2011ರ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಯುವರಾಜ್ ಸಿಂಗ್‌ಗೆ ಸ್ಥಾನ ಇರಲಿಲ್ಲ: ಗ್ಯಾರಿ ಕರ್ಸ್ಟನ್ ಅಚ್ಚರಿ ಹೇಳಿಕೆ!
2011ರ ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಆಯ್ಕೆ ಅನಿಶ್ಚಿತವಾಗಿತ್ತು ಎಂದು ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಬಹಿರಂಗಪಡಿಸಿದ್ದಾರೆ. ಕರ್ಸ್ಟನ್ ಮತ್ತು ನಾಯಕ ಧೋನಿ ಅವರ ಬೆಂಬಲದಿಂದ ಯುವರಾಜ್ ಸಿಂಗ್ ತಂಡದಲ್ಲಿ ಸೇರಿಸಲಾಯಿತು.

ಯುವರಾಜ್ ಸಿಂಗ್ ಬಗ್ಗೆ ಅಚ್ಚರಿ ಸಂಗತಿಯೊಂದನ್ನು ರಿವೀಲ್ ಮಾಡಿದ ಗ್ಯಾರಿ ಕರ್ಸ್ಟನ್.

ನವದೆಹಲಿ: ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಅವರು ತಮ್ಮ ರಾಷ್ಟ್ರೀಯ ತಂಡದ ಪರ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ತೋರಿದ್ದಾರೆ. ಅಲ್ಲದೆ ದೊಡ್ಡ ಟೂರ್ನಿಗಳಲ್ಲಿಯೂ ಭಾರತ ತಂಡವನ್ನು (India) ಹಲವು ಬಾರಿ ಗೆಲ್ಲಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಈ ಎರಡೂ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಯುವರಾಜ್ ಸಿಂಗ್, ಭಾರತ ತಂಡ ಪ್ರಶಸ್ತಿಗಳನ್ನು ಗೆಲ್ಲಲು ನೆರವು ನೀಡಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಅಂದ ಹಾಗೆ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡದ ಆಯ್ಕೆಯಲ್ಲಿ ಯುವರಾಜ್ ಸಿಂಗ್ ಹೆಸರು ಇರಲಿಲ್ಲ ಎಂಬ ಅಂಶವನ್ನು ಅಂದಿನ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ (Gary Kirsten) ಬಹಿರಂಗಪಡಿಸಿದ್ದಾರೆ. ಎಂಎಸ್ ಧೋನಿ ಹಾಗೂ ಗ್ಯಾರಿ ಕರ್ಸ್ಟನ್ ಅವರು ಮನಸು ಮಾಡಿ ಯುವರಾಜ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.
ಎಂಎಸ್ ಧೋನಿ ಮತ್ತು ಗ್ಯಾರಿ ಕರ್ಸ್ಟನ್ ಅವರ ಈ ನಿರ್ಧಾರ ಸಂಪೂರ್ಣವಾಗಿ ಸರಿಯಾಗಿದೆ ಮತ್ತು ಯುವರಾಜ್ ಸಿಂಗ್ ಭಾರತ ತಂಡದ ಮ್ಯಾಚ್ ವಿನ್ನರ್ ಆಗಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಿಂದಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಬ್ಯಾಟಿಂಗ್‌ನಲ್ಲಿ 362 ರನ್ ಗಳಿಸುವುದರ ಜೊತೆಗೆ, ಬೌಲಿಂಗ್‌ನಲ್ಲಿ 15 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಯುವರಾಜ್ ಸಿಂಗ್ ಅವರ ಈ ಅದ್ಭುತ ಪ್ರದರ್ಶನ ಭಾರತೀಯ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ENG vs IND: ಟೆಸ್ಟ್ ಕ್ರಿಕೆಟ್‌ನ ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿ ರವೀಂದ್ರ ಜಡೇಜಾ!
