ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿಗರೇ ಜುಲೈ 26ರಂದು ಕೃಷ್ಣ ಸಂಗೀತ ಸಂಜೆಯನ್ನು ಅನುಭವಿಸಲು ಸಿದ್ಧರಾಗಿ ..!

ಏಕಂ ಸತ್ ಫೌಂಡೇಶನ್‌ ಜೊತೆಗೂಡಿ ಎ ಡಿ ವೆಂಚರ್ಸ್ ಪ್ರೊಡಕ್ಷನ್‌ನಲ್ಲಿ, ಕೆಸ್ಟೋನ್‌ ಉತ್ಸವ ಕಾರ್ಯ ಕ್ರಮವನ್ನು ಆಯೋಜಿಸಿದೆ. ಈ ಸಂಗೀತ ಸಂಜೆ ಕೃಷ್ಣನ ಜೀವನ ಹಾಗೂ ತತ್ವಗಳನ್ನು ಪ್ರಸ್ತುತ ಪಡಿಸಲಿದೆ. ಉತ್ತಮ ಸಂಗೀತ, ಕಥಾ ವಿಸ್ತಾರ, ತತ್ವಗಳ ಪಾಠದ ಮೂಲಕ ಭಗವಾನ್ ಕೃಷ್ಣನನ್ನ ಕಲಾವಿದನಾಗಿ, ಯೋಧನಾಗಿ , ಚಿಂತಕನಾಗಿ ಹಾಗೂ ಉತ್ತಮ ಮಾರ್ಗದರ್ಶಕನನ್ನಾಗಿ ಈ ಕಾರ್ಯಕ್ರಮ ಕೃಷ್ಣನ ಜೀವನವನ್ನ ತೆರೆದಿಡಲಿದೆ.

ಇಂದೋರ್, ಹೈದರಾಬಾದ್ , ಮುಂಬೈ ಹಾಗೂ ಪುಣೆಯಲ್ಲಿ ಯಶಸ್ವಿ ಕಾರ್ಯಕ್ರಮದ ಬಳಿಕ ಕೃಷ್ಣ- ಮ್ಯೂಸಿಕ್, ಬ್ಲಿಸ್ ಆಂಡ್ ಬಿಯಾಂಡ್ ತಂಡ ಸಂಗೀತದ ಔತಣ ನೀಡಲು ಬೆಂಗಳೂರಿಗೆ ಬರುತ್ತಿದೆ. ಈ ರಸಮಯ ಸಂಗೀತ ಕಾರ್ಯಕ್ರಮ ವೈಟ್‌ಫೀಲ್ಡ್‌ನ, ಕಾವೇರಿ ನಗರದ ಎಮ್‌ಎಲ್‌ಆರ್ ಕನ್ವೆನ್ಶನ್ ಸೆಂಟರ್‍‌ನಲ್ಲಿ ಜು.26 ಸಂಜೆ 4 ಗಂಟೆಗೆ ನಡೆಯಲಿದೆ.

ಏಕಂ ಸತ್ ಫೌಂಡೇಶನ್‌ ಜೊತೆಗೂಡಿ ಎ ಡಿ ವೆಂಚರ್ಸ್ ಪ್ರೊಡಕ್ಷನ್‌ನಲ್ಲಿ, ಕೆಸ್ಟೋನ್‌ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂಗೀತ ಸಂಜೆ ಕೃಷ್ಣನ ಜೀವನ ಹಾಗೂ ತತ್ವಗಳನ್ನು ಪ್ರಸ್ತುತಪಡಿಸಲಿದೆ. ಉತ್ತಮ ಸಂಗೀತ, ಕಥಾ ವಿಸ್ತಾರ, ತತ್ವಗಳ ಪಾಠದ ಮೂಲಕ ಭಗವಾನ್ ಕೃಷ್ಣನನ್ನ ಕಲಾವಿದನಾಗಿ, ಯೋಧನಾಗಿ , ಚಿಂತಕನಾಗಿ ಹಾಗೂ ಉತ್ತಮ ಮಾರ್ಗದರ್ಶಕನನ್ನಾಗಿ ಈ ಕಾರ್ಯಕ್ರಮ ಕೃಷ್ಣನ ಜೀವನವನ್ನ ತೆರೆದಿಡಲಿದೆ. ಗಾಯಕ ಅಮೇಯಾ ಡಬ್ಲಿ ಆಧ್ಯಾತ್ಮ ಮತ್ತು ಸಂಗೀತವನ್ನು ಒಂದುಗೂಡಿಸಿ ಕೇಳುಗರನ್ನ ಭಕ್ತಿಯ ಪಥದಲ್ಲಿ ನಡೆಸಲಿದ್ದಾರೆ.

ಇದನ್ನೂ ಓದಿ: Fathers Day Movie: ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

ಈ ಮಾಂತ್ರಿಕ ಸಂಜೆಯನ್ನು ವಿಶ್ವದಾದ್ಯಂತ 4,000 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿರುವ ವಿಶ್ವ ಪ್ರಸಿದ್ಧ ಗಾಯಕ ಅಮೇಯಾ ಡಬ್ಲಿ ಅವರೊಂದಿಗೆ ಮುನ್ನಡೆಸುತ್ತಿದ್ದಾರೆ. ಅವರು ಎ.ಆರ್. ರೆಹಮಾನ್, ಉಸ್ತಾದ್ ಜಾಕಿರ್ ಹುಸೇನ್, ಸಲೀಂ–ಸುಲೈಮಾನ್ ಮತ್ತು ಶಾನ್ ಅವರಂತಹ ದಂತಕಥೆಗಳೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.

ಈಗ ಅವರು ಕೃಷ್ಣನ ದೈವಿಕ ಸಂಗೀತವನ್ನು ಬೆಂಗಳೂರಿಗೆ ತರುತ್ತಿದ್ದಾರೆ. ಅವರ ಹಾಡುಗಳು ಸುಂದರವಾಗಿ ಧ್ವನಿಸುವುದಲ್ಲದೆ - ಅವು ನಿಮ್ಮೊಳಗೆ ಶಾಂತಿಯುತ ಮತ್ತು ಶಕ್ತಿಯುತವಾದ ಭಾವನೆ ಯನ್ನು ಸೃಷ್ಟಿಸುತ್ತವೆ. ಅವರ ಹಾಡುಗಳನ್ನು ಕೇಳುವುದು ಮಾನಸಿಕ ಚಿಕಿತ್ಸೆಯಂತೆ ಭಾಸವಾಗು ತ್ತದೆ, ನಿಮ್ಮನ್ನು ಶಾಂತತೆ, ಭಕ್ತಿ ಮತ್ತು ಪ್ರೇರಣೆಯಿಂದ ತುಂಬುತ್ತದೆ.

ಈ ವಿಶೇಷ ಸಂಗೀತ ಸಂಜೆಯೊಂದನ್ನು ತಪ್ಪಿಸಿಕೊಳ್ಳಬೇಡಿ.

"ಕೃಷ್ಣಾ – ಮ್ಯೂಸಿಕ್, ಬ್ಲಿಸ್ & ಬಿಯಾಂಡ್" ನ ಮಧುರ ಗಾಯನದೊಂದಿಗೆ ಬೆಂಗಳೂರು ಭಕ್ತಿ ಯಲ್ಲಿ ತುಡಿಯಲಿ!