ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಚಿನ್ನಯ್ಯನನ್ನು ಎ1 ಆರೋಪಿಯಾಗಿಸಿ ಹೊಸ ದೂರುಗಳು ದಾಖಲು, ಸಂಚುಕೋರರಿಗೂ ಸಂಕಷ್ಟ

ಸುಳ್ಳುಗಳನ್ನು ಹೇಳಿರುವುದು ತನಿಖೆಯಲ್ಲಿ ಕಂಡುಬಂದ ಕಾರಣ, ದೂರುದಾರ ಮಾಸ್ಕ್‌ ಮ್ಯಾನ್ ಚಿನ್ನಯ್ಯನನ್ನೇ (Mask man Chinayya) ಈ ಪ್ರಕರಣದಲ್ಲಿ A-1 ಆರೋಪಿಯನ್ನಾಗಿ ಮಾಡಲಾಗಿದೆ. ಕೊರ್ಟ್ ಅನುಮತಿ ಪಡೆದು 10 ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ತನಿಖೆ ಮಾಡಲು ಎಸ್‌ಐಟಿ ನಿರ್ಧರಿಸಿದೆ.

ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಸುಳ್ಳು ಹೇಳಿದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ (SIT) ಅಧಿಕಾರಿಗಳು ಈ ಹಿಂದೆ ದಾಖಲಿಸಿಕೊಡಿದ್ದ ಸೆಕ್ಷನ್‌ಗಳನ್ನು ಕೈಬಿಟ್ಟು ಹೊಸ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರ ಚಿನ್ನಯ್ಯನನ್ನೇ (mask man Chinayya) ಈ ಪ್ರಕರಣದಲ್ಲಿ A-1 ಆರೋಪಿಯನ್ನಾಗಿ ಮಾಡಲಾಗಿದೆ. ಕೊರ್ಟ್ ಅನುಮತಿ ಪಡೆದು 10 ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ತನಿಖೆ ಮಾಡಲು ನಿರ್ಧರಿಸಿದ್ದಾರೆ.

ಹಳೇ ಸೆಕ್ಷನ್‌ಗಳನ್ನು ಕೈಬಿಟ್ಟು, ನೂತನವಾಗಿ BNS 336, 230, 231, 229, 227, 228, 240, 236, 233 ಹಾಗೂ 248 ಸೆಕ್ಷನ್ ಅಡಿಯಲ್ಲಿ 10 ಸೆಕ್ಷನ್‌ಗಳ ಅಡಿಯಲ್ಲಿ ಎಸ್‌ಐಟಿ ಪ್ರಕರಣ ದಾಖಲಿಸಿಕೊಂಡಿದೆ.

ಸೆಕ್ಷನ್ 336 – ಕೃತಕ ದಾಖಲೆ (Forgery)

  • ಯಾರಾದರೂ ದಾಖಲೆ / ಎಲೆಕ್ಟ್ರಾನಿಕ್ ದಾಖಲೆ ಕೃತಕವಾಗಿ ಸೃಷ್ಟಿಸಿದರೆ ಅಥವಾ ಬದಲಾವಣೆ ಮಾಡಿದರೆ ಇದನ್ನು ಕೃತಕ ದಾಖಲೆ (Forgery) ಎಂದು ಪರಿಗಣಿಸಲಾಗುತ್ತದೆ.
  • ಶಿಕ್ಷೆ:
  • ಸಾಮಾನ್ಯ Forgery ಗರಿಷ್ಠ 2 ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
  • ಮೋಸ ಮಾಡಲು Forgery ಮಾಡಿದರೆ ಗರಿಷ್ಠ 7 ವರ್ಷ ಜೈಲು + ದಂಡ.
  • ಹೆಸರು / ಕೀರ್ತಿ ಹಾಳು ಮಾಡಲು Forgery ಮಾಡಿದರೆ ಗರಿಷ್ಠ 3 ವರ್ಷ ಜೈಲು + ದಂಡ.

