ಗ್ಯಾಸ್ ಸಿಲಿಂಡರ್ ನಿಂದ ಅನಿಲ್ ಸೋರಿಕೆ, ತಪ್ಪಿದ ಭಾರೀ ಅನಾಹುತ
ಗ್ಯಾಸ್ ಸಿಲಿಂಡರ್ ನಿಂದ ರೆಗ್ಯೂಲೇಟರ್ ಬಳಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಉರಿಯು ತ್ತಿದ್ದ ವೇಳೆ, ಆಗ್ನಿಶಾಮಕದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿ ನಂದಿಸಿ ಆಗಬಹು ದಾದ ಬಾರಿ ಆನಾಹುತವೊಂದನ್ನು ತಪ್ಪಿಸಿರುವ ಘಟನೆ ಚಿಂತಾಮಣಿ ತಾಲೂಕು ಕೊಡದವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ


ಚಿಂತಾಮಣಿ : ಗ್ಯಾಸ್ ಸಿಲಿಂಡರ್ ನಿಂದ ರೆಗ್ಯೂಲೇಟರ್ ಬಳಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ವೇಳೆ, ಆಗ್ನಿಶಾಮಕದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿ ನಂದಿಸಿ ಆಗುಬಹುದಾದ ಬಾರಿ ಆನಾಹುತವೊಂದನ್ನು ತಪ್ಪಿಸಿರುವ ಘಟನೆ ಚಿಂತಾಮಣಿ ತಾಲೂಕು ಕೊಡದವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಇದನ್ನೂ ಓದಿ: Chikkaballapur News: ಗಮನ ಸೆಳೆದ ಮಾಯಾಮೃಗ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನ
ಚಿಂತಾಮಣಿ ತಾಲ್ಲೂಕು ದೊಡ್ಡಗಂಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡದವಾಡಿ ಗ್ರಾಮದ ಲಕ್ಷ್ಮಣ ರೆಡ್ಡಿ ಬಿನ್ ಲಕ್ಷ್ಮೀನಾರಾಯಣಪ್ಪರವರು ವಾಸವಿರುವ ಮನೆಯಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್ ನ ರೇಗುಲೇಟರ್ ಬಳಿ ಬೆಂಕಿಯಾಗಿದ್ದು, ಲಕ್ಷಣ್ಣರೆಡ್ಡಿರವರು ಕೂಡಲೇ ವಿಷಯವನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಅಗ್ನಿ ಶಾಮಕ ದಳದ ಅಧಿಕಾರಿ ಲೋಕೇಶ್ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಸಂಪೂರ್ಣ ವಾಗಿ ನಂದಿಸಿ ಮುಂಜಾಗ್ರತ ಸಲುವಾಗಿ ಸಿಲಿಂಡರನ್ನು ಹೊರ ತಂದು ಯಾವುದೇ ಹಾನಿಯಾಗ ದಂತೆ ತಡೆದು, ಮುಂದೆ ಆಗಬಹುದಾದಂತಹ ಬಾರಿ ಆನಾಹುತವನ್ನು ತಪ್ಪಿಸಿದ್ದಕ್ಕೆ ಆಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.