ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನೀವು ವಿರಾಟ್‌ ಕೊಹ್ಲಿ ಅಲ್ಲʼ-3ನೇ ಟೆಸ್ಟ್‌ನಲ್ಲಿ ಶುಭಮನ್‌ ಗಿಲ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಮಂಜ್ರೆಕರ್!‌

ಇಂಗ್ಲೆಂಡ್‌ ವಿರುದ್ದ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿ ಭಾರತ ತಂಡದ ಭರ್ಜರಿ ಗೆಲುವಿಗೆ ನೆರವು ನೀಡಿದ್ದ ನಾಯಕ ಶುಭಮನ್‌ ಗಿಲ್‌, ಮೂರನೇ ಟೆಸ್ಟ್‌ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದಕ್ಕೆ ಮೂಲ ಕಾರಣವೇನೆಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಬಹಿರಂಗಪಡಿಸಿದ್ದಾರೆ.

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಗಿಲ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಮಾಂಜ್ರೇಕರ್‌!

ಶುಭಮನ್‌ ಗಿಲ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಸಂಜಯ್‌ ಮಾಂಜ್ರೇಕರ್‌.

Profile Ramesh Kote Jul 18, 2025 9:10 PM

ಲಂಡನ್‌: ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (IND vs ENG) ಭಾರತ ತಂಡ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿ ತಂಡದ ಭರ್ಜರಿ ಗೆಲುವಿಗೆ ನೆರವು ನೀಡಿದ್ದ ನಾಯಕ ಶುಭಮನ್‌ ಗಿಲ್‌ (Shubman Gill), ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಿಫಲರಾಗಿದ್ದರು. ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್‌ (Sanjay Manjrekar), ಶುಭಮನ್‌ ಗಿಲ್‌ ಅವರು ಇಂಗ್ಲೆಂಡ್‌ ಓಪನರ್‌ ಝ್ಯಾಕ್‌ ಕ್ರಾವ್ಲಿ ಅವರೊಂದಿಗೆ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯು ಗಿಲ್‌ ಅವರ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನ ಮೂರನೇ ದಿನ ಮುಗಿಯುವುದಕ್ಕೂ ಮುನ್ನ ಝ್ಯಾಕ್‌ ಕ್ರಾವ್ಲಿ ಅವರೊಂದಿಗೆ ಶುಭಮನ್‌ ಗಿಲ್‌ ಮಾತಿನ ಚಕಮಕಿ ನಡೆಸಿದ್ದರು. ನಂತರ ಐದನೇ ಹಾಗೂ ಟೆಸ್ಟ್‌ ಪಂದ್ಯದ ಕೊನೆಯ ದಿನ ಬ್ಯಾಟಿಂಗ್‌ಗೆ ಬಂದಿದ್ದ ಶುಭಮನ್‌ ಗಿಲ್‌ ಅವರನ್ನು ಇಂಗ್ಲೆಂಡ್‌ ಆಟಗಾರರು ಕೂಡ ಕಿಚಾಯಿಸಿದ್ದರು. ಇದರಿಂದ ವಿಚಲಿತರಾದ ಗಿಲ್‌, ಬ್ರೈಡೆನ್ ಕಾರ್ಸ್‌ ಅವರ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಇದೇ ಸನ್ನಿವೇಶದಲ್ಲಿ ವಿರಾಟ್‌ ಕೊಹ್ಲಿ ಆಡಿದ್ದರೆ, ತಮ್ಮಲ್ಲಿನ ಅದ್ಭುತ ಆಟವನ್ನು ಹೊರಹಾಕಿ ತಿರುಗೇಟು ನೀಡುತ್ತಿದ್ದರು, ಆದರೆ, ಗಿಲ್‌ ಅವರಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಮಾಂಜ್ರೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ENG vs IND: ಟೆಸ್ಟ್‌ ಕ್ರಿಕೆಟ್‌ನ ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿ ರವೀಂದ್ರ ಜಡೇಜಾ!