ಸೆಕ್ಷನ್ 227–248: ಸುಳ್ಳು ಸಾಕ್ಷಿ ಮತ್ತು ಸಂಬಂಧಿತ ಅಪರಾಧಗಳು

ಸೆಕ್ಷನ್ 227: ಸುಳ್ಳು ಸಾಕ್ಷಿ ನೀಡುವುದು. ಕಾನೂನಾತ್ಮಕವಾಗಿ ನಿಜ ಹೇಳಬೇಕಾದ ಸಂದರ್ಭಗಳಲ್ಲಿ ಜಾಣತನದಿಂದ ಸುಳ್ಳು ಹೇಳಿಕೆ ನೀಡುವುದು ಅಪರಾಧ.

ಸೆಕ್ಷನ್ 228: ಸುಳ್ಳು ಸಾಕ್ಷಿ ಸೃಷ್ಟಿಸುವುದು, ಸುಳ್ಳು ದಾಖಲೆ, ಎಂಟ್ರಿ ಅಥವಾ ದಾಖಲೆ ಸೃಷ್ಟಿಸಿ ಅದನ್ನು ನ್ಯಾಯಾಂಗ / ತನಿಖೆಯಲ್ಲಿ ಬಳಸುವ ಉದ್ದೇಶದ ಅಪರಾಧ.

ಸೆಕ್ಷನ್ 229: ಸುಳ್ಳು ಸಾಕ್ಷಿಗೆ ಶಿಕ್ಷೆ

  • ನ್ಯಾಯಾಂಗ ವಿಚಾರಣೆಯಲ್ಲಿ ಗರಿಷ್ಠ 7 ವರ್ಷ + ₹10,000 ದಂಡ.
  • ನ್ಯಾಯಾಂಗೇತರ ಪ್ರಕರಣಗಳಲ್ಲಿ ಗರಿಷ್ಠ 3 ವರ್ಷ + ₹5,000 ದಂಡ.

ಸೆಕ್ಷನ್ 230 – ಮರಣದಂಡನೆ ಪ್ರಕರಣದಲ್ಲಿ ಸುಳ್ಳು ಸಾಕ್ಷಿ

  • ಯಾರನ್ನಾದರೂ ಮರಣದಂಡನೆಗೆ ಗುರಿಮಾಡುವ ಉದ್ದೇಶದಿಂದ ಸುಳ್ಳು ಸಾಕ್ಷಿ ಕೊಟ್ಟರೆ → ಆಜೀವ ಶಿಕ್ಷೆ ಅಥವಾ 10 ವರ್ಷಗಳವರೆಗೆ ಕಠಿಣ ಕಾರಾಗೃಹ + ದಂಡ.
  • ಆ ಸುಳ್ಳು ಸಾಕ್ಷಿಯಿಂದ ನಿಜವಾಗಿಯೇ ಮರಣದಂಡನೆ ನಡೆದರೆ → ಅಪರಾಧಿಗೆ ಮರಣದಂಡನೆ ಕೂಡಾ ವಿಧಿಸಬಹುದು.

ಸೆಕ್ಷನ್ 231 – ಆಜೀವ ಶಿಕ್ಷೆ ಅಥವಾ 7 ವರ್ಷದ ಶಿಕ್ಷೆಯ ಅಪರಾಧಕ್ಕೆ ಸುಳ್ಳು ಸಾಕ್ಷಿ

  • ಇಂತಹ ಪ್ರಕರಣಕ್ಕೆ ಸುಳ್ಳು ಸಾಕ್ಷಿ ಕೊಟ್ಟರೆ ಅದೇ ಶಿಕ್ಷೆ ಅಪರಾಧಿಗೆ ಅನ್ವಯವಾಗುತ್ತದೆ.

ಸೆಕ್ಷನ್ 232 – ಸುಳ್ಳು ಸಾಕ್ಷಿ ಕೊಡಲು ಬೆದರಿಕೆ

  • ಯಾರನ್ನಾದರೂ ಬೆದರಿಸಿ ಸುಳ್ಳು ಸಾಕ್ಷಿ ಕೊಡಿಸುವ ಪ್ರಯತ್ನ ಮಾಡಿದರೆ ಗರಿಷ್ಠ 7 ವರ್ಷ + ದಂಡ.
  • ಬೆದರಿಕೆ ಪರಿಣಾಮವಾಗಿ ತಪ್ಪು ಶಿಕ್ಷೆ (ಮರಣದಂಡನೆ/7 ವರ್ಷಕ್ಕಿಂತ ಹೆಚ್ಚು) ಆಗಿದ್ದರೆ ಅಪರಾಧಿಗೆ ಅದೇ ಶಿಕ್ಷೆ ಅನ್ವಯ.

ಸೆಕ್ಷನ್ 233 – ಸುಳ್ಳು ಸಾಕ್ಷಿಯನ್ನು ಬಳಸುವುದು

  • ಯಾರಾದರೂ ಸುಳ್ಳು ಸಾಕ್ಷಿ ಎಂದು ತಿಳಿದಿದ್ದರೂ ಸಾಕ್ಷಿ ನೀಡಿದರೆ ಅಂತವರಿಗೆ ಶಿಕ್ಷೆ ವಿಧಿಸಲಾಗುತ್ತದೆ.

ಸೆಕ್ಷನ್ 234 – ಸುಳ್ಳು ಪ್ರಮಾಣಪತ್ರ ನೀಡುವುದು

  • ಕಾನೂನುಬದ್ಧವಾಗಿ ಬೇಕಾದ ಪ್ರಮಾಣಪತ್ರವನ್ನು ಸುಳ್ಳು ಎಂದು ತಿಳಿದು ನೀಡಿದರೆ ಸುಳ್ಳು ಸಾಕ್ಷಿ ಆಧಾರದಲ್ಲಿ ಶಿಕ್ಷೆ.

ಸೆಕ್ಷನ್ 235 – ಸುಳ್ಳು ಪ್ರಮಾಣಪತ್ರ ಬಳಸುವುದು

  • ಸುಳ್ಳು ಪ್ರಮಾಣಪತ್ರ ಬಳಸಿದರೂ ಸುಳ್ಳು ಸಾಕ್ಷಿಯಂತೆ ಶಿಕ್ಷೆ.

ಸೆಕ್ಷನ್ 236 – ಸುಳ್ಳು ಘೋಷಣಾ ದಾಖಲೆ

  • ಯಾವುದೇ ಘೋಷಣಾ ದಾಖಲೆಗಳಲ್ಲಿ ಜಾಣತನದಿಂದ ಸುಳ್ಳು ಹೇಳಿಕೆ ಮಾಡಿದರೆ ಸುಳ್ಳು ಸಾಕ್ಷಿಯಂತೆ ಶಿಕ್ಷೆ.

ಸೆಕ್ಷನ್ 237 – ಸುಳ್ಳು ಘೋಷಣೆಯನ್ನು ಸಾಕ್ಷಿಯಾಗಿ ಬಳಸುವುದು

  • ಸುಳ್ಳು ಎಂದು ತಿಳಿದು ಘೋಷಣಾ ದಾಖಲೆ ಬಳಕೆ ಮಾಡಿದರೂ ಶಿಕ್ಷೆ ಅದೇ ಆಗಿರುತ್ತದೆ.

ಸೆಕ್ಷನ್ 238 : ಸಾಕ್ಷಿ ನಾಶಪಡಿಸುವುದು / ತಪ್ಪು ಮಾಹಿತಿ ನೀಡುವುದು

  • ಅಪರಾಧಿಯನ್ನು ರಕ್ಷಿಸಲು ಸಾಕ್ಷಿನಾಶ ಮಾಡಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ
  • ಮರಣದಂಡನೆ ಪ್ರಕರಣಗಳಲ್ಲಿ ಗರಿಷ್ಠ 7 ವರ್ಷ + ದಂಡ.
  • ಆಜೀವ/10 ವರ್ಷ ಶಿಕ್ಷೆಯ ಪ್ರಕರಣಗಳಲ್ಲಿ ಗರಿಷ್ಠ 3 ವರ್ಷ + ದಂಡ ವಿಧಿಸಲಾಗುತ್ತದೆ.

ಹರೀಶ್‌ ಕೇರ

View all posts by this author