ಮುಂಬೈ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ (Sunjay Kapur) ಕಳೆದ ತಿಂಗಳು ಪೋಲೋ ಆಡುವಾಗ ಹೃದಯಾಘಾತದಿಂದ ನಿಧನರಾದರು. ಸಂಜಯ್ ಅವರ ಮರಣದ ನಂತರ, ಅವರ ತಾಯಿ ತಮ್ಮ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಸಂಜಯ್ ಕಪೂರ್ , 30,000 ಕೋಟಿ ರೂ. ಒಡೆಯನಾಗಿದ್ದು, ಅದರ ಅಧಿಕಾರಕ್ಕಾಗಿ ಕೊಲೆ ನಡೆದಿರಬಹುದು ಎಂದು ಅವರು ಶಂಕಿಸಿದ್ದರು. ಇದೀಗ ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚದೇವ್ ವೈದ್ಯರ ರಿಪೋರ್ಟ್ ಒಂದನ್ನು ಹಂಚಿಕೊಂಡಿದ್ದು, ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.
ಪತ್ರದಲ್ಲಿ ಸಂಜಯ್ ಕಪೂರ್ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಸರ್ರೆ ಕರೋನರ್ ಕಚೇರಿ ಹೇಳಿದೆ ಮತ್ತು ಎಡ ಕುಹರದ ಹೈಪರ್ಟ್ರೋಫಿ ಮತ್ತು ಇಸ್ಕೆಮಿಕ್ ಹೃದಯ ಕಾಯಿಲೆಯನ್ನು ಸಾವಿಗೆ ಕಾರಣಗಳೆಂದು ಪಟ್ಟಿ ಮಾಡಿದೆ. ಮೊದಲನೆಯದು, ಅಥವಾ LVH, ಹೃದಯದ ಎಡ ಕುಹರದ ಸ್ನಾಯುವಿನ ಗೋಡೆಯು ದಪ್ಪವಾಗುವುದರಿಂದ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಕಷ್ಟವಾಗುತ್ತದೆ. ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಶ್ರಮಿಸಿದಾಗ ಅಥವಾ ಅಧಿಕ ರಕ್ತದೊತ್ತಡದಿಂದಾಗಿ ಈ ಸ್ಥಿತಿ ಹೆಚ್ಚಾಗಿ ಉಂಟಾಗುತ್ತದೆ.
ಇದನ್ನು ಪರಿಧಮನಿ ಕಾಯಿಲೆ ಎಂದೂ ಕರೆಯುತ್ತಾರೆ, ಸಾಮಾನ್ಯವಾಗಿ ಅಪಧಮನಿಗಳು ಕಿರಿದಾಗುವುದರಿಂದ ಹೃದಯ ಸ್ನಾಯು ಸಾಕಷ್ಟು ರಕ್ತ ಮತ್ತು ಆಮ್ಲಜನಕವನ್ನು ಪಡೆಯುವುದಿಲ್ಲ. ಮೂಲಗಳ ಪ್ರಕಾರ ಸಂಜಯ್ ಅವರ ತಾಯಿಯೊಂದಿಗೆ ಈ ರಿಪೋರ್ಟ್ ಹಂಚಿಕೊಳ್ಳಲಾಗಿತ್ತು. ಆದರೂ ಅವರು ಈ ರೀತಿಯ ಹೇಳಿಕೆಗಳನ್ನು ಬೇಕತಂಲೇ ನೀಡಲಾಗಿದೆ ಎಂದು ಪ್ರಿಯಾ ಹೇಳಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Fake Documents: ತಂದೆಯ ಆಸ್ತಿ ವಶಕ್ಕೆ ಪಡೆಯಲು ಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಕೆ; ಮುಖ್ತಾರ್ ಅನ್ಸಾರಿ ಪುತ್ರನ ಬಂಧನ
ಸಂಜಯ್ ಕಪೂರ್ ಇತ್ತೀಚೆಗೆ ಲಂಡನ್‌ನಲ್ಲಿ ಪೋಲೋ ಆಡುವ ವೇಳೆ ಸಾವನ್ನಪ್ಪಿದ್ದರು. ಈ ಹಿನ್ನೆಲೆ ರಾಣಿ ಕಪೂರ್ ಬ್ರಿಟನ್ ಪೊಲೀಸರಿಗೆ ಪತ್ರ ಬರೆದಿದ್ದು ಮಗನ ಸಾವಿನ ಹಿಂದೆ ಕೊಲೆಯ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ‘ಮಗನ ಕೊಲೆ ನಡೆದಿದೆ ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳಿವೆ. ಆತನ ಸಾವು ಅಕಸ್ಮಿಕವಲ್ಲ. ಕೊಲೆ ಪ್ರಚೋದನೆ, ವಂಚನೆ ಸೇರಿದಂತೆ ಅಪರಾಧ ಕೃತ್ಯಗಳನ್ನು ಒಳಗೊಂಡಿರಬಹುದು ಎಂದು ಹೇಳಿದ್ದರು. ಬ್ರಿಟನ್ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡು ಕ್ರಿಮಿನಲ್ ತನಿಖೆ ಪ್ರಾರಂಭಿಸಬೇಕು’ ಎಂದು ಮನವಿ ಮಾಡಿದ್ದರು.