ಮುಂಬೈ: ತಮಿಳು ನಟ ಧನುಷ್ (Dhanush) ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ (Mrunal Thakur) ಡೇಟಿಂಗ್ ನಡೆಸುತ್ತಿದ್ದಾರೆ, ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇವರಿಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಗಾಳಿಸುದ್ದಿ ಹರಡಿದೆ. ನಟಿ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಧನುಷ್ ಕೂಡ ಭಾಗಿಯಾಗಿದ್ದರು. ಈ ಪಾರ್ಟಿಯ ವಿಡಿಯೊವೊಂದರಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿ ಕೊಂಡಿರುವುದು ಸೆರೆಯಾಗಿದೆ. ಇದೀಗ ಈ ಜೋಡಿ ಲವ್‌ನಲ್ಲಿರುವುದು ಖಚಿತ ಎಂಬ ಟಾಕ್ ಬಹಳ ಜೋರಾಗಿ ಸೌಂಡು ಮಾಡುತ್ತಿದೆ. ಧನುಷ್-ಮೃಣಾಲ್ ಜೋಡಿಯ ಡೇಟಿಂಗ್‌ಗೆ ಸಂಬಂಧಿಸಿದಂತೆ ನೆಟ್ಟಿಗರು ಒಂದಷ್ಟು ಸಾಕ್ಷಿಗಳನ್ನು ಕೂಡ ಕಂಡು ಕೊಂಡಿದ್ದಾರೆಕಲೆ ಹಾಕಿದ್ದಾರೆ. ಈ ನಡುವೆ ಧನುಷ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಒಂದು ಪೋಸ್ಟ್ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಸಿನಿಮಾ ಜತೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿರುವ ಧನುಷ್ "ಆಕಸ್ಮಿಕ ಮ್ಯಾಜಿಕ್ ಅತ್ಯುತ್ತಮ ಸೃಷ್ಟಿ" ಎಂಬ ಕ್ಯಾಪ್ಶನ್‌ನೊಂದಿಗೆ ಸಮುದ್ರ ತೀರದ ಸುಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಮೃಣಾಲ್ ಠಾಕೂರ್ ಲೈಕ್ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಜತೆಗೆ ಮೃಣಾಲ್ ಧನುಷ್ ಅವರ ಸಹೋದರಿಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ ವಿಚಾರ ಕೂಡ ಈ ಗಾಸಿಪ್‌ಗೆ ಮತ್ತಷ್ಟು ಸಾಕ್ಷಿ ನೀಡಿದಂತಾಗಿದೆ.
ಇತ್ತೀಚೆಗಷ್ಟೇ ನಡೆದ ಮೃಣಾಲ್ ಠಾಕೂರ್ ನಟನೆಯ ʼಸನ್ ಆಫ್ ಸರ್ದಾರ್ 2ʼ ಬಾಲಿವುಡ್ ಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಧನುಷ್ ಹಾಜರಿದ್ದರು. ಈ ವೇಳೆ ಅವರು ಮೃಣಾಲ್ ಜತೆಗೆ ಆತ್ಮೀಯವಾಗಿ ಹರಟೆ ಹೊಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಧನುಷ್ ನಟನೆಯ ಬಹುನಿರೀಕ್ಷಿತ 'ತೇರೆ ಇಷ್ಕ್ ಮೇ' ಚಿತ್ರಕ್ಕೆ ಸಂಬಂಧಿಸಿದ ಸಮಾರಂಭದಲ್ಲಿ ಮೃಣಾಲ್ ಕೂಡ ಭಾಗಿಯಾಗಿದ್ದರು. ಈ ವಿಚಾರಗಳೂ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಕಾರಣವಾದವು. ಮೃಣಾಲ್ ಈ ವದಂತಿಗಳ ಬಗ್ಗೆ ಪ್ರತಿಕ್ರಿ ಯಿಸಿದ್ದು, ಅವುಗಳನ್ನು ಹಾಸ್ಯಾಸ್ಪದವೆಂದು ತಳ್ಳಿ ಹಾಕಿದ್ದಾರೆ.
ಇದನ್ನು ಓದಿ:Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ಟೈಟಲ್ ಸಾಂಗ್ ಔಟ್: ಸೆ.12ಕ್ಕೆ ಚಿತ್ರ ರಿಲೀಸ್
ಸಂದರ್ಶನವೊಂದರಲ್ಲಿ ಧನುಷ್ ಕೇವಲ "ಒಳ್ಳೆಯ ಸ್ನೇಹಿತ" ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, 'ಸನ್ ಆಫ್ ಸರ್ದಾರ್ 2' ಕಾರ್ಯಕ್ರಮಕ್ಕೆ ಧನುಷ್ ಅವರನ್ನು ತಾನು ಆಹ್ವಾನಿಸಿಲ್ಲ, ಬದ ಲಿಗೆ ಅಜಯ್ ದೇವಗನ್ ಅವರು ಆಹ್ವಾನಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮೃಣಾಲ್ ಈ ಗಾಸಿಪ್ ಅನ್ನು ನಿರಾಕರಿಸಿದರೆ, ಇನ್ನೊಂದು ಮೂಲದ ಪ್ರಕಾರ ಇಬ್ಬರೂ ನಿಜವಾಗಿಯೂ ಡೇಟಿಂಗ್‌ನಲ್ಲಿದ್ದಾರೆ. ಆದರೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಲು ಅವರು ಸಿದ್ಧರಿಲ್ಲ ಎಂದು ಹೇಳಾಗುತ್ತಿದೆ. ಧನುಷ್ ಅವರು ತಮ್ಮ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರಿಂದ 2024ರ ನವೆಂಬರ್‌ನಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ಮೃಣಾಲ್ ಈ ಹಿಂದೆ ರಾಪರ್ ಬಾದ್‌ಶಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದು ಅದನ್ನು ನಿರಾಕರಿಸಿದ್ದರು.