ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tanushree Dutta: ಬಿಗ್ ಬಾಸ್ ಗೆ ಬರಲು ಕೋಟ್ಯಾಂತರ ರೂ.ಆಫರ್ ನೀಡಿದ್ರೂ ಈ ಖ್ಯಾತ ನಟಿ ಒಲ್ಲೆ ಎಂದಿದ್ದೇಕೆ?

Tanushree Dutta: ಆಶಿಕ್ ಬನಾಯಾ ಆಪ್ನೇ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ನಟಿ ತನುಶ್ರೀ ದತ್ತಾ ಅವರು ಸಿನಿಮಾಕ್ಕಿಂತಲೂ ಗಾಸಿಪ್ ಹಾಗೂ ಕಾಂಟ್ರವರ್ಸಿ ವಿಚಾರದಿಂದಲೇ ಬಹಳ ಖ್ಯಾತಿ ಪಡೆದಿದ್ದಾರೆ. ಮೀಟೂ ಅಭಿಯಾನದಲ್ಲಿ ಮುಖ್ಯ ಪಾತ್ರವಹಿಸಿದ್ದ ನಟಿ ತನುಶ್ರೀ ಅವರಿಗೂ ಕೂಡ ಹಿಂದಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರಲು ಆಹ್ವಾನವಿತ್ತಂತೆ. ಈ ಶೋಗೆ ಬರಲು ಅವರಿಗೆ ಕೋಟಿ ಹಣದ ಆಫರ್ ಅನ್ನು ಸಹ ನೀಡಲಾಗಿತ್ತು ಆದರೆ ಅವರು ಅವೆಲ್ಲವನ್ನು ನಿರಾಕರಿಸಿದ್ದಾರೆ.

ತನುಶ್ರೀ

ನವದೆಹಲಿ: ಭಾರತೀಯ ಟಿವಿ ಮಾಧ್ಯಮಗಳಲ್ಲಿ ಮನೋರಂಜನೆಯ ರಿಯಾಲಿಟಿ ಶೋ ಸಾಲಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಾವಾಗಲೂ ಮುಂಚೂಣಿಯಲ್ಲಿದೆ. ಕನ್ನಡ , ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈಗಾಗಲೇ ಬಿಗ್ ಬಾಸ್ ದೊಡ್ಡ ಮಟ್ಟಿಗೆ ಸಕ್ಸಸ್ ಪಡೆದಿದೆ. ಕಾಂಟ್ರವರ್ಸಿ ಮಾಡಿರುವ ಸೆಲೆಬ್ರಿಟಿ ಸ್ಟಾರ್ ಗಳಿಂದ ಹಿಡಿದು ಸೋಶಿಯಲ್ ಮಿಡಿ ಯಾದಲ್ಲಿ ಜನಪ್ರಿಯರಾಗಿರುವವರು, ಟಿವಿ ವಾಹಿನಿಯಲ್ಲಿ ಕೆಲಸ ಮಾಡುವವರು ಹೀಗೆ ನಾನಾ ವೃತ್ತಿಗಳಿಂದ ಸಮಾಜದಲ್ಲಿ ಖ್ಯಾತಿ ಪಡೆದವರು ಎಲ್ಲರಿಗೂ ಬಿಗ್ ಬಾಸ್ ಮನೆ ಒಂದೊಳ್ಳೆ ವೇದಿಕೆ ಕಲ್ಪಿಸಿದೆ‌. ಅಂತೆಯೇ ಈ ಮನೆಯಲ್ಲಿ ಬಂದ ಸೆಲೆಬ್ರಿಟಿ ವೈಯಕ್ತಿಕ ಜೀವನ, ಗುಣ ನಡತೆ ಎಲ್ಲವನ್ನು ಪ್ರೇಕ್ಷಕರು ಕಾಣಬಹುದಾಗಿದ್ದು ಈ ಶೋಗೆ ಟಿಆರ್ ಪಿ ಕೂಡ ಹೆಚ್ಚಿದೆ.‌ ಬಿಗ್ ಬಾಸ್ ನಿಂದ ಖ್ಯಾತಿ ಪಡೆಯಬಹುದು ಎನ್ನುವ ಉದ್ದೇಶಕ್ಕೆ ಅನೇಕರು ಈ ಬಿಗ್ ಬಾಸ್ ಆಫರ್ ಬಂದ ಕೂಡಲೇ ಒಪ್ಪಿ ಬಿಡುತ್ತಾರೆ. ಆದರೆ ಇನ್ನು ಕೆಲವರು ಇಂತಹ ಆಫರ್ ಎಷ್ಟೇ ಬರಲಿ ಎಷ್ಟೇ ಹಣವನ್ನು ನೀಡಿದ್ರೂ ರಿಜೆಕ್ಟ್ ಮಾಡುವವರು ಇದ್ದಾರೆ. ಅಂತವರಲ್ಲಿ ಬಾಲಿವುಡ್ ನಟಿ ತನುಶ್ರೀ ದತ್ತಾ (Tanushree Dutta) ಕೂಡ ಒಬ್ಬರು ಎನ್ನಬಹುದು.

ಆಶಿಕ್ ಬನಾಯಾ ಆಪ್ನೇ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ನಟಿ ತನುಶ್ರೀ ದತ್ತಾ ಅವರು ಸಿನಿಮಾಕ್ಕಿಂತಲೂ ಗಾಸಿಪ್ ಹಾಗೂ ಕಾಂಟ್ರವರ್ಸಿ ವಿಚಾರದಿಂದಲೇ ಬಹಳ ಖ್ಯಾತಿ ಪಡೆ ದಿದ್ದಾರೆ. ಮೀಟೂ ಅಭಿಯಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಟಿ ತನುಶ್ರೀ ಅವರಿಗೂ ಕೂಡ ಹಿಂದಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರಲು ಆಹ್ವಾನವಿತ್ತಂತೆ. ಈ ಶೋಗೆ ಬರಲು ಅವರಿಗೆ ಕೋಟಿ ಹಣದ ಆಫರ್ ಅನ್ನು ಸಹ ನೀಡಲಾಗಿತ್ತು ಆದರೆ ಅವರು ಅವೆಲ್ಲವನ್ನು ನಿರಾಕರಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬರಲು ತನುಶ್ರೀಗೆ ಆಯೋಜಕರು 1.65ಕೋಟಿ ರೂ. ಹಣದ ಆಮಿಷವನ್ನು ನೀಡ್ಡಿದರು. ಆದರೆ ತನುಶ್ರೀ ಮಾತ್ರ ಈ ಆಫರ್ ಅನ್ನು ಬಿಲ್ ಕುಲ್ ಒಪ್ಪಲೇ ಇಲ್ಲ. ಈ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರತಿ ವರ್ಷವೂ ಬಿಗ್ ಬಾಸ್‌ ಕಡೆಯಿಂದ ನನಗೆ ಕರೆ ಬರುತ್ತಿದೆ. ಈ ವರ್ಷ ಕೂಡ ನನಗೆ ಕರೆ ಮಾಡಿ 1.65ಕೋಟಿಯ ಆಫರ್ ಕೂಡ ನೀಡಿದ್ದರು. ಆದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವತ್ತು ಹೋಗುವುದಿಲ್ಲ ಎಂದಿದ್ದಾರೆ.

ಇದನ್ನು ಓದಿ:Full Meals Movie: ಕ್ಯಾಸೆಟ್‌ನಲ್ಲಿ ʼವಾಹ್ ಏನೋ ಹವಾʼ ಸಾಂಗ್‌ ರಿಲೀಸ್‌ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ

ಬಳಿಕ ಮಾತನಾಡಿ, ನಾನು ನನ್ನ ಕುಟುಂಬದವರ ಜೊತೆಯಲ್ಲಿಯೇ ವಾಸ ಮಾಡಲು ಇಷ್ಟ ಪಡಲಾರೆ‌. ಅಂದ ಮೇಲೆ ಪರಿಚಯ ಇಲ್ಲದ ವ್ಯಕ್ತಿಗಳ ಜೊತೆ ಆ ಮನೆಯಲ್ಲಿ ಹೇಗೆ ಇರಲು ಸಾಧ್ಯ. ಅಲ್ಲಿ ಎಲ್ಲರೂ ಒಟ್ಟಿಗೆ ಇರುತ್ತಾರೆ. ಜಗಳ ಮಾಡ್ತಾರೆ. ಕಣ್ಣೀರು ಹಾಕ್ತಾರೆ. ಪರಸ್ಪರ ಬೈಯುತ್ತಾರೆ. ಹಿಂದಿನಿಂದ ದೂರುತ್ತಾರೆ. ಅಷ್ಟೇ ಅಲ್ಲದೆ ಆ ಮನೆಯಲ್ಲಿ ಹುಡುಗ-ಹುಡುಗಿ ಹಾಸಿಗೆಯನ್ನು ಕೂಡ ಹಂಚಿಕೊಳ್ಳುತ್ತಾರೆ. ಟಿಆರ್‌ಪಿಗಾಗಿ ನಾನು ಒಂದೇ ಹಾಸಿಗೆಯಲ್ಲಿ ಪರ ಪುರುಷನ ಜೊತೆ ಮಲ ಗಬೇಕಾ? ನಾನು ಅಷ್ಟೊಂದು ಚೀಪ್ ಅಲ್ಲ, ಬರಗೆಟ್ಟು ಕುಂತಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ನಟಿ ತನುಶ್ರೀ ಅವರು 2018ರ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಮಾಡಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಮೀಟೂ ಅಭಿಯಾನಕ್ಕೆ ದೊಡ್ಡ ಹೆಜ್ಜೆ ಕೂಡ ಆಗಿತ್ತು. ಸಿನಿಮಾದ ಹಾಡೊಂದರ ಚಿತ್ರೀಕರಣ ಸಮಯದಲ್ಲಿ ನಟ ನಾನಾ ಪಾಟೇಕರ್ ಅವರು ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದರು‌. ಇದಾದ ಬಳಿಕ ಅವರ ಸಿನಿಮಾ ಆಫರ್ ಬರುವ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ.