ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Priyanka P

Freelance Writer

[email protected]

ನನ್ನ ಹೆಸರು ಪ್ರಿಯಾಂಕಾ. ನಮ್ಮೂರು ಉಪ್ಪಿನಂಗಡಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್ ಚಾನೆಲ್, ಅವಧಿ ಮ್ಯಾಗಝೀನ್, ಕನ್ನಡ ದುನಿಯಾ, ವಿಜಯಕರ್ನಾಟಕ ಮತ್ತು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈ ಮೊದಲು ಸುದ್ದಿ ಮತ್ತು ಜೀವನಶೈಲಿ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ, ವಿಶ್ವವಾಣಿಯಲ್ಲಿ ವೈರಲ್ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Articles
ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲೆ ಶಿಕ್ಷಕ

ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಸರ್ಕಾರಿ ಶಿಕ್ಷಕನ ಬಂಧನ

Crime News: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದೆ. ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ಅಪ್ರಾಪ್ತೆಯರಿಗೆ ಈ ಕಾಮುಕ ಶಿಕ್ಷಕ ಲೈಂಗಿಕ ಕಿರುಕುಳವನ್ನೂ ನೀಡಿದ್ದ. ಜಾಗೃತಿ ಕಾರ್ಯಕ್ರಮ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಕೋಚಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಗುಂಡಿನ ದಾಳಿ ಶಂಕೆ, ಒಬ್ಬ ವಿದ್ಯಾರ್ಥಿಗೆ ಗಾಯ

ಕೋಚಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

Crime News: ಕೋಚಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಒಬ್ಬ ವಿದ್ಯಾರ್ಥಿ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಒಬ್ಬನಿಗೆ ಬರ್ತ್ ಡೇ ಪಾರ್ಟಿ ಮಾಡುವಾಸೆ, ಮತ್ತೊಬ್ಬನಿಗೆ ಬೈಕ್ ಕೊಳ್ಳುವ ಆಸೆ: ಚಿನ್ನದ ಸರಕ್ಕಾಗಿ ಆಪ್ತ ಸ್ನೇಹಿತನನ್ನೇ ಕೊಂದ ಬಾಲಕರು

ಚಿನ್ನದ ಸರಕ್ಕಾಗಿ ಆಪ್ತ ಸ್ನೇಹಿತನನ್ನೇ ಕೊಂದ ಬಾಲಕರು

Crime News: ಒಬ್ಬನಿಗೆ ಹುಟ್ಟುಹಬ್ಬ ಆಚರಿಸಬೇಕೆಂಬ ಆಸೆ ಇತ್ತು. ಇನ್ನೊಬ್ಬನಿಗೆ ಬೈಕ್ ಕೊಳ್ಳಬೇಕೆಂಬ ಆಸೆ ಇತ್ತು. ಈ ದುರಾಸೆಗೆ ಬಲಿಯಾಗಿದ್ದು ಮಾತ್ರ ಸ್ನೇಹಿತ. ಇಬ್ಬರು ಅಪ್ರಾಪ್ತ ಬಾಲಕರು ಹಣಕ್ಕಾಗಿ ತಮ್ಮ 17 ವರ್ಷದ ಆಪ್ತ ಸ್ನೇಹಿತ ಪ್ರಜ್ಯೋತ್ ಕಾಂಬ್ಳೆಯನ್ನು ಕೊಂದಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಘಟನೆ ನಡೆದಿದೆ.

ಔಷಧ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ: ಐವರು ಕಾರ್ಮಿಕರು ದುರ್ಮರಣ, ಆರು ಮಂದಿ ಗಂಭೀರ

ಔಷಧ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ: ಐವರು ಕಾರ್ಮಿಕರು ಸಾವು

Reactor Blast: ಔಷಧ ತಯಾರಿಕಾ ಘಟಕವೊಂದರಲ್ಲಿ ಹೈಡ್ರೋಜನೀಕರಣ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ 15 ಕಿಲೋಲೀಟರ್ ಸಾಮರ್ಥ್ಯದ ರಿಯಾಕ್ಟರ್ ಸ್ಫೋಟಗೊಂಡು ಐವರು ಕಾರ್ಮಿಕರು ಮೃತಪಟ್ಟ ಆಘಾತಕಾರಿ ಘಟನೆ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ನೂಡಲ್ಸ್ ಸೇವಿಸಿದ ಒಂದೇ ಕುಟುಂಬದ ಐವರು ಸಾವು; ಗ್ರೇಟರ್ ನೋಯ್ಡಾದಲ್ಲಿ ಭೀಕರ ದುರಂತ

