ನವದೆಹಲಿ: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಂತಾರ (Kantara: Chapter 1) ಸಿನಿಮಾ ದೊಡ್ಡ ಮಟ್ಟಿಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿದೆ. 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾಕ್ಕೆ ಅಷ್ಟು ಪ್ರಚಾರ ನೀಡದಿದ್ದರು ಜನರೇ ಅದನ್ನು ಮೆಚ್ಚಿಕೊಂಡು ಪ್ಯಾನ್ ಇಂಡಿಯಾ ಮಟ್ಟದ ತನಕವು ಕರೆದೊಯ್ದಿದ್ದರು. ಇದೀಗ ಅದರ ಪ್ರಿಕ್ವೆಲ್ ಭಾಗವಾದ ಕಾಂತಾರ ಚಾಪ್ಟರ್ 1 ಸಿನಿಮಾ ಕನ್ನಡವು ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ನಟ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ನಾಳೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಈಗಾಗಲೇ ಬಹುತೇಕ ಕಡೆಯಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಸಿನಿಮಾ ಟ್ರೇಲರ್, ಹಾಡು ಮತ್ತು ಅದ್ಧೂರಿ ಪ್ರಚಾರಗಳು ಸಿನಿಮಾದ ಬಗ್ಗೆ ಜನರಿಗೆ ಕುತೂಹಲ ಮೂಡಿಸುತ್ತಿದೆ. ಹೀಗಾಗಿ ಸಿನಿಮಾ ರಿಲೀಸ್ ದಿನವೇ ಚಿತ್ರ ನೋಡಬೇಕು ಎಂದುಕೊಂಡವರು ಟಿಕೆಟ್ ಬುಕ್ ಮಾಡಲು ಹೊರಟಿರುವವರಿಗೆ ಶಾಕ್ ಎದುರಾಗಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ 7ಕ್ಕೂ ಅಧಿಕ ಭಾಷೆಗಳಲ್ಲಿರುವ ಈ ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಬೆಂಗಳೂರಿನಲ್ಲಿ ಟಿಕೆಟ್ ದರ 1200ರ ತನಕ ನಿಗಧಿಯಾಗಿದ್ದು ಸಿನಿ ಪ್ರಿಯರಿಗೆ ಬೇಸರ ತರಿಸಿದೆ. ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ದುಬಾರಿ ಮೊತ್ತ ನಿಗದಿ ಮಾಡಿದ್ದರೂ ಕೂಡ ಶೋಗಳ ಎಲ್ಲ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಈ ಸಿನಿಮಾ ದೇಶ ವಿದೇಶದಾದ್ಯಂತ ರಿಲೀಸ್ ಮಾಡಲಾಗುತ್ತಿದ್ದು 6500ರಿಂದ 7000 ಪರದೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡದ ಚಿತ್ರವು ಇಷ್ಟೊಂದು ಸ್ಕ್ರೀನ್‌ಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಯಾಗುತ್ತಿರುವುದು ಇದೆ ಮೊದಲೆಂದು ಹೇಳಬಹುದು.
ಕಾಂತಾರ ಚಾಪ್ಟರ್ 1 ಸಿನಿಮಾ ರಾಜ್ಯದ ಹಲವೆಡೆ ಬೆಳಗ್ಗೆ 6.30ರಿಂದಲೇ ಪ್ರದರ್ಶನ ಕಾಣಲಿದೆ. 2000ಕ್ಕೂ ಅಧಿಕ ಶೋಗಳು ನಡೆಯಲಿದ್ದು ಸಿನಿಮಾ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿ ಕೇವಲ 34 ನಿಮಿಷದಲ್ಲೇ 10 ಸಾವಿರ ಟಿಕೆಟ್‌ಗಳು ಬುಕ್ ಆಗಿದ್ದು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಟಿಕೆಟ್ ಖರೀದಿಸಲ್ಪಟ್ಟ ಮೊದಲ ಕನ್ನಡ ಸಿನಿಮಾ ಇದಾಗಿದೆ. ದೇಶಾದ್ಯಂತ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್‌ನಿಂದಲೇ 11 ಕೋಟಿ ರೂಪಾಯಿ ಗಳಿಸಿದೆ. ಪಿವಿಆರ್, ಐನಾಕ್ಸ್‌ಗಳಲ್ಲಿ ಮೊದಲ 4 ದಿನಗಳಿಗೆ ದೇಶಾದ್ಯಂತ ಒಟ್ಟು 3 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕಿಂಗ್ ಆಗಿವೆ.
ಇದನ್ನೂ ಓದಿ: Kantara Chapter 1 Movie: ʼಕಾಂತಾರ: ಚಾಪ್ಟರ್ 1ʼ ಚಿತ್ರ ಯಾಕಾಗಿ ನೋಡಬೇಕು? ಇಲ್ಲಿದೆ 5 ಕಾರಣಗಳು
ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ನಿಂದಾಗಿ 3 ಕೋಟಿ ರೂಪಾಯಿಗಳನ್ನು ಚಿತ್ರವು ಕಲೆಕ್ಷನ್ ಮಾಡಿದೆ, ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಅಮೇರಿಕಾದಲ್ಲಿ 'ಕಾಂತಾರ 1' ಸಿನಿಮಾ ಒಟ್ಟು 80 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ. ಬಳಿಕ ರಾಷ್ಟ್ರೀಯ ಮತ್ತು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಸಿನಿಮಾ 1000 ಕಲೆಕ್ಷನ್ ಗಳ ಹೊಸ ದಾಖಲೆ ಮಾಡುವ ನಿರೀಕ್ಷೆ ಇದೆ.
ಆಂಧ್ರದಲ್ಲಿ ಕಾಂತಾರ ಸಿನಿಮಾಕ್ಕೆ ಬಾಯ್ಕಾಟ್ ಭೀತಿ ಎದುರಾಗಿದ್ದು ದುಬಾರಿ ಮೊತ್ತಕ್ಜೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅವರು ಚಿತ್ರದ ಪರವಾಗಿ ಧ್ವನಿ ಎತ್ತಿ, 'ಕನ್ನಡ ಸಿನಿಮಾಗಳಿಗೆ ನಾವು ತೊಂದರೆ ಕೊಡಬಾರದು. ರಾಷ್ಟ್ರೀಯ ಭಾವನೆಯಿಂದ ಸಿನಿಮಾ ನೋಡಬೇಕು. ಕನ್ನಡದ ಎಲ್ಲ ಮೇರುನಟರ ಸಿನಿಮಾಕ್ಕೆ ತೆಲುಗು ಜನರು ಬೆಂಬಲ ನೀಡಿದ್ದಾರೆ ಎನ್ನುವ ಮೂಲಕ ಸಿನಿಮಾವನ್ನು ಬೆಂಬಲಿಸಿದ್ದಾರೆ.