ಬೆಂಗಳೂರು: ಕನ್ನಡದ ಖ್ಯಾತ ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಅವರ ಮಧ್ಯೆ ಬಿರುಕು ಉಂಟಾಗಿದ್ದು ಡಿವೋರ್ಸ್ ಕೂಡ ಪಡೆದಿದ್ದಾರೆ. ಬಿಗ್‌ಬಾಸ್ ನಲ್ಲಿಯೂ ಗಮನ ಸೆಳೆದಿದ್ದ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾದರು. ಆದರೆ ಈ ಜೋಡಿಯ ಸಂಬಂಧ ಹೆಚ್ಚು ವರ್ಷ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರು ಡಿವೋರ್ಸ್ ನಿರ್ಧಾರ ಪಡೆದು ಎಲ್ಲರಿಗೂ ಶಾಕ್ ಕೂಡ ನೀಡಿದ್ದರು. ಸದ್ಯ ಚಂದನ್ ಅವರು ಅವರ ಕೆಲಸದಲ್ಲಿ ಬ್ಯುಸಿ ಆದರೆ ನಿವೇದಿತಾ ಅವರು ಟ್ರಾವೆಲ್, ಟ್ರಿಪ್ ಅಂತ ಬ್ಯುಸಿ ಇದ್ದಾರೆ. ಸದ್ಯ ಪ್ಲೋರಿಡಾಕ್ಕೆ ಜಾಲಿ ಟ್ರಿಪ್ ಕೈಗೊಂಡಿರುವ ನಿವೇದಿತಾ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ನಿವೇದಿತಾ ಹಾಕಿರುವ ಪೋಸ್ಟ್‌ವೊಂದು ಹಲವರ ಗಮನ ಸೆಳೆದಿದ್ದು ನಿವೇದಿತಾ ಎರಡನೇ ಮದುವೆಗೆ ತಯಾರು ಆಗಿದ್ದಾರಾ ಎನ್ನುವ ಕುತೂಹಲ ಮೂಡಿದೆ.
ಸದ್ಯ ಪ್ಲೋರಿಡಾಗೆ ಟ್ರಿಪ್ ಕೈಗೊಂಡಿರುವ ನಿವೇದಿತಾ ಗೌಡ, ಹಲವು ಫೋಟೊ ಮತ್ತು ರೀಲ್ಸ್ ಹಂಚಿಕೊಂಡಿದ್ದಾರೆ. ಆದರೆ ಅವರು ಹಂಚಿಕೊಂಡ ಫೋಟೋ ಒಂದರಲ್ಲಿ ನಿವೇದಿತಾ ತಮ್ಮ ಕೈಯಲ್ಲಿ ಹೂ ಗುಚ್ಛವನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ. ಅದೇ ರೀತಿ ಹೂಗುಚ್ಚ ಹಿಡಿದು ನಾಚಿಕೊಂಡಿದ್ದಾರೆ. ಇದಕ್ಕೆ 28-08-25 ಎಂದು ಲವ್ ಸಿಂಬಲ್ ಇರುವ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಸದ್ಯ ಈ ಪೋಸ್ಟ್ ನಿವೇದಿತಾ ಗೌಡ ಅವರು ಮತ್ತೇ ಪ್ರೀತಿಯಲ್ಲಿ ಇದ್ದರಾ ಎನ್ನುವ ಕುತೂಹಲ ಮೂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಅದೇ ದಿನಾಂಕವನ್ನು ಉಲ್ಲೇಖಿಸಿದ್ದು ರೆಡ್ ಹಾರ್ಟ್ ನ ಎಮೋಜಿಯನ್ನು ಕೂಡ ಹಾಕಿದ್ದಾರೆ. ಸಾಮಾನ್ಯವಾಗಿ ತುಂಬಾ ವಿಶೇಷವಾದ ದಿನ ಇದ್ದರೆ ದಿನಾಂಕವನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸುತ್ತಾರೆ. ಹೀಗಾಗಿಯೇ ಕೆಲವರು ನಿವೇದಿತಾ ಗೌಡ ಪ್ರೀತಿಯಲ್ಲಿ ಇದ್ದು ಯಾರಿಗೋ ಪ್ರಪೋಸ್ ಮಾಡಿದ್ದಾರೆ. ಎರಡನೇ ಮದುವೆ ಬಗ್ಗೆ ಕ್ಲೂ ಕೂಡ ನೀಡಿರಬಹುದು ಎಂದು ಅಭಿಮಾನಿಗಳು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಇದನ್ನು ಓದಿ:Nivedita Gowda: ನ್ಯೂಯಾರ್ಕ್ ಬೀದಿಗಳಲ್ಲಿ ಕನ್ನಡ ಹಾಡಿಗೆ ಸ್ಟೆಪ್ ಹಾಕಿದ್ದ ನಟಿ ನಿವೇದಿತಾ ಗೌಡ- ವಿಡಿಯೊ ವೈರಲ್
ನಿವೇದಿತಾ ವಿಚ್ಚೇದನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತೀ ಬಾರಿ ಅವರು ರೀಲ್ಸ್, ವಿಡಿಯೊ ಶೇರ್ ಮಾಡುತ್ತಿರುತ್ತಾರೆ. ಈ ಬಗ್ಗೆ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಫುಲ್ ಜಾಲಿಯಾಲ್ಲಿದ್ದಾರೆ. ಸೋಷಿ ಯಲ್ ಮೀಡಿಯಾದ ಜೊತೆಗೆ ಸಿನಿಮಾ ಕೆಲಸದಲ್ಲೂ ಬ್ಯುಸಿಯಾಗಿ ಇದ್ದಾರೆ. ಇತ್ತೀಚೆಗೆ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ 'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ಹಾಗೆಯೇ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೊಕೇಶ್ ಜೊತೆ 'ಜಿಎಸ್‌ಟಿ' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.