ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಅಭಿಷೇಕ್‌ ಶರ್ಮಾ or ಇಶಾನ್‌ ಕಿಶನ್? ಸನ್‌ರೈಸರರ್ಸ್‌ ಹೈದರಾಬಾದ್‌ ಸಂಭಾವ್ಯ ಪ್ಲೇಯಿಂಗ್‌ XI ವಿವರ

SRH Predicted Playing XI: ಕಳೆದ ಆವೃತ್ತಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವಾಗಿ ಕಣಕ್ಕೆ ಇಳಿಯಲಿದೆ. ಪ್ಯಾಟ್‌ ಕಮಿನ್ಸ್‌ ನಾಯತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ಪ್ಲೇಯಿಂಗ್‌ XI

ಹೈದರಾಬಾದ್‌: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕಣಕ್ಕೆ ಇಳಿಯಲಿದೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದ್ದ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಸೋತು ರನ್ನರ್‌ ಅಪ್‌ ಆಗಿತ್ತು. ಮೆಗಾ ಹರಾಜಿಗೂ ಮುನ್ನ ಟ್ರಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ಅಭಿಷೇಕ್‌ ಶರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಹೆನ್ರಿಚ್‌ ಕ್ಲಾಸೆನ್‌ ಅವರನ್ನು ಉಳಿಸಿಕೊಂಡಿತ್ತು. ಅಂದ ಹಾಗೆ ಹರಾಜಿನಲ್ಲಿ ಇಶಾನ್‌ ಕಿಶನ್‌ ಹಾಗೂ ಮೊಹಮ್ಮದ್‌ ಶಮಿ ಸೇರಿದಂತೆ ಪ್ರಮುಖ ಆಟಗಾರರನ್ನು ಖರೀದಿಸಿತ್ತು. ಅಂದ ಹಾಗೆ ಈ ಬಾರಿ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪ್ಲೇಯಿಂಗ್‌ XI ಹೇಗಿರಬಹುದೆಂದು ಇಲ್ಲಿ ವಿವರಿಸಲಾಗಿದೆ.

ಅತ್ಯುತ್ತಮ ಪ್ಲೇಯಿಂಗ್‌ XI ಆರಿಸುವುದು ಸನ್‌ರೈಸರ್ಸ್‌ ಹೈದರಬಾದ್‌ ತಂಡದ ಪಾಲಿಗೆ ಕೀ ಸಂಗತಿಯಾಗಿದೆ. 2024ರ ಐಪಿಎಲ್‌ ಟೂರ್ನಿಯಲ್ಲಿ ಎಸ್‌ಆರ್‌ಎಚ್‌ ನಿಯಮಿತವಾಗಿ 250ಕ್ಕೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಕೆಕೆಆರ್‌ ಎದುರು ಫೈನಲ್‌ ಪಂದ್ಯದಲ್ಲಿ ಕೇವಲ 113 ರನ್‌ಗಳಿಗೆ ಸೀಮಿತವಾಗಿತ್ತು. ಲೀಗ್‌ ಹಂತದ ಪಂದ್ಯಗಳಲ್ಲಿ ಹೈದರಾಬಾದ್‌ ತಂಡ ಅತ್ಯಂತ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ನಾಕೌಟ್‌ ಹಂತಕ್ಕೆ ಪ್ರವೇಶ ಮಾಡಿತ್ತು. ಆದರೆ, ಫೈನಲ್‌ ಪಂದ್ಯದಲ್ಲಿ ಅದೇ ಆಟವನ್ನು ಪುನರಾವರ್ತಿಸುವಲ್ಲಿ ವಿಫಲವಾಗಿತ್ತು. ಆದ್ದರಿಂದ ಟೂರ್ನಿಯಲ್ಲಿ ಹೈದರಾಬಾದ್‌ ತನ್ನ ಪ್ಲೇಯಿಂಗ್‌ XI ಆಯ್ಕೆ ಮಾಡುವುದು ಬಹಳಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

IPL 2025: ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳಿಗೆ ಬಿಸಿ ತುಪ್ಪವಾದ ತವರಿನ ಪಂದ್ಯಗಳ ಟಿಕೆಟ್‌ ದರ

2025ರ ಐಪಿಎಲ್‌ ಟೂರ್ನಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ಬೆಸ್ಟ್‌ ಪ್ಲೇಯಿಂಗ್‌ XI

ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಅಗ್ರ ಸ್ಥಾನಕ್ಕೆ ಕೀ ಸಂಗತಿಯಾಗಿದೆ. ಕಳೆದ ವರ್ಷ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ್ದರು. ಇದೀಗ ಅದೇ ಲಯವನ್ನು ಈ ಬಾರಿಯೂ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇದೀಗ ಇಶಾನ್‌ ಕಿಶನ್‌ ತಂಡದಲ್ಲಿದ್ದು, ಅವರು ಮೂರನೇ ಕ್ರಮಾಂಕಕ್ಕೆ ಸೂಕ್ತವಾಗಬಹುದು. ಇಶಾನ್‌ ಕಿಶನ್‌ ಕೂಡ ಸ್ಪೋಟಕ ಬ್ಯಾಟ್ಸ್‌ಮನ್‌ ಆಗಿದ್ದು, ಅವರನ್ನು ಆಂಕರ್‌ ಪಾತ್ರಕ್ಕೆ ಎಸ್‌ಆರ್‌ಎಚ್‌ ಬಳಸಿಕೊಳ್ಳಬಹುದು. ಆ ಮೂಲಕ ಅವರನ್ನು ಓಪನರ್‌ ಆಗಿ ತಂಡ ಪರಿಗಣಿಸುವುದಿಲ್ಲ. ಸ್ಪಿನ್ನರ್‌ಗಳ ವಿರುದ್ಧ ಅವರು ಅತ್ಯುತ್ತಮ ಬ್ಯಾಟಿಂಗ್‌ ಕೌಶಲವನ್ನು ಹೊಂದಿದ್ದಾರೆ.

ಶ್ರೀಲಂಕಾ ತಂಡದ ಕಮಿಂದು ಮೆಂಡಿಸ್‌ ಅವರು ಕೂಡ ಎಸ್‌ಆರ್‌ಎಚ್‌ ಬ್ಯಾಟಿಂಗ್‌ ವಿಭಾಗಕ್ಕೆ ಸೂಕ್ತರಾಗುತ್ತಾರೆ. ಕಮಿಂದು ಮೆಂಡಿಸ್‌ ಅವರು ಹೈದರಾಬಾದ್‌ ತಂಡಕ್ಕೆ ಅತ್ಯುತ್ತಮ ಬ್ಯಾಟಿಂಗ್‌ ಡೆಪ್ತ್‌ ತಂದುಕೊಡುತ್ತಾರೆ. ಇನ್ನು ಐದನೇ ಕ್ರಮಾಂಕದಲ್ಲಿ ನಿತೀಶ್‌ ರೆಡ್ಡಿ ಆಡಬಹುದು. ನಂತರದ ಕ್ರಮಾಂಕಗಳಲ್ಲಿ ಹೆನ್ರಿಚ್‌ ಕ್ಲಾಸೆನ್‌ ಆಡಲಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಪ್ಯಾಟ್‌ ಕಮಿನ್ಸ್‌, ಮೊಹಮ್ಮದ್‌ ಶಮಿ, ಹರ್ಷಲ್‌ ಪಟೇಲ್‌ ಹಾಗೂ ಜಯದೇವ್‌ ಉನದ್ಕಾಟ್‌ ಬರಬಹುದು. ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ರಾಹುಲ್‌ ಚಹರ್‌ ಕಾಣಿಸಿಕೊಳ್ಳಬಹುದು.



ಸನ್‌ರೈಸರ್ಸ್‌ ಹೈದರಾಬಾದ್‌ನ ಬಲಿಷ್ಠ ಪ್ಲೇಯಿಂಗ್‌ XI

ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌, ಕಮಿಂದು ಮೆಂಡಿಸ್‌, ನಿತೀಶ್‌ ರೆಡ್ಡಿ, ಹೆನ್ರಿಚ್‌ ಕ್ಲಾಸೆನ್‌, ಪ್ಯಾಟ್‌ ಕಮಿನ್ಸ್‌, ಮೊಹಮ್ಮದ್‌ ಶಮಿ, ರಾಹುಲ್‌ ಚಹರ್‌, ಹರ್ಷಲ್‌ ಪಟೇಲ್‌, ಜಯದೇವ್‌ ಉನದ್ಕಾಟ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ

ಪ್ಯಾಟ್‌ ಕಮಿನ್ಸ್‌, ಅಭಿಷೇಕ್‌ ಶರ್ಮಾ, ನಿತೀಶ್‌ ರೆಡ್ಡಿ, ಹೆನ್ರಿಚ್‌ ಕ್ಲಾಸೆನ್‌, ಟ್ರಾವಿಸ್‌ ಹೆಡ್‌, ಮೊಹಮ್ಮದ್‌ ಶಮಿ, ಹರ್ಷಲ್‌ ಪಟೇಲ್‌, ಇಶಾನ್‌ ಕಿಶನ್‌, ರಾಹುಲ್‌ ಚಹರ್‌, ಆಡಂ ಝಾಂಪ, ಅಥರ್ವ ಟೈಡೆ, ಅಭಿನವ್‌ ಮನೋಹರ್‌, ಸಿಮ್ರಾನ್‌ಜೀತ್‌ ಸಿಂಗ್‌, ಝೋಸನ್‌ ಅನ್ಸಾರಿ, ಜಯದೇವ್‌ ಉನದ್ಕಾಟ್‌, ಬ್ರೈಡನ್‌ ಕಾರ್ಸ್‌, ಕಮಿಂದು ಮೆಂಡಿಸ್‌, ಅನಿಕೇತ್‌ ವರ್ಮಾ, ಇಶಾನ್‌ ಮಾಲಿಂಗ, ಸಚಿನ್‌ ಬೇಬಿ