ಗ್ರೇಟರ್ ನೋಯ್ಡಾದಲ್ಲಿ ನೂಡಲ್ಸ್ ಸೇವಿಸಿ ಒಂದೇ ಕುಟುಂಬದ ಐವರು ಸಾವು

Family Tragedy: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹಳ್ಳಿಯೊಂದರಲ್ಲಿ ನಡೆದಿದೆ. ಹಿಂದಿನ ರಾತ್ರಿ ಕುಟುಂಬವು ನೂಡಲ್ಸ್ ತಿಂದಿದ್ದರಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದೆ. ಹಿಂದಿನ ರಾತ್ರಿ ಕುಟುಂಬವು ನೂಡಲ್ಸ್ ಮತ್ತು ಚಹಾ ಸೇವಿಸಿದ್ದರು.

ಜನಗಣತಿ ನಿಯಮಗಳಿಗೆ ತಿದ್ದುಪಡಿ: ಖಾಸಗಿ ಶಾಲಾ ಶಿಕ್ಷಕರ ನೇಮಕಕ್ಕೆ ಕೇಂದ್ರದಿಂದ ಅಧಿಸೂಚನೆ

ಜನಗಣತಿಗೆ ಖಾಸಗಿ ಶಾಲಾ ಶಿಕ್ಷಕರ ನೇಮಕಕ್ಕೆ ಕೇಂದ್ರದ ಅಧಿಸೂಚನೆ

Census duty: ಸರ್ಕಾರಿ ಶಾಲೆಗಳ ಶಿಕ್ಷಕರ ಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರನ್ನೂ ಜನಗಣತಿ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಮಿಸುವ ಗುಮಾಸ್ತರು ಹಾಗೂ ಇತರ ಸಿಬ್ಬಂದಿಯನ್ನೂ ಜನಗಣತಿದಾರರಾಗಿ ನಿಯೋಜಿಸಬಹುದು ಎಂದು ತಿಳಿಸಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರ : ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ ಯುವಕ, ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: 18 ವರ್ಷದ ಯುವಕನ ಬಂಧನ

Crime News: 18 ವರ್ಷದ ಹದಿಹರೆಯದ ಯುವಕನೊಬ್ಬನನ್ನು ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಘಟನೆ ನಡೆದಿದೆ. ಕಳೆದ ವರ್ಷ, ಆರೋಪಿಯು ತನ್ನ ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದಿದ್ದಾಗ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಹೊರ್ಮುಜ್ ಜಲಸಂಧಿ, ರೊಮೇನಿಯಾದಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ: 24 ಭಾರತೀಯ ನಾವಿಕರು ಸುರಕ್ಷಿತ

ಟ್ಯಾಂಕರ್‌ಗಳ ಮೇಲೆ ದಾಳಿ: 24 ಭಾರತೀಯ ನಾವಿಕರು ಸುರಕ್ಷಿತ

Attacks on Tankers: ಹೊರ್ಮುಜ್ ಜಲಸಂಧಿ ಮತ್ತು ರೊಮೇನಿಯಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ದಾಳಿಗೊಳಗಾದ ಎರಡು ಹಡಗುಗಳಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.

ಹಿಮ್ಮುಖ ನಡಿಗೆಯ ಪ್ರಯೋಜನಗಳು ಗೊತ್ತೇ?

ಹಿಮ್ಮುಖ ನಡಿಗೆಯ ಪ್ರಯೋಜನಗಳು ಗೊತ್ತೇ?