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಸಂಜಯ್‌ ಮಾಂಜ್ರೇಕರ್‌, "ವಿರಾಟ್‌ ಕೊಹ್ಲಿಗೆ ಈ ಸನ್ನಿವೇಶ ಎದುರಾಗಿದ್ದರೆ, ಅವರು ಆಕ್ರಮಣಕಾರಿಯಾಗು ಆಡುವ ಮೂಲಕ ಎದುರಾಳಿ ಆಟಗಾರರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದರು. ಆದರೆ, ಶುಭಮನ್‌ ಗಿಲ್‌ ಸನ್ನಿವೇಶ ಬೇರೆ. ಕೊಹ್ಲಿ ರೀತಿ ಗಿಲ್‌ ವರ್ತಿಸಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಗಿಲ್‌ ವರ್ತನೆ ಬಗ್ಗೆ ನನಗೆ ಅಚ್ಚರಿ ಉಂಟಾಗಿತ್ತು. ಏಕೆಂದರೆ ಬಳಿಕ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ಅವರಿಂದ ಸಾಧ್ಯವಾಗಿರಲಿಲ್ಲ," ಎಂದು ಹೇಳಿದ್ದಾರೆ.

"ಅವರು ತುಂಬಾ ಅನುಮಾನಾಸ್ಪದವಾಗಿ ಕಾಣಿಸಿಕೊಂಡರು ಮತ್ತು ಇದು ನಿಮಗೆ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ನಾವು ಸ್ಟಂಪ್ ಮೈಕ್‌ಗೆ ಗೌಪ್ಯವಾಗಿರುತ್ತೇವೆ ಮತ್ತು ಪಂದ್ಯದ ವೇಳೆ ಮಾತನಾಡುತ್ತಿರುವ ವಿಷಯಗಳನ್ನು ನಾವು ಕೇಳಬಹುದು ಹಾಗೂ ಕೆಲವು ವೈಯಕ್ತಿಕ ದಾಳಿಗಳನ್ನು ಮಾಡಲಾಗುತ್ತಿತ್ತು. ಇದು ಶುಭಮನ್ ಗಿಲ್‌ಗೆ ಹೊಸ ಅನುಭವವಾಗಬಹುದು ಏಕೆಂದರೆ ಇತ್ತೀಚಿನ ದಿನಗಳಲ್ಲಿ ನೀವು ನೋಡಿದಂತೆ ಭಾರತೀಯ ಆಟಗಾರರೊಂದಿಗೆ ಬಹಳಷ್ಟು ವಿದೇಶಿ ತಂಡಗಳ ಆಟಗಾರರು ಸ್ನೇಹ ಮನೋಭಾವವನ್ನು ಹೊಂದಿದ್ದಾರೆ. ಆದರೆ, ಇದೀಗ ಗಿಲ್‌ ಮೇಲಿನ ದಾಳಿಯಿಂದ, ಅವರು ಅನುಮಾನಾಸ್ಪದವಾಗಿ ಕಾಣುತ್ತಿದ್ದರು ಹಾಗೂ ಅವರು ಇದಕ್ಕೆ ಸಿದ್ದರಿರಲಿಲ್ಲ," ಎಂದು ಕ್ರಿಕೆಟ್‌ ವಿವರಣಾಕಾರ ತಿಳಿಸಿದ್ದಾರೆ.

IND vs ENG 4th Test: ರಿಷಭ್‌ ಪಂತ್‌ ಬಗ್ಗೆ ಟೀಮ್‌ ಇಂಡಿಯಾಗೆ ಎಚ್ಚರಿಕೆ ಕೊಟ್ಟ ರವಿ ಶಾಸ್ತ್ರಿ!

ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಗಿಲ್ ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು ಮತ್ತು ಯಾವುದೇ ತೊಂದರೆಯಲ್ಲಿ ಕಂಡಿರಲಿಲ್ಲ. ಆದಾಗ್ಯೂ, ಅವರು ಲಾರ್ಡ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ, ವಿಶೇಷವಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ. ಅಲ್ಲಿ ಅವರು ಆತಂಕದಿಂದ ಕಾಣುತ್ತಿದ್ದರು. ಇಂಗ್ಲೆಂಡ್ ತಂಡದ ಪ್ರತಿದಾಳಿಯಿ ಗಿಲ್ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.