ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anchor Anushree Marriage: ಅನುಶ್ರೀ ಅಣ್ಣನಾಗಿ ಮದ್ವೆಗೆ ಬಂದಿದ್ದೇನೆ- ನಟ ಶರಣ್‌

ಬೆಂಗಳೂರಿನ ಹೊರವಲಯದಲ್ಲಿ ರೆಸಾರ್ಟ್‌ವೊಂದರಲ್ಲಿ ಅನುಶ್ರೀ ತಮ್ಮ ದೀರ್ಘ ಕಾಲದ ಗೆಳೆಯನೊಂದಿಗೆ ಹಸೆಮಣೆ ಏರಿದ್ದಾರೆ. ಇನ್ನು ಈ ವಿವಾಹ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ, ನಟ ಶರಣ್‌, ವಿಜಯರಾಘವೇಂದ್ರ ಸೇರಿದಂತೆ ಅನೇಕರು ಸಾಕ್ಷಿಯಾದರು.

ಬೆಂಗಳೂರು: ಖ್ಯಾತ ಆಂಕರ್‌ ಅನುಶ್ರೀ ಅವರು ಇಂದು ದಾಂಪತ್ಯ ಜೀವನಕ್ಕೆ(Anchor Anushree Marriage) ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ರೆಸಾರ್ಟ್‌ವೊಂದರಲ್ಲಿ ಅನುಶ್ರೀ ತಮ್ಮ ದೀರ್ಘ ಕಾಲದ ಗೆಳೆಯನೊಂದಿಗೆ ಹಸೆಮಣೆ ಏರಿದ್ದಾರೆ. ಇನ್ನು ಈ ವಿವಾಹ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ, ನಟ ಶರಣ್‌, ವಿಜಯರಾಘವೇಂದ್ರ ಸೇರಿದಂತೆ ಅನೇಕರು ಸಾಕ್ಷಿಯಾದರು. ಇನ್ನು ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ನಟ ಶರಣ್‌, ಅನುಶ್ರೀ ನಮ್ಮ ಜೊತೆ ಜೊತೆಗೆ ಬೆಳೆದು ಬಂದ ಹುಡುಗಿ. ಅವರ ಬದುಕು ಬಹಳ ಸ್ಫೂರ್ತಿದಾಯಕ. ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿ. ನಾವಿವತ್ತು ಅವರ ಸಹೋದರನಾಗಿ ಸೋದ್ಯೋಗಿಯಾಗಿ, ಗೆಳೆಯನಾಗಿ ಬಂದಿದ್ದೇನೆ. ಅವರಿಬ್ಬರು ಬದುಕು ಸದಾನ ಹಸನಾಗಿರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Anchor Anushree: ಆ್ಯಂಕರ್ ಅನುಶ್ರೀ-‌ ರೋಷನ್ ಮದುವೆ ಇನ್ವಿಟೇಶನ್‌ ರಿವೀಲ್‌, ʼಏಕಾಂಗಿ ನಂತರ ಈಗ ಅರ್ಧಾಂಗಿʼ ಎಂದ ಅನುಶ್ರೀ

ನಿರೂಪಕಿ ಬದು ಅಷ್ಟು ಸುಲಭವಲ್ಲ. ಅವರ ಶ್ರಮ ಎಲ್ಲರಿಗೂ ಸ್ಫೂರ್ತಿದಾಯಕ. ಬೆಳಗ್ಗಿನ ಜಾವ, ತಡರಾತ್ರಿ ಶೂಟಿಂಗ್‌ ಇದ್ದರೂ ಒಬ್ಬ ನಿರೂಪಕಿ ಮಾತ್ರ ಇಡೀ ಶೋ ಮುಗಿಯುವವರೆಗೆ ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅನುಶ್ರೀ ಯವರ ಪರಿಶ್ರಮ ಎಷ್ಟರಮಟ್ಟಿಗೆ ಇದೆ ಎಂಬುದು ನಾಡಿನ ಜನತೆಗೆ ಇದೆ. ಅದಕ್ಕಿಂತ ಹೆಚ್ಚು ನನಗಿದೆ. ಅದೆಷ್ಟೋ ಬಾರಿ ನಾನೇ ಅಚ್ಚರಿ ಪಟ್ಟುಕೊಂಡು ಅವರನ್ನೂ ಕೇಳಿದುಂಟು. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಇಂದು ಅವರು ನಮಗೆಲ್ಲರಿಗೂ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಶರಣ್‌ ಸಂಸತ ವ್ಯಕ್ತಪಡಿಸಿದ್ದಾರೆ.