ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ದಿಶಾ ಪಠಾನಿ (Disha Patani) ಕೂಡ ಒಬ್ಬರು. ಲುಗು ಸಿನಿಮಾ 'ಲೋಫರ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಳಿಕ ಬಾಲಿವುಡ್ ಗಟ್ಟಿಯಾಇ ನೆಲೆಯೂರಿದ್ದಾರೆ. 'ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ', 'ಬಾಘಿ 2', 'ಭಾರತ್' ಹಿಂದಿ ಸಿನಿಮಾ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಫೋಟೊ, ವಿಡಿಯೊಳನ್ನು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಬಾರಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರ 'ದಿಲ್ ಸೇ' ಸಿನಿಮಾದ ಜಿಯಾ ಜಲೆ ಹಾಡಿಗೆ ಅದ್ಭುತವಾಗಿ ಖುರ್ಚಿಯ ಮೇಲೆ ನಿಂತು ನೃತ್ಯ ಮಾಡಿದ್ದು ಅವರ ವಿಡಿಯೊ ಸದ್ಯ ವೈರಲ್ ಆಗುತ್ತಿದೆ.
ದಿಶಾ ಪಠಾನಿ ತಮ್ಮ ದಿನನಿತ್ಯದ ಲೈಫ್ ಸ್ಟೈಲ್ ಜರ್ನಿ ಕುರಿತು ಆಗಾಗ ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ. ವರ್ಕೌಟ್, ಡಯೆಟ್ ಪ್ಲ್ಯಾನ್, ಫಿಟ್‌ನೆಸ್, ಫುಡ್ ಸ್ಟೈಲ್, ಡ್ರೆಸ್ಸಿಂಗ್ ಕಾಂಬಿ ನೇಶನ್‌ನ ಫೋಟೊಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅಭಿಮಾನಿಗಳನ್ನು ರಂಜಿ ಸುವ ಉದ್ದೇಶದಿಂದ ಕುರ್ಚಿಯ ಮೇಲೆ ಡ್ಯಾನ್ಸ್ ಮಾಡಿದ್ದ ವಿಡಿಯೊವನ್ನು ಹಂಚಿಕೊಂಡಿದ್ದು ವೀಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಶಾರುಖ್ ಖಾನ್ ಅವರ ಐಕಾನಿಕ್ ಹಾಡಿಗೆ ದಿಶಾ ಸಖತ್ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದಾರೆ. ವೈರಲ್ ವಿಡಿಯೊದಲ್ಲಿ ಅವರು ಬ್ಲ್ಯಾಕ್ ಕಲರ್ ಔಟ್ ಫಿಟ್‌ನಲ್ಲಿ ಬೋಲ್ಡ್ ಆಗಿ ಕಂಡಿದ್ದಾರೆ. ಇದು ಜಿಮ್ ಮಾಡುವ ವರ್ಕೌಟ್‌ನ ಸ್ಥಳವಾಗಿದ್ದು ಚೇರ್ ಅನ್ನು ಬಳಸಿ ನಟಿ ದಿಶಾ ಸೊಗಸಾಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲ ಬಾರಿಗೆ ಇದನ್ನು ಪ್ರಯತ್ನಿಸುತ್ತಿದ್ದೇನೆ, ಈ ಅಭ್ಯಾಸವನ್ನು ನಾನು ಮುಂದುವರಿಸುತ್ತೇನೆ ಎಂದು ಬರೆದಿದ್ದಾರೆ.
ದಿಶಾ ಅವರ ಗೆಳತಿ, ನಟಿ ಮೌನಿ ರಾಯ್ ಈ ಡ್ಯಾನ್ಸ್ ವಿಡಿಯೊಕ್ಕೆ ಆಶ್ಚರ್ಯ ಚಕಿತರಾದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ವಾವ್ ಎಂದು ಫೈರ್ ಇಮೋಜಿಗಳೊಂದಿಗೆ ಕಾಮೆಂಟ್ ಮಾಡಿ ದ್ದಾರೆ. ಟೈಗರ್ ಶ್ರಾಫ್ ಅವರ ತಾಯಿ ಆಯೇಷಾ ಶ್ರಾಫ್ ಕೂಡ ರೆಡ್ ಹಾರ್ಟ್ ಮತ್ತು ಫೈರ್ ಇಮೋಜಿಗಳನ್ನು ನೀಡಿ ಪ್ರತಿಕ್ರಿಯಿಸಿದ್ದಾರೆ. ನೀವು ಅದ್ಭುತ ನಟಿ ಮಾತ್ರವಲ್ಲ ದಿ ಬೆಸ್ಟ್ ಡ್ಯಾನ್ಸರ್ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.
ಇದನ್ನು ಓದಿ:Hikora Movie: ನೀನಾಸಂ ಕಿಟ್ಟಿ ನಿರ್ದೇಶಿಸಿ, ನಟಿಸಿರುವ ʼಹಿಕೋರಾʼ ಚಿತ್ರದ ಟ್ರೇಲರ್ ಔಟ್
ದಿಶಾ ಪಠಾನಿ ಅವರು ಇತ್ತೀಚೆಗಷ್ಟೇ ಒಂದು ಸಂದರ್ಶನದಲ್ಲಿ ನೃತ್ಯದ ಮೇಲಿನ ತನ್ನ ಅಸಕ್ತಿ ಬಗ್ಗೆ ಮಾತನಾಡಿದ್ದರು. ನನಗೆ ಡ್ಯಾನ್ಸ್ ಮಾಡುವುದು ಇಷ್ಟ. ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಪಡೆಯಲು ಸಾಧ್ಯ. ಡ್ಯಾನ್ಸ್ ಮಾಡುದರಿಂದ ನನ್ನ ದೇಹದ ಪ್ರತಿಯೊಂದು ಭಾಗವು ಚೈತನ್ಯದಾಯಕವಾಗಿದೆ ಎಂದು ಹೇಳಿದ್ದರು.
ಸದ್ಯ ಇವರು 'ವೆಲ್ಕಮ್ ಟು ದಿ ಜಂಗಲ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ರವೀನಾ ಟಂಡನ್, ಸುನೀಲ್ ಶೆಟ್ಟಿ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್, ತ್ರಿಪ್ತಿ ಡಿಮ್ರಿ ಮತ್ತು ನಾನಾ ಪಾಟೇಕರ್ ನಟಿಸಿರುವ ವಿಶಾಲ್ ಭಾರದ್ವಾಜ್ ಅವರ ಮುಂಬರುವ ಥ್ರಿಲ್ಲರ್ ಚಿತ್ರದಲ್ಲಿ ಕೂಡ ನಟಿ ದಿಶಾ ಅವರು ಅತಿಥಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.