Benefits of Walking Backwards: ನಡಿಗೆ ನಮಗ್ಯಾರಿಗೂ ಹೊಸದಲ್ಲ; ಆದರೆ ಹಿಮ್ಮುಖ ನಡಿಗೆ ಹೊಸದು. ನಡಿಗೆಯನ್ನು ಅತ್ಯಂತ ಸುಲಭದ ವ್ಯಾಯಾಮ ಎಂದೇ ಕರೆಯಲಾಗಿದೆ. ಆದರೆ ನಡಿಗೆಯ ದಿಸೆಯೊಂದನ್ನು ಬದಲಿಸುವುದರಿಂದ ಇದನ್ನು ಸವಾಲೊಡ್ಡುವ ವ್ಯಾಯಾಮವಾಗಿ ಮಾಡುವುದಕ್ಕೆ ಸಾಧ್ಯವಿದೆ. ಹಿಮ್ಮುಖ ಚಲನೆಯನ್ನು ರೆಟ್ರೊ ವಾಕಿಂಗ್‌ ಎಂದೂ ಕರೆಯಲಾಗುತ್ತದೆ.

6ನೇ ಮಹಡಿಯಿಂದ ಹಾಲುಗಲ್ಲದ ಕಂದಮ್ಮನನ್ನು ಎಸೆದ 10 ವರ್ಷದ ಬಾಲಕಿ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

6ನೇ ಮಹಡಿಯಿಂದ ಕಂದಮ್ಮನನ್ನು ಎಸೆದ 10 ವರ್ಷದ ಬಾಲಕಿ

Crime news: 10 ವರ್ಷದ ಬಾಲಕಿಯೊಬ್ಬಳು ನೆರೆಮನೆಯ 18 ತಿಂಗಳ ಮಗುವನ್ನು ಆರನೇ ಮಹಡಿಯಿಂದ ಎಸೆದ ಆಘಾತಕಾರಿ ಘಟನೆ ಮುಂಬೈನ ಗೋರೆಗಾಂವ್‌ನಲ್ಲಿ ನಡೆದಿದೆ. ಬುಧವಾರ (ಅ.14) ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿ ಮಗುವನ್ನು ಎತ್ತಿಕೊಂಡು ಆರನೇ ಮಹಡಿಯಿಂದ ಎಸೆದಿದ್ದಾಳೆ.

ಭಾರತ ಬಿಟ್ಟು ತೊಲಗಿ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿರುವ ನಟ ಇಮ್ರಾನ್ ಖಾನ್

ಭಾರತ ಬಿಟ್ಟು ತೊಲಗಿ ಆದೇಶ ಪ್ರಶ್ನಿಸಿದ ನಟ ಇಮ್ರಾನ್ ಖಾನ್

Imran Khan: ಭಾರತವನ್ನು ತೊರೆಯುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿರುವ ಆದೇಶವನ್ನು ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ. ನಟನ ಪರ ವಕೀಲ ಜುಲ್ಫಿಕರ್ ಮೆಮನ್ ಅವರು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಎಫ್ಆರ್‌ಆರ್‌ಒ ಆದೇಶಿಸಿದೆ.

ದುರ್ಗಾ ಪೂಜೆಯ ಸಮಯದಲ್ಲೇ ಕಾಲೇಜಿನ ದೇವಸ್ಥಾನದ ಬಳಿ ಗೋಮಾಂಸ ಬೇಯಿಸಿದ ವಿದ್ಯಾರ್ಥಿಗಳು: ಭುಗಿಲೆದ್ದ ವಿವಾದ

ದೇವಸ್ಥಾನದ ಬಳಿ ಗೋಮಾಂಸ ಬೇಯಿಸಿದ ವಿದ್ಯಾರ್ಥಿಗಳು

Students Cook Beef: ಬಾಂಗ್ಲಾದೇಶದ ಢಾಕಾದಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದ ದೇವಸ್ಥಾನದ ಸಮೀಪ ಗೋಮಾಂಸದ ಖಿಚಡಿ ಕಾರ್ಯಕ್ರಮ ಆಯೋಜಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿಕ್ ಇತಿಹಾಸ ವಿಭಾಗದ ವಿದ್ಯಾರ್ಥಿಗಳ ಗುಂಪೊಂದು ಅಕ್ಟೋಬರ್ 16ರ ಶುಕ್ರವಾರ, ದುರ್ಗಾ ಪೂಜೆಯ ದಿನದಂದೇ ವಿಶ್ವವಿದ್ಯಾಲಯದ ಆವರಣದಲ್ಲಿ ಗೋವುಗಳನ್ನು ಬಲಿ ನೀಡಲು ಯೋಜಿಸಿರುವುದಾಗಿ ಘೋಷಿಸಿತು.

