ಮುಂಬೈ: ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ (Arpita Khan) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಅರ್ಪಿತಾ ಖಾನ್ ಅವರು ನಟ ಆಯುಷ್ ಶರ್ಮಾ ಅವರನ್ನು 2014 ರಲ್ಲಿ ವಿವಾಹವಾಗಿದ್ದು ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಅರ್ಪಿತಾ ಅವರು ತಮ್ಮ ಪತಿ ಆಯುಷ್ ಹಾಗೂ ಮಕ್ಕಳಾದ ಅಹಿಲ್ ಮತ್ತು ಆಯತ್ ಜೊತೆಗೆ ಮುಂಬೈನ ಬಾಂದ್ರಾ ಪ್ರದೇಶದ ಬೀಚ್ ಸೈಡ್ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಇವರ ವಿಭಿನ್ನ ವಿನ್ಯಾಸದ ಅಪಾರ್ಟ್ ಮೆಂಟ್ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖ್ಯಾತ ಯೂಟ್ಯೂಬರ್ ಫರಾ ಖಾನ್ ಅವರು ಇವರ ಅಪಾರ್ಟ್ ಮೆಂಟ್ ಒಳಗೆ ಇರುವ ಭವ್ಯ ಸ್ಥಳಗಳು, ವಿನ್ಯಾಸವನ್ನು, ಅಲಂಕಾರಿತ ವಸ್ತುಗಳು ಇತ್ಯಾದಿಗಳ ವಿಡಿಯೋ ಅಪ್ಲೋಡ್ ಮಾಡಿದ್ದು ಸದ್ಯ ಈ ಐಶಾರಾಮಿ ಅಪಾರ್ಟ್ ಮೆಂಟ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ಅರ್ಪಿತಾ ಮತ್ತು ಆಯುಷ್ ಅವರ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ವಿಶಾಲವಾದ ಲಾಬಿ ಇದೆ. ಇದರ ವಿನ್ಯಾಸವು ಬಹಳ ಅದ್ಭುತವಾಗಿದೆ. ಅಷ್ಟು ಮಾತ್ರವಲ್ಲದೆ ಈ ಐಶಾರಾಮಿ ಮನೆಯಲ್ಲಿ ಮೂವಿಂಗ್ ವಾಲ್ (ಚಲಿಸುವ ಗೋಡೆ) ಕೂಡ ಇದ್ದು ಈ ವಾಲ್ ಬಹಳ ವಿಭಿನ್ನ ವಿನ್ಯಾಸದಿಂದ ಕೂಡಿದೆ. ಅರ್ಪಿತಾ ಅವರ ಸಹೋದರ ನಟ ಸಲ್ಮಾನ್ ಖಾನ್ ಅವರು ರಚಿಸಿದ್ದ ಆಯತುಲ್ ಕುರ್ಸಿಯ ವಿಶೇಷ ವರ್ಣಚಿತ್ರ ಕೂಡ ಇದೆ. ಇದು ಆ ಮನೆಯ ಅದೃಷ್ಟ ಎಂದು ಭಾವಿಸುವುದಾಗಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಅವರು ಯೂಟ್ಯೂಬರ್ ಫರಾ ಖಾನ್ ಬಳಿ ತಿಳಿಸಿದ್ದಾರೆ.

ಇನ್ನು ಈ ಮನೆಯ ಊಟ ಮಾಡುವ ಸ್ಥಳವಂತೂ ಯಾವ ಐಶಾರಾಮಿ ಹೊಟೇಲ್ ಗೂ ಕಮ್ಮಿ ಇಲ್ಲ ಎಂಬಂತಿದೆ. ವೈಟ್ ಆ್ಯಂಡ್ ಬ್ಲೂ ಕಾಂಬಿನೇಶನ್ ನಲ್ಲಿ ಡೈನಿಂಗ್ ಸೆಟ್ ಹಾಗೂ ಕರ್ಟನ್ ವಾಲ್ ಎಲ್ಲವೂ ಇದ್ದು ನೋಡಲು ಗ್ರ್ಯಾಂಡ್ ಲುಕ್ ನೀಡಿದಂತಿದೆ. ವಿಶ್ರಾಂತಿ ಪಡೆಯಲು ಕುಟುಂಬದ ಜೊತೆಗೆ ಫನ್ ಟೈಂ ಕಳೆಯಲು ಅನುಕೂಲವಾಗುವಂತೆ ಕೆಲವು ವಸ್ತುಗಳನ್ನು ಕೂಡ ಈ ಭಾಗದಲ್ಲಿ ಇಡಲಾಗಿದೆ.

ಅರ್ಪಿತಾ ಅವರ ಐಶಾರಾಮಿ ಮನೆಯ ಬಾಲ್ಕನಿ ಭಾಗವು ಸಾಕಷ್ಟು ಸ್ಥಳಾವಕಾಶ ಹೊಂದಿದ್ದು ಪಾರ್ಟಿ, ಸಣ್ಣ ಇವೆಂಟ್ ಮಾಡಲು ಕೂಡ ಅನುಕೂಲವಾಗುವಂತಿದೆ. ಬಾಲ್ಕನಿಯ ಹೊರಭಾಗದಲ್ಲಿ ಸಣ್ಣ ಪಾಟ್ ಗಳು ಹಾಗೂ ಇತರ ಅಲಕಾಂರಿಕ ವಸ್ತು ಬಳಸಲಾಗಿದ್ದು ಲಕ್ಶೂರಿ ಲುಕ್ ನೀಡಿದೆ. ಈ ಬಾಲ್ಕನಿಯು ದುಬೈ ನಲ್ಲಿ ಇರುವ ದೊಡ್ಡ ದೊಡ್ಡ ವಿನ್ಯಾಸದಿಂದ ಪ್ರೇರಿತವಾಗಿ ರಚಿಸಿದಂತಿದ್ದು ಇದನ್ನು ಮುಂಬೈ ಕಾ ದುಬೈ ಎಂದೆ ಯೂಟ್ಯೂಬರ್ ಫರಾ ಖಾನ್ ಹೊಗಳಿದ್ದಾರೆ.
ಇದನ್ನು ಓದಿ: Thimmana Mottegalu Movie: ಟ್ರೈಲರ್‌ನಲ್ಲೇ ಕುತೂಹಲ ಮೂಡಿಸಿದ ʼತಿಮ್ಮನ ಮೊಟ್ಟೆಗಳುʼ

ಚಲಿಸುವ ಗೋಡೆ:
ಅರ್ಪಿತಾ ಮತ್ತು ಆಯುಷ್ ಅವರ ಅಪಾರ್ಟ್ಮೆಂಟ್ ಕಟ್ಟಡದಲ್ಲಿನ ಲಿಫ್ಟ್ ಅವರ ಸ್ನಾನಗೃಹಕ್ಕಿಂತ ದೊಡ್ಡದಾಗಿದೆಯಂತೆ. ಇನ್ನು ಈ ಮನೆಯಲ್ಲಿ ಮೂವಿಂಗ್ ವಾಲ್ (ಚಲಿಸುವ ಗೋಡೆ) ಎನ್ನುವುದು ಅವರ ಮನೆಯ ಒಂದು ವಿಭಿನ್ನ ವಿನ್ಯಾಸ ಎನ್ನಬಹುದು. ಪಾರ್ಟಿ ಅಥವಾ ಇತರ ಕಾರ್ಯಕ್ರಮ ಇದ್ದಂತಹ ಸಂದರ್ಭದಲ್ಲಿ ಗೋಡೆಯನ್ನು ಮೂವ್ ಮಾಡಿ ಪ್ರತ್ಯೇಕ ಕೊಠಡಿಗಳನ್ನು ರಚಿಸಲು ಇಲ್ಲಿ ಸಾಧ್ಯವಿದೆ. ಮಕ್ಕಳನ್ನು ಪಾರ್ಟಿಗಳಿಂದ ದೂರವಿಡುವುದು ಉದ್ದೇಶದಿಂದ ಅರ್ಪಿತಾ ಈ ವಿನ್ಯಾಸ ಮಾಡಿರುವುದಾಗಿ ಕೂಡ ತಿಳಿಸಿದ್ದಾರೆ. ಅರ್ಪಿತಾ ಪತಿ ನಟ ಆಯುಷ್ ಅವರು ಈ ಮೂವಿಂಗ್ ವಾಲ್ ಬಗ್ಗೆ ಮಾತ ನಾಡಿದ್ದು ಸಹ ವೈರಲ್ ಆಗಿದೆ. ಅರ್ಪಿತಾ ನನ್ನ ಮೇಲೆ ಅಸಮಾಧಾನಗೊಂಡಾಗಲೆಲ್ಲಾ, ಅವಳು ಕೋಪದಿಂದ ಬಾಗಿಲನ್ನು ಬಡಿಯುವುದಿಲ್ಲ ಬದಲಿಗೆ ಮೂವಿಂಗ್ ವಾಲ್ ಮೂಲಕ ಮನೆ ಡಿವೈಡ್ ಮಾಡಿ ಇದ್ದು ಬಿಡ್ತಾಳೆ ಎಂದಿದ್ದಾರೆ. ಸದ್ಯ ಇವರ ಐಶಾರಾಮಿ ಅಪಾರ್ಟ್ ಮೆಂಟ್ ಲುಕ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.