶಸ್ವಿಯಾದರೆ ಖಂಡಿತವಾಗಿಯೂ ಮುಂದಿನ ಐಪಿಎಲ್‌ನಲ್ಲಿ 94 ಪಂದ್ಯ ನಡೆಯಲಿದೆ ಎಂದು ಧುಮಾಲ್ ಹೇಳಿದ್ದಾರೆ.
ಭಾನುವಾರ ನಡೆದಿದ್ದ ಮುಂಬೈ ಮತ್ತು ಲಕ್ನೋ ನಡುವಣ ಐಪಿಎಲ್(IPL 2025) ಪಂದ್ಯಕ್ಕೆ ಬುಮ್ರಾ ಪತ್ನಿ ಸಂಜನಾ ಮತ್ತು ಮಗ ಅಂಗದ್ ಹಾಜರಾಗಿದ್ದರು. ಪಂದ್ಯದ ವೇಳೆ ಇವರನ್ನು ದೊಡ್ಡ ಪರದೆಯಲ್ಲಿ ತೋರಿಸಲಾಗಿತ್ತು. ಇದೇ ಫೋಟೊವನ್ನು ಕೆಲ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.
ಡೆಲ್ಲಿ ಈ ಪಂದ್ಯಕ್ಕೆ ತನ್ನ ಬೌಲಿಂಗ್ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಗೋಚರಿಸಿದೆ. ಆರ್‌ಸಿಬಿ ವಿರುದ್ಧ ಮೂರು ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟ ಮುಕೇಶ್ ಕುಮಾರ್ ಬದಲಿಗೆ ತಮಿಳುನಾಡಿದ ಎಡಗೈ ವೇಗಿ ಟಿ. ನಟರಾಜನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
Shoaib Akhtar's YouTube channel: ಶೋಯೆಬ್ ಅಖ್ತರ್ ಅವರ ಕ್ರಿಕೆಟ್ ವಿಶ್ಲೇಷಣೆಯ ಯೂಟ್ಯೂಬ್ ಚಾನೆಲ್ ಭಾರತದಲ್ಲಿಯೂ ಖ್ಯಾತಿ ಪಡೆದಿತ್ತು. ಅವರು ಹೆಚ್ಚಾಗಿ ಕ್ರಿಕೆಟ್ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಿದ್ದರು. ಅಲ್ಲದೆ ಕೆಲವು ಕ್ರಿಕೆಟ್ ಸಲಹೆಯನ್ನು ಕೂಡ ನೀಡುತ್ತಿದ್ದರು. ಹೀಗಾಗಿ ಭಾರತದಲ್ಲಿಯೂ ಅವರ ಯೂಟ್ಯೂಬ್ ವಿಶ್ಲೇಷಣೆಯನ್ನು ಹೆಚ್ಚಾಗಿ ನೋಡುತ್ತಿದ್ದರು.
ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ವೇಳೆ ರಾಹುಲ್ ಬಳಿ ನಗುತ್ತಲೇ ಬಂದ ವಿರಾಟ್ ಕೊಹ್ಲಿ ವೃತ್ತ ಎಳೆದಂತೆ ಸನ್ನೆ ಮಾಡಿ ಇದು ನನ್ನ ಮನೆ ಎಂದು ಸಂಭ್ರಮಿಸಲು ಮುಂದಾಗಿ ಬಳಿಕ ರಾಹುಲ್ ಅವರನ್ನು ತಬ್ಬಿಕೊಂಡರು.
ಆವೃತಿಯೊಂದರಲ್ಲಿ ತವರಿನಾಚೆ ಅತ್ಯಧಿಕ ಪಂದ್ಯ ಗೆದ್ದ ದಾಖಲೆ ಮಾಜಿಗಳಾದ ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಉಭಯ ಆಟಗಾರರು 2012ರಲ್ಲಿ ತಮ್ಮ ನಾಯಕತ್ವದಲ್ಲಿ ತಲಾ 7 ಪಂದ್ಯಗಳನ್ನು ಗೆದ್ದಿದ್ದರು. ಪಾಟೀದಾರ್ ಇನ್ನೆರಡು ಪಂದ್ಯಗಳನ್ನು ಗೆದ್ದರೆ ದಾಖಲೆ ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ.
ಮುಂಬೈ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ವೇಗಿ ಜಸ್‌ಪ್ರೀತ್ ಬುಮ್ರಾ 22ಕ್ಕೆ 4 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಮುಂಬೈ ಪರ ಬುಮ್ರಾ 174 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮುಂಬೈ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಎಂಬ ಲಸಿತ್ ಮಾಲಿಂಗ(170 ) ಅವರನ್ನು ಹಿಂದಿಕ್ಕಿದರು.
ಆರೆಂಜ್ ಕ್ಯಾಪ್ ವಿಭಾಗದಲ್ಲಿಯೂ ಬದಲಾವಣೆಯಾಗಿದೆ. 443 ರನ್ ಗಳಿಸಿದ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಪ್ರಸಿದ್ಧ್ ಕೃಷ್ಣ(16 ವಿಕೆಟ್) ಅವರನ್ನು ಹಿಂದಿಕ್ಕಿದ ಆರ್‌ಸಿಬಿಯ ಜೋಶ್ ಹ್ಯಾಜಲ್‌ವುಡ್(18 ವಿಕೆಟ್) ಅಗ್ರಸ್ಥಾನಕ್ಕೇರಿದ್ದಾರೆ.
ಟ್ವಿಟರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ತಿವಾರಿ, 'ಈ ಆವೃತ್ತಿಯಲ್ಲಿ ಪಂಜಾಬ್ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಇದಕ್ಕೆ ಕಾರಣ ಕೋಚ್ ರಿಕಿ ಪಾಂಟಿಂಗ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳಾದ ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರಂತಹ ಆಟಗಾರರ ಕಡೆಗಣನೆ' ಎಂದು ಹೇಳಿದ್ದಾರೆ.
ಇತ್ತಂಡಗಳು ಇದುವರೆಗಿನ ಐಪಿಎಲ್‌ನಲ್ಲಿ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಗುಜರಾತ್ ಟೈಟಾನ್ಸ್ ಗರಿಷ್ಠ 6 ಪಂದ್ಯ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್ ಬಲಿಷ್ಠ ಎನ್ನಲಡ್ಡಿಯಿಲ್ಲ.