ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹದಿಹರೆಯಕ್ಕೆ ಕಾಲಿಟ್ಟ ನಟ ಮಹೇಶ್ ಬಾಬು ಪುತ್ರಿ; ವಿಮಾನ ನಿಲ್ದಾಣದಲ್ಲಿ ತಂದೆ-ಮಗಳ ಮಧುರ ಬಾಂಧವ್ಯ ಸೆರೆಹಿಡಿದ ಛಾಯಾಗ್ರಾಹಕರು

Mahesh Babu: ಟಾಲಿವುಡ್ ನಟ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಪುತ್ರಿ ಸಿತಾರಾ ಹದಿಹರೆಯಕ್ಕೆ ಕಾಲಿಟಿದ್ದಾಳೆ. ಮಗಳ ಹುಟ್ಟುಹಬ್ಬದ ಬೆನ್ನಲ್ಲೇ ಕುಟುಂಬ ರಜೆಗೆ ವಿದೇಶಕ್ಕೆ ತೆರಳಿದೆ. ವಿಮಾನ ನಿಲ್ದಾಣದಲ್ಲಿದ್ದ ಇವರ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಮತ್ತು ನಮ್ರತಾ ಶಿರೋಡ್ಕರ್ (Namrata Shirodkar) ಅವರ ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಜುಲೈ 20ರಂದು 13ನೇ ವರ್ಷಕ್ಕೆ ಕಾಲಿಟ್ಟರು. ಸೆಲೆಬ್ರಿಟಿ ಮಗು ಒಂದು ವರ್ಷ ದೊಡ್ಡವಳಾಗುತ್ತಿದ್ದಂತೆ ಕುಟುಂಬ ರಜೆಗೆ ತೆರಳಿದೆ. ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್, ಪುತ್ರ ಗೌತಮ್ ಘಟ್ಟಮನೇನಿ ಮತ್ತು ಸಿತಾರಾ ಅವರ ಮಧುರ ಕ್ಷಣಗಳನ್ನು ವಿಮಾನ ನಿಲ್ದಾಣದಲ್ಲಿ ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ.

ಪುತ್ರಿ ಸಿತಾರಾಗೆ ಸಿಹಿ ಮುತ್ತು ನೀಡಿದ ಮಹೇಶ್ ಬಾಬು

ನಮ್ರತಾ, ಗೌತಮ್ ಮತ್ತು ಸಿತಾರಾ ಮೂವರು ಮಹೇಶ್ ಬಾಬು ಜತೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ನಗುತ್ತಾ ಹೋಗುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ನಮ್ರತಾ ತನ್ನ ಮಕ್ಕಳೊಂದಿಗೆ ಮಾತನಾಡುತ್ತಾ ವಿಮಾನ ನಿಲ್ದಾಣದ ಮೂಲಕ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಟ ಮಹೇಶ್ ಬಾಬು ಅವರನ್ನು ಹಿಂಬಾಲಿಸಿದ್ದಾರೆ.

ಮಹೇಶ್ ಬಾಬು ವಿಮಾನ ನಿಲ್ದಾಣದಲ್ಲಿ ಸಿತಾರಾಗೆ ಸಿಹಿ ಮುತ್ತು ನೀಡಿದ ದೃಶ್ಯ ಎಲ್ಲರ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಹೇಶ್ ಸಿತಾರಾ ಭುಜಗಳ ಮೇಲೆ ಕೈಗಳನ್ನು ಇಟ್ಟುಕೊಂಡು ಕೆನ್ನೆಗೆ ಮುತ್ತಿಡುತ್ತಿರುವುದನ್ನು ಕಾಣಬಹುದು.

ಇಲ್ಲಿದೆ ವಿಡಿಯೊ:

ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿದ್ದ ದಂಪತಿ

ಮಹೇಶ್ ಬಾಬು ಮತ್ತು ನಮ್ರತಾ ಸಾಮಾಜಿಕ ಮಾಧ್ಯಮದಲ್ಲಿ ಸಿತಾರಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದರು. ಮಗಳು ಹದಿಹರೆಯಕ್ಕೆ ಕಾಲಿಡುತ್ತಿರುವುದರಿಂದ ವಿಶೇಷವಾಗಿ ಶುಭ ಕೋರಿದ್ದಾರೆ. ʼʼಏನೂ ಗೊತ್ತಾಗದೇ ಅವಳು ಈಗ ಹದಿಹರೆಯದವಳು! ಹುಟ್ಟುಹಬ್ಬದ ಶುಭಾಶಯಗಳು ಸಿತಾರಾ. ಯಾವಾಗಲೂ ನನ್ನ ಜೀವನವನ್ನು ಬೆಳಗಿಸುತ್ತಾಳೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ʼ ಎಂದು ಪೋಸ್ಟ್ ಮಾಡಿದ್ದಾರೆ.

ಮಹೇಶ್ ಬಾಬು ಪತ್ನಿ ಹಾಗೂ ಒಂದು ಕಾಲದಲ್ಲಿ ನಟಿಯಾಗಿ ಮಿಂಚಿದ್ದ ನಮ್ರತಾ, ಸಿತಾರಾಳ ಬಾಲ್ಯದ ಚಿತ್ರಗಳನ್ನು ಪೋಸ್ಟ್ ಮಾಡಿ, ‘ʼನೀನು ಎಷ್ಟೇ ದೊಡ್ಡವಳಾದರೂ, ನನ್ನ ಕೈಯನ್ನು ಮೊದಲ ಬಾರಿ ಹಿಡಿದ ಆ ಸಣ್ಣ ಕೈಯಾಗೇ ಎಂದಿಗೂ ಇರುತ್ತೀಯ, ನನ್ನ ಜಗತ್ತನ್ನೇ ಬದಲಾಯಿಸಿದ ಕೈ ನೀನು... ಹುಟ್ಟುಹಬ್ಬದ ಶುಭಾಶಯಗಳು ಸಿತಾರಾ’ʼʼ ಎಂದು ಬರೆದು ಹಂಚಿಕೊಂಡಿದ್ದಾರೆ.

ಮಹೇಶ್ ಬಾಬು ಅವರ ಸಿನಿಮಾ

ಮಹೇಶ್ ಕೊನೆಯ ಬಾರಿಗೆ ತ್ರಿವಿಕ್ರಮ್ ಶ್ರೀನಿವಾಸ್ ಅವರ 2024ರ ಸಂಕ್ರಾಂತಿ ಚಿತ್ರ ʼಗುಂಟೂರು ಕಾರಮ್‍ʼನಲ್ಲಿ ಅಭಿನಯಿಸಿದರು. ಈ ಚಿತ್ರವು ಮಿಶ್ರ ವಿಮರ್ಶೆ ಪಡೆಯಿತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ವಿಶ್ವಾದ್ಯಂತ 180.5 ಕೋಟಿ ರೂ. ಸಂಗ್ರಹಿಸಿದೆ ಎನ್ನಲಾಗಿದೆ.

ಅವರು ಈಗ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ, ಇನ್ನೂ ಹೆಸರಿಡದ SSMB 29 ಚಿತ್ರದ ಶೂಟಿಂನಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ಚಿತ್ರೀಕರಣಕ್ಕಾಗಿ ತಂಡವು ಟಾಂಜಾನಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ತೆರಳುವ ನಿರೀಕ್ಷೆಯಿದೆ.