ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಠ್ಯಪುಸ್ತಕ ಜ್ಞಾನದೊಂದಿಗೆ ಉತ್ತಮ ಸಂವಹನ, ನಾಯಕತ್ವ, ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿವಂತಿಕೆ ಅತ್ಯವಶ್ಯಕ

ಪರಿಣಾಮಕಾರಿ ಸಂವಹನವೆಂದರೆ ಮೌಖಿಕವಾಗಿ ಮತ್ತು ಬರವಣಿಗೆಯಲ್ಲಿ ಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಸುವುದು ಮತ್ತು ಅರ್ಥೈಸಿಕೊಳ್ಳುವುದು. ಎಂಜಿನಿಯರಿಂಗ್ ಶಿಕ್ಷಣದಲ್ಲಿ, ವಿದ್ಯಾ ರ್ಥಿಗಳು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಅವಕಾಶಗಳನ್ನು ಹೊಂದಿದ್ದಾರೆ, ಎಂಜಿನಿಯ ರಿಂಗ್ ಶಿಕ್ಷಣದಲ್ಲಿ ಸಂವಹನವನ್ನು ಲಿಖಿತ ಮತ್ತು ಮೌಖಿಕ ಸಂವಹನ ಎಂದು ವರ್ಗೀಕರಿಸಬ ಹುದು

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮೃದು ಕೌಶಲ್ಯಗಳ ಮಹತ್ವ

Profile Ashok Nayak Feb 28, 2025 10:07 PM

ಶ್ರೇಯಸ್‌ ಕುಮಾರ್‌, ನಿರ್ದೇಶಕರು, ಎಸ್‌ಡಿಎಂಇ ಸೊಸೈಟಿ

ಓದಿನಲ್ಲಿ ಎಲ್ಲರಿಗಿಂತ ಮುಂದಿರುವ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತಾನೇ ರೂಪಿ ಸಿದ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ತೊಂದರೆ ಅನುಭವಿಸಬಹುದು. ನಿಗ ದಿತ ಸಮಯದಲ್ಲಿ ಸಲ್ಲಿಸಬೇಕಿದ್ದ ಅಧ್ಯಯನದ ವರದಿಗಳು, ಪ್ರಾಜೆಕ್ಟ್‌ ಗಳನ್ನು ಪೂರ್ಣ ಗೊಳಿಸುವಲ್ಲಿ ವಿಫಲವಾಗಬಹುದು. ಅಂಕ ಗಳಿಕೆಯಲ್ಲಿ ಮುಂದಿದ್ದು ಬೇರೆಲ್ಲಾ ವಿಷಯ ಗಳಲ್ಲಿ ಕಷ್ಟಪಡುವ ಅದೆಷ್ಟೋ ವಿದ್ಯಾರ್ಥಿಗಳು ನಮ್ಮ ಮಧ್ಯೆಯೇ ಇರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಕೌಶಲ್ಯದ ಕೊರತೆ. ಗುಂಪಿನೊಂದಿಗೆ ಕೆಲಸ ಮಾಡುವಾಗ ಪಠ್ಯ ಪುಸ್ತಕ ಜ್ಞಾನದೊಂದಿಗೆ ಉತ್ತಮ ಸಂವಹನ, ನಾಯಕತ್ವ, ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿ ವಂತಿಕೆ ಅತ್ಯವಶ್ಯಕ.

ಪರಿಣಾಮಕಾರಿ ಸಂವಹನ

ಪರಿಣಾಮಕಾರಿ ಸಂವಹನವೆಂದರೆ ಮೌಖಿಕವಾಗಿ ಮತ್ತು ಬರವಣಿಗೆಯಲ್ಲಿ ಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಸುವುದು ಮತ್ತು ಅರ್ಥೈಸಿಕೊಳ್ಳುವುದು. ಎಂಜಿನಿಯರಿಂಗ್ ಶಿಕ್ಷಣದಲ್ಲಿ, ವಿದ್ಯಾರ್ಥಿಗಳು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಅವಕಾಶಗಳನ್ನು ಹೊಂದಿದ್ದಾರೆ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸಂವಹನವನ್ನು ಲಿಖಿತ ಮತ್ತು ಮೌಖಿಕ ಸಂವಹನ ಎಂದು ವರ್ಗೀಕರಿಸಬಹುದು. ಪರೀಕ್ಷೆಗಳಿರಲಿ ಅಥವಾ ಮೌಖಿಕ ಪ್ರಸ್ತುತಿ ಸ್ಪಷ್ಟವಾದ ಸಂವಹನ ಮತ್ತು ಚಿಂತನಶೀಲ ಪ್ರತಿಕ್ರಿಯೆಗಳಿಗೆ ಹೆಚ್ಚು ಮನ್ನಣೆ ಸಿಗುತ್ತದೆ. ನಿಯಮಿತ ಚಟುವಟಿಕೆಗಳು, ವಿಮರ್ಶೆಗಳು ಸಂವಹನ ಸಾಮರ್ಥ್ಯವನ್ನು ಸುಧಾರಿಸಲು ವಿದ್ಯಾರ್ಥಿ ಗಳಿಗೆ ಸಹಾಯ ಮಾಡುತ್ತದೆ. ಸಂವಹನಕ್ಕೆ ಸಂಬಂಧಿಸಿದ ಕೋರ್ಸ್‌ಗಳು ಮತ್ತು ವಿದೇಶಿ ಭಾಷಾ ಕಲಿಕೆಯು ನೇಮಕಾತಿ ನಿರೀಕ್ಷೆಗಳನ್ನು ಮತ್ತು ಬಹುಸಂಸ್ಕೃತಿಯ ತಂಡಗಳಲ್ಲಿ ಹೊಂದಿಕೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ನಾಯಕತ್ವ ಗುಣ

ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು, ಇತರರನ್ನು ಪ್ರೇರೇಪಿಸುವುದು, ಮಾರ್ಗದರ್ಶನ ನೀಡುವುದು ಹೀಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿ ದವರು ನಾಯಕರಾಗಬಹುದು. ನಾಯಕತ್ವವು ಸಹಜ ಗುಣ ಎಂದು ಕೆಲವರು ವಾದಿಸಿ ದರೂ, ಅದನ್ನು ವ್ಯವಸ್ಥಿತ ವಿಧಾನಗಳ ಮೂಲಕ ಅಭಿವೃದ್ಧಿಪಡಿಸಬಹುದು. ಎಂಜಿನಿ ಯರಿಂಗ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿ ಪರಿವರ್ತಿಸಲು ಶ್ರಮಿಸಲಾಗುತ್ತದೆ.

ಸಮಯ ನಿರ್ವಹಣೆ

ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಡಳಿತವು ಪದವೀಧರ ಇಂಜಿನಿಯರ್‌ಗಳಿಗೆ ಸೀಮಿತ ಸಮಯದ ಚೌಕಟ್ಟಿನೊಳಗೆ ಉನ್ನತ ಮಟ್ಟದ ಶಿಕ್ಷಣ ನೀಡುತ್ತದೆ ಹಾಗಾಗಿ ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಮುನ್ನಡೆಯಬೇಕು. ನಿಗದಿತ ಸಮಯದಲ್ಲಿ ಕೆಲಸಗಳನ್ನು ಪೂರೈಸುವ ಕೌಶಲ್ಯ ಹೊಂದಬೇಕು. ಸಮಯವನ್ನು ಪ್ರಜ್ಞಾಪೂರ್ವಕವಾಗಿ ವಿನಿಯೋಗಿ ಸುವ ಸಾಮರ್ಥ್ಯವು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಕಡಿಮೆ ಸಮಯದಲ್ಲಿ ಗುರಿ ಸಾಧಿಸಬಹುದು. ಜೊತೆಗೆ ಸಮಯ ನಿರ್ವಹಣೆ ನಮ್ಮ ಆತ್ಮ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಗುಂಪಿನೊಂದಿಗೆ ಬೆರೆಯುವ ಕೌಶಲ್ಯ

ಆಧುನಿಕ ಪೀಳಿಗೆಯ, ಶೈಕ್ಷಣಿಕ ಯಶಸ್ಸು ಕೇವಲ ಅಂಕಗಳಿಕೆಯಲ್ಲಿ ಮಾತ್ರವಲ್ಲ ಜೊತೆಗೆ ಸೃಜನಾತ್ಮಕ ಚಿಂತನೆ, ಕಲಿತಿದ್ದನ್ನು ನಿಜ ಜೀವನದಲ್ಲಿ ಅನ್ವಯಿಸಿಕೊಳ್ಳುವ ಚಾಕಚಕ್ಯತೆ ಯಲ್ಲಿದೆ. ಗುಂಪಿನೊಂದಿಗೆ ಒಡಗೂಡಿ ಕಲಿತಾಗ, ಚರ್ಚಿಸಿದಾಗ ಹೊಸ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ಕಂಡುಬರುತ್ತವೆ.

ಗುಂಪಿನೊಂದಿಗೆ ಕೆಲಸ ಮಾಡುವಾಗ ಪಠ್ಯ ಪುಸ್ತಕ ಜ್ಞಾನದೊಂದಿಗೆ ಉತ್ತಮ ಸಂವಹನ, ನಾಯಕತ್ವ, ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿವಂತಿಕೆ ಮುಖ್ಯವಾಗಿ ಸಮತೋಲನ ವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕ.

ಇಂದಿನ ವಿದ್ಯಾರ್ಥಿಗಳು ಯಶಸ್ಸಿನ ಹೋರಾಟದ ಮಧ್ಯೆ ಸಾಮಾಜಿಕ ಸಂಪರ್ಕ, ಮಾನಸಿಕ ಅರೋಗ್ಯವನ್ನು ನಿರ್ಲಕ್ಷಿಸುತ್ತಾರೆ ಇದು ಅತೀವ ಒತ್ತಡ ಮತ್ತು ಬಳಲಿಕೆಗೆ ಕಾರಣವಾಗು ತ್ತದೆ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಸಮತೋಲನವನ್ನು ಕಾಯ್ದುಕೊಳ್ಳುವ ಕೌಶಲ್ಯ ನಿಜವಾದ ಯಶಸ್ಸಿಗೆ ಬುನಾದಿಯಾಗಿರುತ್ತದೆ