ಸಿಜೆಪಿ ಪ್ರತಿಭನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ? ಬಿಜೆಪಿ ನಾಯಕ ಬ್ರಿಜ್ ಭೂಷಣ್ ಆರೋಪ

"ಸಿಜೆಪಿ ಪ್ರತಿಭನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ?"

CJP Protest: ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಚಳವಳಿಯನ್ನು ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಸೂಚನೆಯ ಮೇರೆಗೆ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಆರೋಪಿಸಿದ್ದಾರೆ. ವಿದೇಶಿ ಹಿತಾಸಕ್ತಿಗಳು ಈ ಚಳವಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಸರ್ವಿಸ್ ರೈಫಲ್ ಸಹಿತ ನಾಪತ್ತೆಯಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ!

ಜಮ್ಮು-ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ನಾಪತ್ತೆ

SPO Goes Missing in J&K: 55 ವರ್ಷದ ವಿಶೇಷ ಪೊಲೀಸ್ ಅಧಿಕಾರಿ (SPO) ಒಬ್ಬರು ತಮ್ಮ ಸೇವಾ ರೈಫಲ್‌ನೊಂದಿಗೆ ನಾಪತ್ತೆಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ. ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿಯನ್ನು ಕಿಶ್ತ್ವಾರ್‌ನ ತ್ರಿಹ್ಗಾಮ್ ನಿವಾಸಿ ಬಶೀರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಇಂದು ಸಿಜೆಪಿ ತಿರಂಗ ಮಾರ್ಚ್: ರಾಷ್ಟ್ರ ರಾಜಧಾನಿಯಲ್ಲಿ 6,000 ಪೊಲೀಸರ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ಇಂದು ಸಿಜೆಪಿ ತಿರಂಗ ಮಾರ್ಚ್: ದೆಹಲಿಯಲ್ಲಿ 6,000 ಪೊಲೀಸರ ನಿಯೋಜನೆ

CJP Tiranga March Today: ಇಂದು ಸಂಜೆ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ಪ್ರತಿಭಟನೆಗೆ ಮುನ್ನ ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ. ಆದೇಶಗಳನ್ನು ಉಲ್ಲಂಘಿಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಅದ್ಭುತ ಸಾಹಸ ಪ್ರದರ್ಶನ: ಮೇಲಕ್ಕೆ ಹಾರಿ, ತಲೆಕೆಳಗಾಗಿ ಚಲಿಸಿದ ಟೆಸ್ಲಾ ಕಾರು!

ಮೇಲಕ್ಕೆ ಹಾರಿ, ತಲೆಕೆಳಗಾಗಿ ಚಲಿಸಿದ ಟೆಸ್ಲಾ ಕಾರು

Tesla Car Stunt: ಟೆಸ್ಲಾ ಕಂಪನಿಯು ಹೊಸ ರೋಡ್‌ಸ್ಟರ್ ಕಾರಿನ ಸಾಹಸ ಪ್ರದರ್ಶನ ಮಾಡಲಾಗಿದೆ. ಈ ಕಾರು ವಿಶೇಷವಾಗಿ ನಿರ್ಮಿಸಿದ ಬಾಗಿದ ರ‍್ಯಾಂಪ್ ಮೇಲೆ ಚಲಿಸಿ, ತಲೆಕೆಳಗಾಗಿ ಸಾಗಿದ ನಂತರ ಗಾಳಿಯಲ್ಲಿ ಹಾರಿದಂತೆ ಚಲಿಸಿ ಸುರಕ್ಷಿತವಾಗಿ ಕೆಳಗಿಳಿದಿದೆ. ಹಾರುವ ಕಾರು ಎಂದರೆ ವಿಮಾನದಂತೆ ಸ್ವತಂತ್ರವಾಗಿ ಹಾರುವುದಲ್ಲ. ಕಾರು ಮೇಲೆ ಹಾರಿ ಪಲ್ಟಿಯಾಗುವ ರೀತಿ ಹಾರುತ್ತಾ, ಮತ್ತೆ ರಸ್ತೆಗಿಳಿಯುತ್ತೆ.

