ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Abhimanyu: ಎಂಜಿನಿಯರ್‌ ಈಗ ಆ್ಯಕ್ಟರ್‌; ʼಹಚ್ಚೆʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ಅಭಿಮನ್ಯು

Hacche Movie: ಆಗಸ್ಟ್‌ 22ರಂದು ರಿಲೀಸ್‌ ಆದ ʼಹಚ್ಚೆʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪರಿಚಿತರಾದ ಅಭಿಮನ್ಯು ಸದ್ಯ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮೈಸೂರು ಮೂಲದ ಇವರು ಎಂಜಿನಿಯರಿಂಗ್‌ ಪದವೀಧರರೂ ಹೌದು. ಜತೆಗೆ ಆರ್ಗಾನಿಕ್ ವ್ಯವಹಾರವನ್ನು ನಡೆಸುತ್ತಿದ್ದಾರೆ.

ಬೆಂಗಳೂರು: ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ʼಹಚ್ಚೆʼ ಕನ್ನಡ ಚಿತ್ರ (Hacche Movie) ತೆರೆಕಂಡಿದೆ. ಈ ಮೂಲಕ ಅಭಿಮನ್ಯು (Actor Abhimanyu) ಎನ್ನುವ ಮೈಸೂರು ಮೂಲದ ಅಪ್ಪಟ ಕನ್ನಡದ ಪ್ರತಿಭೆ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚಿದ್ದಾರೆ. ಇದುವರೆಗೆ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಅವರಿಗೆ ನಾಯಕನಾಗಿ ಇದು ಮೊದಲ ಪ್ರಯತ್ನ. ಆರ್ಗಾನಿಕ್ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅವರು ಇದೀಗ ನಟನಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಟಕ ಕಲೆಯ ಮೇಲಿನ ತಮ್ಮ ಆಸಕ್ತಿಯನ್ನು ಬೆಳೆಸುತ್ತ ಬಂದ ಅವರು ಇದೀಗ ಬೆಳ್ಳಿ ಪರದೆಯಲ್ಲಿ ಆರಂಭಿಕ ಹೆಜ್ಜೆ ಇಟ್ಟಿದ್ದಾರೆ. ಅಭಿಮನ್ಯು ಎಂಜಿನಿಯರ್ ಪದವೀಧರರು ಕೂಡ ಹೌದು.

ಅಭಿಮನ್ಯು ನಾಯಕನಾಗಿ ನಟಿಸಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼಹಚ್ಚೆʼ ಚಿತ್ರದ ಟ್ರೈಲರ್‌ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಸಸ್ಪೆನ್ಸ್‌ ಥಿಲ್ಲರ್‌ ಕಥಾಹಂದರದ ಈ ಚಿತ್ರದ ಶೂಟಿಂಗ್‌ 50 ದಿನಗಳ ಕಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ನಡೆದಿದೆ.



ಈ ಸುದ್ದಿಯನ್ನೂ ಓದಿ: I Am God Movie: ರವಿ ಗೌಡ ನಟನೆಯ ʼI Am ಗಾಡ್‌ʼ ಸಿನಿಮಾದ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ

Actor Abhimanyu 1

ಹೇಗಿದೆ ʼಹಚ್ಚೆʼ?

ಆಗಸ್ಟ್‌ 22ರಂದು ತೆರೆಗೆ ಬಂದಿರುವ ‘ಹಚ್ಚೆ’ ಚಿತ್ರವು ರಾಜ್ಯದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಜತೆಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಸ್ಪೆನ್ಸ್‌ ಥಿಲ್ಲರ್‌ ಜಾನರ್‌ನ ಚಿತ್ರವಾದರೂ ಇದರಲ್ಲಿ ಪ್ರೀತಿ, ಸ್ನೇಹ, ಸೆಂಟಿಮೆಂಟ್, ರಹಸ್ಯ, ಮಾಫಿಯಾ, ಇತಿಹಾಸ, ಮಾಟ-ಮಂತ್ರ, ಹಾಸ್ಯ ಈ ಎಲ್ಲ ಅಂಶವೂ ಹದವಾಗಿ ಬೆರೆತಿದೆ.

ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅಭಿಮನ್ಯು ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಕನ್ನಡಕ್ಕೊಬ್ಬ ಒಳ್ಳೆಯ ಆ್ಯಕ್ಷನ್‍ ಹೀರೋ ಸಿಕ್ಕಂತಾಗಿದೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಆ್ಯಕ್ಷನ್‍, ಸೆಂಟಿಮೆಂಟ್‌, ಡ್ಯಾನ್ಸ್‌ನಲ್ಲಿಯೂ ಮೋಡಿ ಮಾಡಿದ ಅವರು ಈಗಾಗಲೇ ಭರವಸೆ ಮೂಡಿಸಿದ್ದಾರೆ. ಆದ್ಯಪ್ರಿಯಾ, ಅನುಪ್ರೇಮಾ, ಹಿರಿಯ ನಟ ಗುರುರಾಜ್‌ ಹೊಸಕೋಟೆ ಕೂಡ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ.