ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darshan Fans: ರಮ್ಯಾ ಬಳಿಕ ಮತ್ತೊಬ್ಬ ಸೆಲೆಬ್ರಿಟಿಯನ್ನು ಟಾರ್ಗೆಟ್ ಮಾಡಿದ ದರ್ಶನ್ ಫ್ಯಾನ್ಸ್

ದರ್ಶನ್‌ ಅಭಿಮಾನಿಗಳು ಹಾಗೂ ನಟಿ ರಮ್ಯಾ ನಡುವಿನ ವಾರ್‌ ಜೋರಾಗಿರುವಾಗಲೇ ಮತ್ತೊಬ್ಬ ಸೆಲೆಬ್ರಿಟಿ ದರ್ಶನ್‌ ಅಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಇನ್ಸ್ಟಾಗ್ರಾಂನ ಇನ್ಲ್ಪುಯೆನ್ಸರ್‌ ಸೋನು ಶೆಟ್ಟಿಗೆ (Sonu Shetty) ಡಿ ಅಭಿಮಾನಿಗಳು ಅಶ್ಲೀಲವಾಗಿ ಕಮೆಂಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಸೋನು ವಿಡಿಯೋ ಒಂದನ್ನು ಮಾಡಿದ್ದಾರೆ.

ಬೆಂಗಳೂರು: ನಟ ದರ್ಶನ್‌ ಫ್ಯಾನ್ಸ್‌ (Darshan Fans) ಹಾಗೂ ರಮ್ಯಾ ಜಟಾಪಟಿ ನಡೆಯುತ್ತಲೇ ಇದೆ. ಅಶ್ಲೀಲ ಕಮೆಂಟ್‌ ಮಾಡಿದ ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ (Actress Ramya) ಸಮರ ಸಾರಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿರುವಾಗಲೇ ಇನ್ಸ್ಟಾಗ್ರಾಂನ ಇನ್ಲ್ಪುಯೆನ್ಸರ್‌ ಒಬ್ಬರು ದರ್ಶನ್‌ ಫ್ಯಾನ್ಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಡಿಜಿಟಲ್ ಕ್ರಿಯೇಟರ್ ಹಾಗೂ ಕಿಚ್ಚನ ಅಭಿಮಾನಿ ಆಗಿರುವ ಸೋನು ಶೆಟ್ಟಿಗೆ ದರ್ಶನ್‌ ಫ್ಯಾನ್ಸ್‌ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂಬ ಆರೋಪವಿದೆ. ಆ ಕುರಿತು ವಿಡಿಯೋ ಮಾಡಿರುವ ಸೋನು ಶೆಟ್ಟಿ ಡಿ ಬಾಸ್‌ ಅಭಿಮಾನಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಈ ಮೊದಲಿನ ವಿಡಿಯೋದಲ್ಲಿ ಸೋನು ದರ್ಶನ್ ರೌಡಿ ಆಗ್ಬೇಕಿತ್ತು ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ದರ್ಶನ್‌ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್‌ ಮಾಡಿ ಅವರನ್ನು ನಿಂದಿಸಿದ್ದರು. ಅದಕ್ಕೆ ಕೌಂಟರ್‌ ಕೊಡಲು ಸೋನು ಮತ್ತೊಂದು ವಿಡಿಯೋವನ್ನು ಮಾಡಿದ್ದಾರೆ. ಅದರಲ್ಲಿ ಡಿ ಫ್ಯಾನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೌಡಿ ಫ್ಯಾನ್ಸ್‌ಗಳು ಕೂಡ ರೌಡಿಗಳೇ ಎಂದು ಹೇಳಿದ್ದಾರೆ.

ರೌಡಿ ಬಾಸ್ ಫ್ಯಾನ್ಸ್‌ಗಳು ಕೊಚ್ಚೆಗೆ ಸಮಾನ ಎಂದು ಸೋನು ನಿಂದಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾದಾಗ ಸೋನು ನೀವು ನನಗೆ ಏನೂ ಮಾಡಲು ಸಾಧ್ಯವಿಲ್ಲ. ನೀವು ನನ್ನ ಕಾಲಿನ ಧೂಳಿಗೂ ಸಮವಿಲ್ಲ, ನನಗೆ ಕಮೆಂಟ್‌ ಹಾಕುವ ಯೋಗ್ಯತೆ ಕೂಡ ನಿಮಗೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ಒಂದು ವಾರದಿಂದ ಸೋನು ವರ್ಸಸ್ ದರ್ಶನ್ ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Actress Ramya: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ 48 ಕಿಡಿಗೇಡಿಗಳ ಐಪಿ ಅಡ್ರೆಸ್ ಪತ್ತೆ, ಮುಂದಿದೆ ಮಾರಿಹಬ್ಬ!

ರಮ್ಯಾಗೆ ಕಮೆಂಟ್‌ ಮಾಡಿದವರ ಬಂಧನ

ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮತ್ತು ಬೆದರಿಕೆಯೊಡ್ಡಿದ್ದ ಆರೋಪಿಗಳನ್ನು ಹುಡುಕಿ ಬಂಧಿಸಲಾಗುತ್ತಿದೆ. ಈ ವರೆಗೆ ಒಟ್ಟು ಐವರನ್ನು ಪೊಲೀಸರು ಬಂಧಸಿದ್ದಾರೆ. ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ಜುಲೈ 28ರಂದು ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು. ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಮತ್ತು ವಿವಿಧ ಜಿಲ್ಲೆಗಳಲ್ಲಿರುವ ಖಾತೆಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.