“ಮಹಿಳಾ ಪೊಲೀಸ್ ಅಧಿಕಾರಿ ಜೊತೆ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ”: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ: ಬಿಜೆಪಿ ವಾಗ್ದಾಳಿ

BJP Slams Rahul Gandhi: ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಒಬ್ಬ ಪುರುಷ ನಾಯಕ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹೇಗೆ ಅನುಚಿತವಾಗಿ ಮುಟ್ಟಲು ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಸರಕು ಹಡಗು: ಸಮುದ್ರದಲ್ಲಿ ತೇಲುತ್ತಿವೆ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು!

ಸಮುದ್ರದಲ್ಲಿ ತೇಲಿದ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು

Cargo Ship Sinks in Strait of Hormuz: ಹೊರ್ಮುಜ್ ಜಲಸಂಧಿಯಲ್ಲಿ ಐಫೋನ್‌ಗಳು ಮತ್ತು ಐಷಾರಾಮಿ ಸುಗಂಧ ದ್ರವ್ಯದ ಬಾಟಲಿಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಒಮಾನ್ ಕೊಲ್ಲಿಯಲ್ಲಿ ಇರಾನ್‌ಗೆ ಸಂಬಂಧಿಸಿದ ಹಡಗೊಂದನ್ನು ಅಮೆರಿಕದ ಪಡೆಗಳು ನಾಶಪಡಿಸಿದ ಕೆಲವೇ ದಿನಗಳ ಬಳಿಕ ಈ ದೃಶ್ಯಗಳು ಕಾಣಿಸಿಕೊಂಡಿವೆ.

ಎಸ್‌ಐಆರ್‌ ಅಕ್ರಮ ಆರೋಪ: ಅಕ್ಟೋಬರ್ 23ರಿಂದ ದೇಶಾದ್ಯಂತ ಪ್ರತಿಭಟನೆಗೆ ಸಿಜೆಪಿ ಸಜ್ಜು

ಅಕ್ಟೋಬರ್ 23ರಿಂದ ದೇಶಾದ್ಯಂತ ಪ್ರತಿಭಟನೆಗೆ ಸಿಜೆಪಿ ಸಜ್ಜು

CJP Protest: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಅಕ್ಟೋಬರ್ 23 ರಿಂದ ದೇಶಾದ್ಯಂತ ಜನಾಂದೋಲನವನ್ನು ಪ್ರಾರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಸಿಜೆಪಿ ಪುನರುಚ್ಚರಿಸಿತು.

ದಸರಾ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ಗೆ ಆರ್‌ಎಸ್‌ಎಸ್ ಆಹ್ವಾನ: ಕೇಂದ್ರದ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಜಗದೀಪ್ ಧನಕರ್‌ಗೆ ಆರ್‌ಎಸ್‌ಎಸ್ ಆಹ್ವಾನ: ಕಾಂಗ್ರೆಸ್ ವ್ಯಂಗ್ಯ

Jagdeep Dhankhar: ಆರ್‌ಎಸ್‌ಎಸ್‌ ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಪ್ರತಿ ವರ್ಷ ವಿಜಯ ದಶಮಿಯಂದು ಸಂಸ್ಥೆಯ ಸಂಸ್ಥಾಪನಾ ದಿನವನ್ನು ಗುರುತಿಸಲು ನಡೆಯುವ ಈ ಕಾರ್ಯಕ್ರಮಕ್ಕೆ ಧನಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

ಪಾಕಿಸ್ತಾನದಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: 21 ವಿದ್ಯಾರ್ಥಿಗಳು ದುರ್ಮರಣ, 40ಕ್ಕೂ ಹೆಚ್ಚು ಮಂದಿಗೆ ಗಾಯ

ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: 21 ವಿದ್ಯಾರ್ಥಿಗಳು ಸಾವು

School Roof Collapse: ಶಾಲೆಯೊಂದರ ಮೇಲ್ಛಾವಣಿ ಕುಸಿದು 21 ಮಂದಿ ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕಿ ಮೃತಪಟ್ಟಿರುವ ದಾರುಣ ಘಟನೆ ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ. ಹಲವಾರು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2018ರ ಬಿಜೆಪಿ ಐಟಿ ಸೆಲ್ ವಿಡಿಯೊ ಕುರಿತ ಮಾನನಷ್ಟ ಮೊಕದ್ದಮೆ ಪ್ರಕರಣ: ಧ್ರುವ ರಾಠಿಗೆ ಹೊಸ ಸಮನ್ಸ್ ಜಾರಿ

ಮಾನನಷ್ಟ ಮೊಕದ್ದಮೆ ಪ್ರಕರಣ: ಧ್ರುವ ರಾಠಿಗೆ ಮತ್ತೆ ಸಮನ್ಸ್

Dhruv Rathee: ಎಂಟು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ ರಾಠಿಗೆ ದೆಹಲಿ ನ್ಯಾಯಾಲಯವು ಹೊಸ ಸಮನ್ಸ್ ಜಾರಿ ಮಾಡಿದೆ. ಹೊಸ ಸಮನ್ಸ್‌ ಜಾರಿಗೊಳಿಸುವಂತೆ ಕೋರಿ ವಿಕಾಸ್ ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಅವರು ಅಕ್ಟೋಬರ್ 12ರಂದು ಈ ಆದೇಶ ಹೊರಡಿಸಿದ್ದಾರೆ.

ತೂಕ ಇಳಿಸಿದ್ದಾಗಿದೆ, ಮುಂದೆ?

ತೂಕ ಇಳಿಸಿದ್ದಾಗಿದೆ, ಮುಂದೆ?

losing weight: ಹಲವಾರು ತಿಂಗಳು ಡಯೆಟ್‌, ವ್ಯಾಯಾಮ ಎಂದೆಲ್ಲಾ ಕಟ್ಟುನಿಟ್ಟಾಗಿದ್ದು, ಈಗ ತೂಕ ಇಳಿಯಿತು ಎಂದ ಮೇಲೆ ಎಲ್ಲವನ್ನೂ ಸಡಿಲ ಬಿಡುವಂತಾಗುತ್ತದೆ. ಅಲ್ಲಿಗೆ ಇಳಿದ ತೂಕ ನಿಧಾನಕ್ಕೆ ಮರಳುತ್ತದೆ. ಮಾಡಿದ್ದೆಲ್ಲಾ ಮಣ್ಣಾಗುವ ಸ್ಥಿತಿ ಬರುತ್ತದೆ. ಹಾಗಾದರೆ ಜೀವನವಿಡೀ ಡಯೆಟ್‌ ಮಾಡುತ್ತಲೇ ಇರಬೇಕೇ? ನಮ್ಮ ಬದುಕನ್ನು ನಾವು ಸಾಮಾನ್ಯರಂತೆ ಜೀವಿಸುವುದು ಯಾವಾಗ ಎನಿಸಿದರೆ ಅಚ್ಚರಿಯಿಲ್ಲ. ಅಂಥವರಿಗೆ ಇಲ್ಲಿವೆ ಕೆಲವು ಸರಳ ಸೂತ್ರಗಳು.

ಇಸ್ರೇಲ್‌ಗೆ ತೆರಳುವ ವಿಮಾನಗಳಲ್ಲಿ ಪಾಕಿಸ್ತಾನಿ ಪೈಲಟ್‌ಗಳನ್ನು ನಿಷೇಧಿಸಿದ ಏರ್ ಫ್ರಾನ್ಸ್

ಪಾಕಿಸ್ತಾನಿ ಪೈಲಟ್‌ಗಳನ್ನು ನಿಷೇಧಿಸಿದ ಏರ್ ಫ್ರಾನ್ಸ್

Air France Bans Pakistani Pilots: ಪಾಕಿಸ್ತಾನ ಸೇರಿದಂತೆ 31 ದೇಶಗಳ ವಿಮಾನಯಾನ ಸಿಬ್ಬಂದಿಗೆ ಏರ್ ಫ್ರಾನ್ಸ್ ನಿರ್ಬಂಧ ವಿಧಿಸಿದೆ. ಈ ಬೆನ್ನಲ್ಲೇ, ಅಮೆರಿಕದ ಚಿಕಾಗೋ ಮೂಲದ ಯುನೈಟೆಡ್ ಏರ್‌ಲೈನ್ಸ್ ಕೂಡ ಇಸ್ರೇಲ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೈಲಟ್‌ಗಳು ಮತ್ತು ವಿಮಾನದ ಸಿಬ್ಬಂದಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿರುವುದಾಗಿ ಯುನೈಟೆಡ್ ಏರ್‌ಲೈನ್ಸ್ ತನ್ನ ಸಿಬ್ಬಂದಿಗೆ ತಿಳಿಸಿದೆ.

Loading...