ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: ಹನುಮಾನ್‌ ಚಾಲೀಸಾ ಪಠಿಸಿ ಅಭ್ಯಾಸ ಆರಂಭಿಸಿದ ಭಾರತ ತಂಡ

ಮೊದಲ ದಿನ ಕನ್ನಡಿಗ ಕೆ.ಎಲ್‌ ರಾಹುಲ್‌ ಹೊರತಾಗಿ ಉಳಿದ ಎಲ್ಲ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಭಾರತೀಯ ಆಟಗಾರರು ಮತ್ತೆ ವಿಶ್ರಾಂತಿ ಪಡೆದಿದ್ದು ಶನಿವಾರ ಮ್ಯಾಜೆಂಸ್ಟರ್‌ಗೆ ಪ್ರಯಾಣಿಸಲಿದ್ದಾರೆ. ಭಾನುವಾರದಿಂದ ಓಲ್ಡ್‌ ಟ್ರಾಫರ್ಡ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಸೋಲಿನ ಬಳಿಕ 2 ದಿನಗಳ ವಿಶ್ರಾಂತಿ ಪಡೆದಿದ್ಧ ಭಾರತ ತಂಡ(ENG vs IND) ಗುರುವಾರದಿಂದ ಅಭ್ಯಾಸ ಆರಂಭಿಸಿದೆ. ಬೆಕೆನ್‌ಹ್ಯಾಂ ಕೆಂಟ್‌ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆಟಗಾರರು ಅಭ್ಯಾಸಕ್ಕೂ ಮುನ್ನ ಡ್ರೆಸ್ಸಿಂಗ್‌ ಕೋಣೆಯಲ್ಲಿ ಭಗವಾನ್‌ ಹನುಮಂತನನ್ನು ಸ್ಮರಿಸುವ ಹನುಮಾನ್‌ ಚಾಲೀಸಾ ಪಠಣ(Hanuman Chalisa) ಮಾಡಿದ್ದು ವಿಶೇಷ ಎನಿಸಿತು. ಹನುಮಾನ್‌ ಚಾಲೀಸಾ ಮಾತ್ರವಲ್ಲೆ ಇಂಗ್ಲಿಷ್‌, ಪಂಜಾಬಿ ಸೇರಿ ವಿವಿಧ ಹಾಡುಗಳು ಕೇಳಿಬಂದವು.

ಮೊದಲ ದಿನ ಕನ್ನಡಿಗ ರಾಹುಲ್‌ ಹೊರತಾಗಿ ಉಳಿದ ಎಲ್ಲ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಭಾರತೀಯ ಆಟಗಾರರು ಮತ್ತೆ ವಿಶ್ರಾಂತಿ ಪಡೆದಿದ್ದು ಶನಿವಾರ ಮ್ಯಾಜೆಂಸ್ಟರ್‌ಗೆ ಪ್ರಯಾಣಿಸಲಿದ್ದಾರೆ. ಭಾನುವಾರದಿಂದ ಓಲ್ಡ್‌ ಟ್ರಾಫರ್ಡ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಮ್ಯಾಂಚೆಸ್ಟರ್‌ನಲ್ಲಿ ಕೇವಲ ಬ್ಯಾಟಿಂಗ್‌ ಮಾತ್ರ ನಡೆಸುವ ಸಾಧ್ಯತೆ ಇದೆ. ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಪಂತ್ ಬೆರಳಿಗೆ ಗಾಯವಾಗಿತ್ತು. ಇದರ ಪರಿಣಾಮವಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ 34 ಓವರ್‌ಗಳ ನಂತರ ಅವರು ಕೀಪಿಂಗ್ ಮಾಡಲಿಲ್ಲ. ಧ್ರುವ್ ಜುರೆಲ್ ಕೀಪಿಂಗ್‌ ನಡೆದಿದ್ದರು. ನಾಲ್ಕನೇ ಟೆಸ್ಟ್‌ನಲ್ಲಿಯೂ ಧ್ರುವ್ ಜುರೆಲ್ ಕೀಪಿಂಗ್‌ ಮಾಡುವ ಸಾಧ್ಯತೆ ಇದೆ.

ನಾಲ್ಕನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ, ರಿಷಭ್‌ ಪಂತ್‌ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ ENG vs IND: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಲಭ್ಯ; ಸುಳಿವು ನೀಡಿದ ಸಹಾಯಕ ಕೋಚ್