ರೆಡಿಫ್. ಕಾಮ್ ಜೊತೆ ಮಾತನಾಡಿದ ಗ್ಯಾರಿ ಕಸ್ಟರ್ನ್ ಕಿರ್ಸ್ಟನ್, "ನನಗೆ ಯಾವಾಗಲೂ ಯುವರಾಜ್ ಸಿಂಗ್ ಮೇಲೆ ತುಂಬಾ ಪ್ರೀತಿ ಇತ್ತು. ಅವರು ಕೆಲವೊಮ್ಮೆ ನನಗೆ ತುಂಬಾ ತೊಂದರೆ ನೀಡುತ್ತಿದ್ದರು, ಆದರೆ ನಾನು ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಅವರು ಒಳ್ಳೆಯವರಾಗಿದ್ದರು. ಅವರು ಬ್ಯಾಟ್ ಮಾಡುವುದನ್ನು ನೋಡುವುದು ಅದ್ಭುತವಾಗಿರುವುದರಿಂದ ಅವರು ಯಾವಾಗಲೂ ರನ್ ಗಳಿಸಬೇಕೆಂದು ನಾನು ಬಯಸುತ್ತಿದ್ದೆ," ಎಂದು ಹೇಳಿದ್ದಾರೆ.
ಯುವರಾಜ್ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಟೂರ್ನಿಗೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಅಪ್ಟನ್ ಅವರನ್ನು ಕರ್ಸ್ಟನ್ ಇದೇ ವೇಳೆ ಶ್ಲಾಘಿಸಿದರು. "ಯುವರಾಜ್ ಸಿಂಗ್ ತನಗಾಗಿ ಒಂದು ಗುರಿಯನ್ನು ತಲುಪಬೇಕಾಗಿತ್ತು ಮತ್ತು ಇದರ ಶ್ರೇಯ ಪ್ಯಾಡಿಗೆ ಸಲ್ಲುತ್ತದೆ. ಯುವರಾಜ್ ಅವರನ್ನು ಸಿದ್ಧಪಡಿಸಲು ಪ್ಯಾಡಿ ಸಾಕಷ್ಟು ಕೆಲಸ ಮಾಡಿದ್ದರು. ವಿಶ್ವಕಪ್‌ಗೆ ತಯಾರಿ ನಡೆಸಲು ಯುವರಾಜ್ ಸಿಂಗ್ ಸ್ವತಃ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು," ಎಂದು ಕರ್ಸ್ಟನ್ ತಿಳಿಸಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!
2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅವರ ಅಂಕಿಅಂಶಗಳನ್ನು ನೋಡಿದರೆ, ಅವರು ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ಗಿಂತ ಉತ್ತಮರಾಗಿದ್ದರು. ಅವರು ಎಂಟು ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 90.50ರ ಸರಾಸರಿಯಲ್ಲಿ 362 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 123 ಎಸೆತಗಳಲ್ಲಿ 113 ರನ್ ಗಳಿಸಿದ್ದು. ಅವರು ಇಂಗ್ಲೆಂಡ್, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿದ್ದರು.
ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಯುವರಾಜ್ ಅಜೇಯ 57 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಭಾರತಕ್ಕೆ ನೆರವು ನೀಡಿದ್ದರು. ಬ್ಯಾಟಿಂಗ್ ಜೊತೆಗೆ ಯುವರಾಜ್ ಸಿಂಗ್ ಚೆಂಡಿನಲ್ಲೂ ಪರಿಣಾಮಕಾರಿಯಾಗಿದ್ದರು. ಅವರು 25.13ರ ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಐರ್ಲೆಂಡ್ ವಿರುದ್ಧ 31 ರನ್‌ಗಳಿಗೆ 5 ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಲ್ಲದೆ, ಯುವರಾಜ್ ಮೂರು ನಾಕೌಟ್ ಪಂದ್ಯಗಳಲ್ಲಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.