ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rudra Garuda Purana Movie: ‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ನಟ ಡಾಲಿ ಧನಂಜಯ ಸಾಥ್‌; ಟ್ರೈಲರ್‌ ರಿಲೀಸ್‌

Rudra Garuda Purana Movie: ರಿಷಿ ನಾಯಕರಾಗಿ ನಟಿಸಿರುವ ʼರುದ್ರ ಗರುಡ ಪುರಾಣʼ ಚಿತ್ರದ ಟ್ರೈಲರ್‌ ಅನ್ನು ನಟ ಡಾಲಿ ಧನಂಜಯ ಅನಾವರಣಗೊಳಿಸಿದರು. ಟ್ರೈಲರ್‌ ಮೂಲಕ ಗಮನ ಸೆಳೆದ ಈ ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Rudra Garuda Purana Movie: ‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ನಟ ಡಾಲಿ ಧನಂಜಯ ಸಾಥ್‌; ಟ್ರೈಲರ್‌ ರಿಲೀಸ್‌

ʼರುದ್ರ ಗರುಡ ಪುರಾಣʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ ನಡೆಯಿತು.

Profile Siddalinga Swamy Jan 16, 2025 5:44 PM

ಬೆಂಗಳೂರು, ಜ. 16, 2025: ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸ್ಯಾಂಡಲ್‌ವುಡ್‌ ನಟ ರಿಷಿ ನಾಯಕರಾಗಿ ನಟಿಸಿರುವ ʼರುದ್ರ ಗರುಡ ಪುರಾಣʼ ಚಿತ್ರದ (Rudra Garuda Purana Movie) ಟ್ರೈಲರ್‌ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೈಲರ್‌ ಅನ್ನು ನಟ ಡಾಲಿ ಧನಂಜಯ ಅನಾವರಣಗೊಳಿಸಿದರು. ನಿರ್ಮಾಪಕ ಕೆ. ಮಂಜು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಟ್ರೈಲರ್‌ ಕುತೂಹಲ ಮೂಡಿಸಿದ್ದು,‌ ಜ. 24ರಂದು ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ʼʼರಿಷಿ ನನ್ನ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ನಿರ್ದೇಶಕರು ಬಹು ದಿನಗಳ ಪರಿಚಯ. ʼರುದ್ರ ಗರುಡ ಪುರಾಣʼ ಟ್ರೇಲರ್ ವಿಭಿನ್ನವಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿʼʼ ಎಂದು ನಟ ಧನಂಜಯ ಹಾರೈಸಿದರು.



ಧನಂಜಯ ಅವರು ಹೇಳಿದ ಹಾಗೆ ಕಾಲೇಜಿನಲ್ಲಿ ನಾನು ಅವರ ಜೂನಿಯರ್ ಎಂದು ಮಾತನಾಡಿದ ನಾಯಕ ರಿಷಿ, ಎಂಜನಿಯರಿಂಗ್ ದಿನಗಳನ್ನು ನೆನಪಿಸಿಕೊಂಡರು. ಇನ್ನು ನಮ್ಮ ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಹಾಡು‌ಗಳು ಹಾಗೂ ಟೀಸರ್ ಮೂಲಕ ಜನರ ಮನ ತಲುಪಿದೆ. ಟ್ರೈಲರ್‌ ಸಹ ಚೆನ್ನಾಗಿದೆ. ನಿರ್ದೇಶಕರ ಶ್ರಮ ಚಿತ್ರಕ್ಕೆ ಸಾಕಷ್ಟಿದೆ. ಯಾವುದೇ ಕೊರತೆ ಬಾರದೆ ಹಾಗೆ ನಿರ್ಮಾಪಕರು ನಿರ್ಮಾಣ ಮಾಡಿದ್ದಾರೆ. ಅದು ಟ್ರೈಲರ್‌ನಲ್ಲಿ ಕಾಣುತ್ತಿದೆ‌. ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ʼರುದ್ರ ಗರುಡ ಪುರಾಣʼ ಒಂದೊಳ್ಳೆ ಚಿತ್ರವಾಗಿ ಮೂಡಿ ಬಂದಿದ್ದು, ಜನವರಿ 24ರಂದು ತೆರೆಗೆ ಬರಲಿದೆ. ನಮ್ಮ ಚಿತ್ರಕ್ಕೆ ಹಾಗೂ ನಮ್ಮ ಜತೆಗೆ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾಯಕಿ ಪ್ರಿಯಾಂಕ ಕುಮಾರ್‌ ಮಾತನಾಡಿ, ನಾನು ಮೈಸೂರಿನವಳು. ನಾಯಕಿಯಾಗಿ ಇದು ಮೊದಲ ಚಿತ್ರ. ನನ್ನ‌ ತಂದೆಗೆ ನಾನು ಚೆನ್ನಾಗಿ ಓದಬೇಕೆಂಬ ಆಸೆ. ನನಗೆ ಓದು ಹಾಗೂ ನಟನೆ ಎರಡು ಆಸೆ. ಓದಿನಲ್ಲೂ ನಮ್ಮ ತಂದೆ ಹೇಳಿದ ಹಾಗೆ ಕೇಳಿದ್ದೇನೆ. ಇದರಿಂದ ಅವರಿಗೂ ಖುಷಿಯಾಗಿದೆ. ಈ ಚಿತ್ರದ ಟ್ರೇಲರ್ ನೋಡಿ ನಮ್ಮ ತಂದೆ ಸಂತೋಷಪಟ್ಟಿದ್ದಾರೆ. ಜನರಿಗೂ ಚಿತ್ರ ಇಷ್ಟವಾಗಲಿದೆ ಎಂದು ತಿಳಿಸಿದರು.

ನಮ್ಮ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿಕೊಟ್ಟ ಧನಂಜಯ ಅವರಿಗೆ ಧನ್ಯವಾದ. ಜನವರಿ 24ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಬೆಂಬಲ ನೀಡಿ ಎಂದು ನಿರ್ದೇಶಕ ನಂದೀಶ್ ಹಾಗೂ ನಿರ್ಮಾಪಕ ಲೋಹಿತ್ ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Melukote News: ರಾಜ್ಯಮಟ್ಟದ ಸಂಸ್ಕೃತ ಸ್ಪರ್ಧೆ: ವಿಜೇತರು ಇವರು

ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಭಾಷಣೆಕಾರ ರಘು ನಿಡವಳ್ಳಿ, ಹಾಡು ಬರೆದಿರುವ ಪ್ರಮೋದ್ ಮರವಂತೆ, ಮಂಜು ಮಾಂಡವ್ಯ ಹಾಗೂ ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್. ಪೇಟೆ, ಅಶ್ವಿನಿ ಗೌಡ, ಪ್ರಭಾಕರ್, ರಾಮ್ ಪವನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ಅಶ್ವಿನಿ ವಿಜಯ್ ಲೋಹಿತ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆ.ಪಿ. ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.